'ರೈತರಿಗಾಗಿ ಒಂದು ದಿನ': ಧಾರವಾಡದ ಸಿದ್ದಪ್ಪ ಕಾನೂನು ವಿದ್ಯಾರ್ಥಿಗಳಿಂದ ವಿಶೇಷ ಸಾಂಪ್ರದಾಯಿಕ ದಿನ - traditional day - TRADITIONAL DAY
🎬 Watch Now: Feature Video
Published : Aug 2, 2024, 9:45 AM IST
ಧಾರವಾಡ: ನಿತ್ಯ ಆಟ ಪಾಠದ ಜೊತೆ ಮಾತ್ರ ಕಾಲ ಕಳೆಯುತ್ತಿದ್ದ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನ ಆಚರಣೆ ಮಾಡಿ ದೇಸಿ ಉಡುಗೆ - ತೊಡುಗೆಯಲ್ಲಿ ಮಿಂಚಿದ್ದಾರೆ. ಮೂಗುತಿ, ಕಿವಿಯೋಲೆ, ಸರ ಹಾಕಿಕೊಂಡಿರುವ ವಿದ್ಯಾರ್ಥಿನಿಯರು, ಶರ್ಟು, ಪಂಚೆ ತೊಟ್ಟು ಆಗಮಿಸಿದ್ದರು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನಲ್ಲಿ.
ಗುರುವಾರ ತರಗತಿ ಬದಿಗಿಟ್ಟು ಎಲ್ಲಾ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡರು. ಕಾಲೇಜಿನಲ್ಲಿ ಗಣಪತಿ ಪೂಜೆ ಮಾಡಿ, ಕಾಲೇಜು ಮುಂಭಾಗದಲ್ಲಿ ತಳಿರು, ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕಾರ ಮಾಡಿದ್ದರು. ಒಬ್ಬರಿಗಿಂತ ಮತ್ತೊಬ್ಬರು ಗಮನ ಸೆಳೆಯುವ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನಸೆಳೆದರು. ಕಾಲೇಜಿನಲ್ಲಿ ಟ್ರ್ಯಾಕ್ಟರ್ ಮತ್ತು ಎತ್ತು ಚಕ್ಕಡಿಯನ್ನೂ ತೆಗೆದುಕೊಂಡು ಬಂದಿದ್ದ ವಿದ್ಯಾರ್ಥಿಗಳು ಅವುಗಳಲ್ಲಿ ಕುಳಿತು ಒಂದು ಸುತ್ತು ಹಾಕಿದರು. ಈ ದಿನವನ್ನು ರೈತರಿಗಾಗಿ ವಿದ್ಯಾರ್ಥಿಗಳು ಸಮರ್ಪಿಸಿದ್ದು, ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ರಾಮನಗರ: ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭೀಮನ ಅಮಾವಾಸ್ಯೆ - Gowdagere Chamundeshwari Temple