ETV Bharat / technology

ಹೊಳೆಯುವ ಶುಕ್ರ ಶುಷ್ಕವಾಗಿರಲು ಕಾರಣ ಏನು ಎಂಬುದಕ್ಕೆ ಸಿಕ್ತು ಉತ್ತರ; ಈ ಹಿಂದೆ ಶುಕ್ರನಲ್ಲಿ ಇತ್ತಾ ನೀರು? - Why is Venus dont have water - WHY IS VENUS DONT HAVE WATER

ಶುಕ್ರನಲ್ಲಿ ನೀರಿತ್ತಾ, ಅಲ್ಲಿ ಅದಕ್ಕೆ ಪೂರಕ ವಾತಾವರಣ ಇದೆಯಾ ಎಂಬ ಕುರಿತು ಈ ಅಧ್ಯಯನದಲ್ಲಿ ತಿಳಿಸಲಾಗಿದೆ.

why-is-venus-dont-have-water-the-story-of-water-in-venus
why-is-venus-dont-have-water-the-story-of-water-in-venus (File photo)
author img

By ETV Bharat Karnataka Team

Published : May 8, 2024, 4:59 PM IST

ನವದೆಹಲಿ: ಭೂಮಿಯ ಪಕ್ಕದಲ್ಲಿ ಹಾಗೂ ಸೂರ್ಯನಿಗೆ ತೀರಾ ಹತ್ತಿರವಿರುವ ಗ್ರಹ ಎಂದರೆ ಅದು ಶುಕ್ರ ಗ್ರಹ. ಈ ಶುಕ್ರ ಶುಷ್ಕ(ಒಣ)ವಾಗಿರುವ ಕಾರಣವನ್ನು ಅಮೆರಿಕ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಶುಕ್ರ ನೀರಿಲ್ಲದೇ ಒಣ ಒಣವಾಗಿ ಇರಲು ಕಾರಣ ಅಲ್ಲಿ ನೀರು ರೂಪುಗೊಳ್ಳಲು ಅಗತ್ಯವಾಗಿರುವ ಎರಡು ಅಂಶಗಳು ಇಲ್ಲದೇ ಇರುವುದೇ ಆಗಿದೆ. ನೀರಿಗೆ ಅಗತ್ಯವಾಗಿ ಬೇಕಾಗಿರುವ ವಾತಾವರಣದಲ್ಲಿರುವ ಜಲಜನಕವೂ ಅಲ್ಲಿಲ್ಲ. ಜೊತೆಗೆ ಆಮ್ಲಜನಕಕ್ಕೆ ಪೂರಕ ಅಂಶಗಳು ಇಲ್ಲ ಎಂದಿದ್ದಾರೆ.

ಭೂಮಿಯ ಮೇಲಿನ ಎಲ್ಲ ನೀರನ್ನು ಸಂಗ್ರಹಿಸಿ ಹರಡಿದರೆ 3 ಕಿಮೀ ಆಳದ ನೀರಿನ ಪದರ ರೂಪುಗೊಳ್ಳುತ್ತದೆ. ಇದೇ ರೀತಿ ನಾವು ಶುಕ್ರನಲ್ಲಿ ಮಾಡಿದರೆ ಆ ಎಲ್ಲ ನೀರು ತಕ್ಷಣವೇ ಆವಿಯಾಗುತ್ತದೆ. ಕೇವಲ 3 ಸೆ.ಮೀ ಆಳದ ಪದರದಲ್ಲಿ ಮಾತ್ರ ನೀರು ರೂಪುಗೊಳ್ಳುತ್ತದೆ ಎಂದು ಅಧ್ಯಯನದಲ್ಲಿ ಭಾಗಿಯಾದ ಎರಿನ್​ ಕಂಗಿ ತಿಳಿಸಿದ್ದಾರೆ. ಸದ್ಯ ಶುಕ್ರನ ಮೇಲಿರುವ ವಾತಾವರಣ ಒಣೆವಾಗಿದ್ದರೂ, ಈ ಹಿಂದೆ ಪೂರಕ ವಾತವಾರಣ ಇತ್ತು ಎಂದಿದ್ದಾರೆ.

ಶುಕ್ರ ಗ್ರಹವೂ 100 ಮಿಲಿಯನ್​ ವರ್ಷಗಳ ಹಿಂದೆ ರೂಪುಗೊಂಡಿದೆ. ಇದು ಕೂಡ ಭೂಮಿಯಂತೆಯ ನೀರಿನ ಮಟ್ಟವನ್ನು ಹೊಂದಿತು. ಆದಾಗ್ಯೂ, ಇಂಗಾಲದ ಡೈ ಆಕ್ಸೈಡ್​​​ ಮೋಡಗಳು ವಾತವಾರಣದಲ್ಲಿದೆ. ಒಂದು ಹಂತದಲ್ಲಿ ಶಕ್ತಿಶಾಲಿ ಹಸಿರುಮನೆ ಪರಿಣಾಮವನ್ನು ಗ್ರಹ ಕಂಡಿದೆ. ಇದರಿಂದಾಗಿ ಗ್ರಹದ ತಾಪಮಾನ 500 ಡಿಗ್ರಿ ಸೆಲ್ಸಿಯಸ್​​ಗೆ ಹೆಚ್ಚಳ ಕಂಡಿತು. ಈ ಪರಿಣಾಮ ಅಲ್ಲಿದ್ದ ಎಲ್ಲ ನೀರು ಆವಿಯಾಗಿ, ಬಾಹ್ಯಕಾಶ ಸೇರಿದೆ. ಆದರೆ ಇಂದು ಶುಕ್ರ ಯಾಕೆ ಶುಷ್ಕಮಯವಾಗಿದ್ದಾನೆ. ಗ್ರಹವು ಇನ್ನೂ ನೀರನ್ನು ಏಕೆ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಯಾವುದೇ ವಿವರಣೆ ಸಿಕ್ಕಿಲ್ಲ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಹೊಸ ಅಧ್ಯಯನದಲ್ಲಿ, ಕಂಪ್ಯೂಟರ್​ ಸಿಮ್ಯೂಲೇಷನ್​ ಬಳಕೆ ಮಾಡಿ ಕೆಲ ನೈಜ ವಿಚಾರಗಳನ್ನು ಪತ್ತೆ ಮಾಡಿದ್ದೇವೆ. ಶುಕ್ರನಲ್ಲಿರುವ ಮೇಲ್ಭಾಗದ ವಾತಾವರಣದಲ್ಲಿ ಅಣುಗಳನ್ನು ಪತ್ತೆ ಮಾಡಲಾಗಿದ್ದು, ಇದು ಕಾರಣವಾಗಿರಬಹುದು. ಅಣುಗಳು ಇಂಗಾಲದ ಡೈಆಕ್ಸೈಡ್​​ ಜೊತೆಗೆ ನೀರಿನ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ಎಚ್​ಸಿಒ+ ವಿಭಜನೆಯಿಂದ ನೀರು ಕಳೆದು ಕೊಂಡಿದೆ ಎಂದು ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ. ಇದು ವಾತಾವರಣದಲ್ಲಿನ ಎಲೆಕ್ಟ್ರಾನ್ಸ್​ ಜೊತೆಗಿನ ಬಂಧನವನ್ನು ರೂಪಿಸುತ್ತದೆ ಮತ್ತು ಋಣಾತ್ಮಕ ಚಾರ್ಜ್​ಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಚ್​ಸಿಒ+ ಅಣು ಎರಡಾಗಿ ಭಾಗವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಜಲಜನವೂ ವಾತಾವರಣದಿಂದ ಸಂಪೂರ್ಣವಾಗಿ ತಳಲ್ಪಡುತ್ತದೆ. ಫಲಿತಾಂಶವಾಗಿ ನೀರು ರೂಪುಗೊಳ್ಳಲು ಬೇಕಾದ ಎರಡು ಅಗತ್ಯ ಅಂಶಗಳು ಲಭ್ಯವಾಗುವುದಿಲ್ಲ ಎಂದು ಸಂಶೋಧನೆ ತಿಳಿಸಿದೆ.

ಇದನ್ನು ಓದಿ: ಶುಕ್ರನ ನೆಲದಲ್ಲಿ ಮಿಂಚು - ಗುಡುಗು ಇಲ್ಲದೇ ಇರಬಹುದು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.