ಬೆಚ್ಚಿಬೀಳಿಸುವ ಚಿರತೆ ದಾಳಿಯ ಲೈವ್ ವಿಡಿಯೋ: ಭಯಾನಕ ದೃಶ್ಯ ಕಂಡು ಆತಂಕಗೊಂಡ ಜನ - Live video of leopard attack - LIVE VIDEO OF LEOPARD ATTACK
🎬 Watch Now: Feature Video
Published : Jun 22, 2024, 1:26 PM IST
ಪೌರಿ (ಉತ್ತರಾಖಂಡ): ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ಮನುಷ್ಯರು ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಪರಸ್ಪರ ಘರ್ಷಣೆಯಲ್ಲಿ ಮಾನವನ ಜೀವನವು ಹೆಚ್ಚು ಅಪಾಯಕ್ಕೆ ಸಿಲುಕಿದೆ. ಪೌರಿ ಜಿಲ್ಲೆಯ ಫರ್ಸಾದಿ ಪ್ರದೇಶದಲ್ಲಿ ಚಿರತೆ ಮತ್ತು ಮನುಷ್ಯರ ನಡುವೆ ಸಂಘರ್ಷ ಕಂಡುಬಂದಿದೆ.
ಫರ್ಸಾದಿ ಪ್ರದೇಶದಲ್ಲಿ ಪೊದೆಗಳ ಮಧ್ಯೆ ಚಿರತೆಯೊಂದು ಕುಳಿತಿತ್ತು. ಆಗ ಅಲ್ಲಿದ್ದ ಕೆಲ ಯುವಕರ ಕಣ್ಣಿಗೆ ಚಿರತೆ ಬಿದ್ದಿದೆ. ಪೊದೆಯಲ್ಲಿ ಕುಳಿತಿದ್ದ ಚಿರತೆಯನ್ನು ಓಡಿಸಲು ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಯುವಕನೊಬ್ಬ ಕಲ್ಲು ಎಸೆಯುತ್ತಾ ಆ ಚಿರತೆಯ ಸಮೀಪಕ್ಕೆ ಹೋಗಿದ್ದಾನೆ. ಇದ್ದಕ್ಕಿದ್ದಂತೆ ಚಿರತೆ ಕೂಡ ಪೊದೆಯಿಂದ ಹೊರಗೆ ಬಂದು ಮಿಂಚಿನ ವೇಗದಲ್ಲಿ ಯುವಕನ ಮೇಲೆ ದಾಳಿ ನಡೆಸಿದೆ. ಯುವಕ ಮೇಲೆ ಚಿರತೆ ಜಿಗಿದಿದ್ದು, ಯುವಕ ನೆಲೆದ ಮೇಲೆ ಬಿದ್ದಿದ್ದಾನೆ. ಆದರೆ, ಅಲ್ಲಿದ್ದ ಬೇರೆ ಯುವಕರು ಧೈರ್ಯ ಮಾಡಿ ಚಿರತೆಯನ್ನು ಓಡಿಸಿದ್ದಾರೆ. ಈ ವೇಳೆ ಜನರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಪೌರಿಯಲ್ಲಿ ಚಿರತೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಚಿರತೆ ಹಲವರ ಮೇಲೆ ದಾಳಿ ನಡೆಸಿ ಹಲವರಿಗೆ ಗಾಯಗೊಳಿಸಿದೆ. ಈ ವರ್ಷದ ಫೆಬ್ರವರಿ 22ರಂದು ಪೌರಿ ಜಿಲ್ಲೆಯ ಶ್ರೀನಗರದ ಚೌರಾಸ್ ಪ್ರದೇಶದಲ್ಲಿ ಚಿರತೆ ಒಂದೇ ದಿನದಲ್ಲಿ 9 ಜನರ ಮೇಲೆ ದಾಳಿ ನಡೆಸಿತ್ತು. ಈ ಘಟನೆ ಪ್ರದೇಶದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆಗ ಚಿರತೆ ದಾಳಿಯಿಂದ ಐವರು ಮಹಿಳೆಯರು ಹಾಗೂ ನಾಲ್ವರು ಅರಣ್ಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿ ನಡೆಸಿದ ಚಿರತೆಯನ್ನು ಸಹ ನಂತರ ಕೊಲ್ಲಲಾಗಿತ್ತು. ಶ್ರೀನಗರದಲ್ಲಿ 4 ತಿಂಗಳೊಳಗೆ ಚಿರತೆ 5 ಮಕ್ಕಳ ಮೇಲೆ ಹಲ್ಲೆ ನಡೆಸಿತ್ತು. ಈ ಪೈಕಿ 3 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್ಪಾತ್ಗೆ ನುಗ್ಗಿದ ಗೂಡ್ಸ್ ವಾಹನ: ಸಿಸಿಟಿವಿ ದೃಶ್ಯ - Goods Vehicle Accident