ಮಧುರೈ (ತಮಿಳುನಾಡು): ಬಹುತೇಕ ಜನರು ಒಂದೇ ಸಿಲಿಂಡರ್ ಹೊಂದಿರುತ್ತಾರೆ. ಅಡುಗೆ ಮಾಡುವಾಗ ಇದ್ದಕ್ಕಿದ್ದಂತೆ ಗ್ಯಾಸ್ ಖಾಲಿಯಾದರೆ ದೊಡ್ಡ ಸಮಸ್ಯೆಯಾಗುವುದು ಖಚಿತ. ಇಂತಹ ಸಮಸ್ಯೆಯಿಂದ ಪಾರಾಗಲು ಗೃಹಿಣಿಯರು ಏನಾದರೂ ಪರಿಹಾರಕ್ಕಾಗಿ ಹಾತೊರೆಯುವ ದಿನಗಳಿವೆ. ಅದಕ್ಕಾಗಿ ಇಲ್ಲೊಬ್ಬ ವಿದ್ಯಾರ್ಥಿ ಗ್ಯಾಸ್ ಸಿಲಿಂಡರ್ ಖಾಲಿಯಾಗುವ ಮುನ್ನವೇ ಎಚ್ಚರಿಕೆ ಸಾಧನವನ್ನು ಕಂಡು ಹಿಡಿದಿದ್ದಾರೆ.
ಈ ಸಮಸ್ಯೆಯನ್ನು ತಪ್ಪಿಸಲು ಮಧುರೈ ಜಿಲ್ಲೆಯ ನರಿಮೇಡು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಮಿತ್ರನ್ ಗ್ಯಾಸ್ ಸಿಲಿಂಡರ್ ಬಳಸುವವರಿಗೆ 'ಸಿಲಿಂಡರ್ ಡಿಪ್ಲೀಷನ್' ಎಂಬ ಎಚ್ಚರಿಕೆಯ ಸಾಧನವನ್ನು ಕಂಡುಹಿಡಿದಿದ್ದಾರೆ. ಈ ಎಚ್ಚರಿಕೆಯ ಸಾಧನದ ಮೇಲೆ ಸಿಲಿಂಡರ್ ಇಟ್ಟರೇ ಸಾಕು.. ಸಿಲಿಂಡರ್ ಒಳಗಿನ ಗ್ಯಾಸ್ ಕಡಿಮೆಯಾಗುವ 10 ದಿನಗಳ ಮೊದಲು ಸಿಗ್ನಲ್ ಲೈಟ್ ಉರಿಯುತ್ತದೆ. ಅಷ್ಟೇ ಅಲ್ಲ ಶಬ್ದದ ಮೂಲಕ ಎಚ್ಚರಿಕೆಯ ಸಂದೇಶವೂ ನೀಡುತ್ತದೆ ಎಂದು ವಿದ್ಯಾರ್ಥಿ ಹೇಳುತ್ತಾರೆ.
ಈ ಕುರಿತು ವಿದ್ಯಾರ್ಥಿ ಮಿತ್ರನ್ ಮಾತನಾಡಿ, ‘ನಮ್ಮ ಮನೆಯಲ್ಲಿ ಒಂದೇ ಸಿಲಿಂಡರ್ ಇದೆ. ಗ್ಯಾಸ್ ಖಾಲಿಯಾದಾಗ ಅಡುಗೆ ಮಾಡಲು ಅಮ್ಮನಿಗೆ ತುಂಬಾ ಸಮಸ್ಯೆ ಆಗುತ್ತಿತ್ತು. ಹಾಗಾಗಿ ಅದನ್ನು ತಡೆಯಲು ಮಾರ್ಗವೊಂದನ್ನು ಕಂಡು ಹಿಡಿದೆ. ನನ್ನ ಶಾಲೆಯ 'ಗೈಡ್ ಟು ಇನ್ವೆನ್ಶನ್ಸ್' ಶಿಕ್ಷಕ ಅಬ್ದುಲ್ ರಜಾಕ್ ಅವರಿಗೆ ಇದರ ಬಗ್ಗೆ ಪರಿಚಯಿಸಿದೆ ಎಂದು ಹೇಳಿದರು.
ಇದಕ್ಕೆ ಬೇಕಾಗಿರುವುದು ರೌಂಡ್ ಆಗಿರುವ ಮರದ ಹಲಗೆ, ಸಿಗ್ನಲ್ ಲ್ಯಾಂಪ್ ಮತ್ತು ಸಣ್ಣ ಮೋಟಾರ್. ಈ ಸರ್ಕ್ಯುಲರ್ ಬೋರ್ಡ್ ಮೇಲೆ ಸಿಲಿಂಡರ್ ಇಟ್ಟರೇ ಸಿಲಿಂಡರ್ ಒಳಗಿನ ಗ್ಯಾಸ್ ಕಡಿಮೆಯಾದಂತೆ ಅದು ನಮಗೆ ಮುನ್ನೆಚ್ಚರಿಗೆ ನೀಡುತ್ತದೆ. ಅಷ್ಟೇ ಅಲ್ಲ 10 ದಿನಗಳ ಮೊದಲೇ ಸಿಗ್ನಲ್ ಲೈಟ್ ಆನ್ ಆಗುತ್ತದೆ. ನಿಮಗೆ ಶಬ್ದ ಮಾಡುವ ಮೂಲಕವೂ ಸಿಲಿಂಡರ್ ಖಾಲಿ ಆಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡುತ್ತದೆ. ಆಗ ನಾವು ನಾವು ಸಿಲಿಂಡರ್ ಖಾಲಿಯಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಬಹುದು ಮತ್ತು ಮುಂದಿನ ಸಿಲಿಂಡರ್‌ಗೆ ಬುಕ್ ಮಾಡಲು ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿ ಹೇಳುತ್ತಾರೆ.
ಒಂದೇ ಸಿಲಿಂಡರ್ ಹೊಂದಿರುವ ಕುಟುಂಬಗಳಿಗೆ ಈ ಸಾಧನ ವರದಾನವಾಗಲಿದೆ. ಈ ಆವಿಷ್ಕಾರಕ್ಕೆ ಮುಖ್ಯ ಕಾರಣ ಶಿಕ್ಷಕರು ಮತ್ತು ನನ್ನ ಶಾಲೆಯ ಪ್ರಾಂಶುಪಾಲರು ಮತ್ತು ಕುಲಪತಿಗಳು ನೀಡಿದ ಪ್ರೋತ್ಸಾಹ. ಅಲ್ಲದೆ, ನಾನು ವಿವಿಧ ಆವಿಷ್ಕಾರಗಳನ್ನು ಮಾಡಲು ಸ್ಫೂರ್ತಿ ಪಡೆದಿದ್ದೇನೆ ಎಂದು ಮಿತ್ರನ್ ಹೇಳಿದರು. ಶಿಕ್ಷಕರ ಪ್ರಕಾರ, ಸಿಲಿಂಡರ್ ಒತ್ತಡದಿಂದ ಶಬ್ದ ಮಾಡುವ ಈ ಸಾಧನವನ್ನು ತಯಾರಿಸಲು ಕೇವಲ 1,000 ವೆಚ್ಚವಾಗುತ್ತದೆ ಎಂದು ಹೇಳುತ್ತಾರೆ.
ಓದಿ: ಜವಾಹರಲಾಲ್ ನೆಹರು ತಾರಾಲಯದಲ್ಲಿ ಗಮನ ಸೆಳೆದ ಚಂದ್ರಯಾನ-3 ಮಾದರಿ - National Space Day