ETV Bharat / technology

GPSನಿಂದ AIವರೆಗೆ: ಫುಟ್‌ಬಾಲ್ ವೀಕ್ಷಣೆ ಅನುಭವವನ್ನು ಮತ್ತಷ್ಟು ರೋಚಕಗೊಳಿಸಿದ ಹೊಸ ತಂತ್ರಜ್ಞಾನಗಳಿವು - Technology Used In Football

author img

By ETV Bharat Karnataka Team

Published : Sep 17, 2024, 11:45 AM IST

Technology Used In Football: ನಾವು ಫುಟ್‌ಬಾಲ್ ಪಂದ್ಯಗಳನ್ನು ನೋಡಿ ಆನಂದಿಸುವ ವಿಧಾನವನ್ನು ಬದಲಾಯಿಸುವಲ್ಲಿ ಹೊಸ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸಿವೆ. ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮತ್ತು ವೀಕ್ಷಕರು ಪರದೆಯ ಮೇಲಿನ ಅತ್ಯುತ್ತಮ ದೃಶ್ಯವನ್ನು ಆನಂದಿಸಲು ಯಾವ ತಂತ್ರಜ್ಞಾನಗಳು ಸಹಾಯ ಮಾಡುತ್ತವೆ ಎಂಬುದನ್ನು ನೋಡೋಣ.

TECHNOLOGY USED IN FOOTBALL  FOOTBALL  FOOTBALL TECHNOLOGY INNOVATION
ಫುಟ್‌ಬಾಲ್ ಕ್ರೀಡೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ (ETV Bharat)

Technology Used In Football: ಆಧುನಿಕ ತಂತ್ರಜ್ಞಾನಗಳು ಫುಟ್‌ಬಾಲ್ ಅನುಭವವನ್ನು ದೊಡ್ಡ ರೀತಿಯಲ್ಲಿ ಬದಲಾಯಿಸಿವೆ. ಬ್ರಾಡ್‌ಕಾಸ್ಟಿಂಗ್ ತಂತ್ರಜ್ಞಾನ, ಇನ್‌ಸ್ಟಂಟ್ ರಿಪ್ಲೇ ಸಿಸ್ಟಮ್, ಜಿಪಿಎಸ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಸ್ಟೇಡಿಯಂಗಳು ಹಾಗು ವರ್ಚುವಲ್ ರಿಯಾಲಿಟಿ ಇತ್ಯಾದಿಗಳನ್ನು ಇಂದು ಫುಟ್‌ಬಾಲ್‌ನಲ್ಲಿ ಬಳಸಲಾಗುತ್ತಿದೆ. ಹೊಸ ತಂತ್ರಜ್ಞಾನಗಳ ಆಗಮನದೊಂದಿಗೆ ಫುಟ್‌ಬಾಲ್‌ನ ಆಯಾಮವೇ ವಿಭಿನ್ನ ಹಂತ ತಲುಪಿದೆ. ಅಂತಹ ತಂತ್ರಜ್ಞಾನವನ್ನು ಬಳಸಿ ಪಡೆದ ದೃಶ್ಯಗಳನ್ನು ಆಟಗಾರರಿಗೆ ತರಬೇತಿ ನೀಡಲು ಸಹ ಬಳಸಲಾಗುತ್ತದೆ. ಈ ತಂತ್ರಜ್ಞಾನಗಳು ಪ್ರೇಕ್ಷಕರಿಗೆ ನೈಜ ಸಮಯದಲ್ಲಿ ಫುಟ್‌ಬಾಲ್ ಅನ್ನು ಸ್ಪಷ್ಟವಾಗಿ ಆನಂದಿಸಲು ಸಹಾಯ ಮಾಡುತ್ತದೆ.

1. Video Assistant Referee(VAR): VAR ಆಟದ ರೆಕಾರ್ಡ್ ಮಾಡಿದ ದೃಶ್ಯಗಳನ್ನು ನಿಧಾನವಾಗಿ ವೀಕ್ಷಿಸಲು ಮತ್ತು ಮರುಪ್ಲೇ ಮಾಡಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆಟದಲ್ಲಿ ಯಾವುದೇ ದೋಷಗಳು, ಅಸ್ಪಷ್ಟ ಅಥವಾ ಅನುಮಾನಾಸ್ಪದ ವಿಷಯಗಳಿವೆಯೇ ಎಂದು ಪರಿಶೀಲಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. VAR ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಫುಟ್‌ಬಾಲ್ ಕಾನೂನು 2018-19ರಲ್ಲಿ ಸೇರಿಸಲಾಗಿದೆ. ಈ ತಂತ್ರಜ್ಞಾನವನ್ನು 2018ರ FIFA ವಿಶ್ವಕಪ್‌ನಲ್ಲಿ ಬಳಸಲಾಯಿತು. VAR ತಂತ್ರಜ್ಞಾನದಿಂದ ಗೋಲುಗಳನ್ನು ದೃಢೀಕರಿಸಲು, ಪೆನಾಲ್ಟಿಗಳನ್ನು ನೀಡಲು ಮತ್ತು ಪಿಚ್‌ನಲ್ಲಿ ಆಟದ ಸಮಯದಲ್ಲಿ ಇತರ ಘಟನೆಗಳನ್ನು ಪರಿಶೀಲಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿತು.

2. Semi Automatic Offsite Technology(SAOT): VAR ತಂತ್ರಜ್ಞಾನವು ಫುಟ್‌ಬಾಲ್ ಪಂದ್ಯಗಳಲ್ಲಿ ಆಫ್‌ಸೈಡ್‌ಗಳನ್ನು ಪತ್ತೆ ಹಚ್ಚಲು ನಿಮಗೆ ಸಹಾಯ ಮಾಡಬಹುದಾದರೂ, ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆಟದ ಮಧ್ಯದಲ್ಲಿ VAR ಟೀಕೆಗಳು ಸಾಮಾನ್ಯವಾಗಿ ಪ್ರೇಕ್ಷಕರ ಮನಸ್ಥಿತಿಯನ್ನು ಕಸಿದುಕೊಳ್ಳುತ್ತವೆ. ಆದರೆ ಸಬ್​-ಆಟೋಮೆಟೆಡ್​ ಆಫ್‌ಸೈಟ್ ತಂತ್ರಜ್ಞಾನವು ಅಂತಹ ಅನುಮಾನಗಳನ್ನು ತಕ್ಷಣವೇ ಪರಿಹರಿಸುವ ಒಂದು ತಂತ್ರಜ್ಞಾನ.

ಆಫ್‌ಸೈಡ್ ತಂತ್ರಜ್ಞಾನವು ಪಿಚ್‌ನ ಸುತ್ತಲೂ ಅಳವಡಿಸಲಾಗಿರುವ 12 ಕ್ಯಾಮೆರಾಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಕ್ಯಾಮೆರಾಗಳು ಪ್ರತಿ ಆಟಗಾರನ ಬಹು ಡೇಟಾ ಪಾಯಿಂಟ್‌ಗಳು ಮತ್ತು ಚೆಂಡಿನ ಪ್ರತಿ ಸೆಕೆಂಡಿಗೆ 50 ಬಾರಿ ಟ್ರ್ಯಾಕ್ ಮಾಡುತ್ತವೆ. ಆಫ್‌ಸೈಡ್ ಸಂಭವಿಸಿದೆಯೇ ಎಂದು ನೋಡಲು ಆನ್-ಬಾಲ್ ಸಂವೇದಕದಿಂದ ಸಂಕೇತವನ್ನು ಬಳಸಿಕೊಂಡು ನೈಜ ಸಮಯದಲ್ಲಿ ಇದನ್ನು ವೀಕ್ಷಿಸಬಹುದು. ಇದು ನಿಖರವಾದ ಸ್ಥಳ ಸೇರಿದಂತೆ ಇನ್ನಿತರ ಮಾಹಿತಿ ಒದಗಿಸುತ್ತದೆ. ಈ ಡೇಟಾವನ್ನು ಮುಖ್ಯ ತೀರ್ಪುಗಾರರಿಗೆ ಪ್ರಸ್ತುತಪಡಿಸಲಾಗುತ್ತದೆ. ಆಗ ಅವರು ಖಚಿತ ನಿರ್ಣಯಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ.

ಈ ತಂತ್ರಜ್ಞಾನವನ್ನು ಮೊದಲು ಕತಾರ್‌ನಲ್ಲಿ ನಡೆದ FIFA 2022 ಪುರುಷರ ವಿಶ್ವಕಪ್‌ನಲ್ಲಿ ಬಳಸಲಾಯಿತು. ಪ್ರೀಮಿಯರ್ ಲೀಗ್ ಕ್ಲಬ್‌ಗಳು 2024-25 ಋತುವಿನ ಪಂದ್ಯಗಳಲ್ಲಿ SAOT ತಂತ್ರಜ್ಞಾನದ ಬಳಕೆಯನ್ನು ಅನುಮೋದಿಸಿವೆ.

3. Goal-line technology: ಗೋಲ್ ಆಗಿದೆಯಾ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಬಳಸುವ ತಂತ್ರಜ್ಞಾನ ಇದಾಗಿದೆ. ಫುಟ್ಬಾಲ್ ಗೋಲು ರೇಖೆಯನ್ನು ದಾಟಿದೆಯೇ ಎಂದು ತೀರ್ಪುಗಾರರು ನಿರ್ಧರಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತದೆ. ಆದರೆ ಗೋಲ್ ಲೈನ್ ತಂತ್ರಜ್ಞಾನ ಬಂದ ಮೇಲೆ ಅದು ಗೋಲ್ ಲೈನ್ ದಾಟಿದೆಯೇ ಎಂಬುದನ್ನು ಪರಿಶೀಲಿಸುವುದು ಸುಲಭವಾಗಿದೆ. ಗೋಲ್ ಪೋಸ್ಟ್‌ಗಳ ಸುತ್ತಲೂ ಇರಿಸಲಾಗಿರುವ 14 ಹೈ-ಸ್ಪೀಡ್ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳ ಸಹಾಯದಿಂದ ಗೋಲ್-ಲೈನ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗಿದೆ.

4. Smart balls​: ಈ ತಂತ್ರಜ್ಞಾನವೂ ಚೆಂಡನ್ನು ಟ್ರ್ಯಾಕ್ ಮಾಡಲು, ವೇಗ ಮತ್ತು ಸ್ಪಿನ್ ಅನ್ನು ಅಳೆಯಲು ಸುಲಭಗೊಳಿಸುತ್ತದೆ.

5. Wearable technology: ಇಂದಿನ ತಂತ್ರಜ್ಞಾನವು ಆಟಗಾರರ ದೇಹವನ್ನು ಡೇಟಾ ಕೇಂದ್ರಗಳಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಬಯೋಮೆಟ್ರಿಕ್ ಸಂವೇದಕಗಳು ಮತ್ತು ಜಿಪಿಎಸ್ ಟ್ರ್ಯಾಕರ್‌ಗಳನ್ನು ಇದು ಹೊಂದಿದೆ. ಇದರಿಂದ ಸಾಕರ್ ಆಟಗಾರರ ಅಂತರದಿಂದ ಹೃದಯ ಬಡಿತದವರೆಗೆ ಎಲ್ಲವನ್ನೂ ಟ್ರ್ಯಾಕ್ ಮಾಡಬಹುದು. ಆಟಗಾರರನ್ನು ಗಾಯದಿಂದ ರಕ್ಷಿಸಲು ಮತ್ತು ತಂಡಗಳಿಗೆ ತರಬೇತಿ ನೀಡಲು ಇದು ಉಪಯುಕ್ತ.

6. Big Bang Referee smartwatch: ಬಿಗ್ ಬ್ಯಾಂಗ್ ರೆಫರಿ ಸ್ಮಾರ್ಟ್ ವಾಚ್ ಅನ್ನು ಸ್ವಿಸ್ ಐಷಾರಾಮಿ ವಾಚ್‌ಮೇಕರ್ ಹಬ್ಲೋಟ್ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ವಿಶೇಷವಾಗಿ ಫಿಫಾ ವಿಶ್ವಕಪ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಚೆಂಡು ಗೋಲ್ ಲೈನ್ ದಾಟಿದ ನಂತರ, ಸ್ಮಾರ್ಟ್ ವಾಚ್ ಕಂಪಿಸುತ್ತದೆ ಮತ್ತು ಪರದೆಯ ಮೇಲೆ 'ಗೋಲ್' ಪದವನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಅಂಕಗಳು, ಗೋಲ್ ಸ್ಕೋರರ್‌ಗಳ ಹೆಸರುಗಳು, ಬದಲಿ ಆಟಗಾರರು, ಪಂದ್ಯದ ಸಮಯ ಮುಂತಾದ ನಡೆಯುತ್ತಿರುವ ಆಟದ ಸ್ಥಿತಿಯನ್ನು ನೀವು ಸ್ಮಾರ್ಟ್‌ವಾಚ್‌ನ ಡಯಲ್‌ನಲ್ಲಿ ನೋಡಬಹುದು. ಎಲ್ಲಾ 32 ಭಾಗವಹಿಸುವ ದೇಶಗಳ ಧ್ವಜಗಳನ್ನು ಡಯಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

7. AI Powered Player Identification: ಇದು ಫುಟ್‌ಬಾಲ್ ಆಟವನ್ನು ಸುಧಾರಿಸಿದ ಕ್ರಾಂತಿಕಾರಿ ತಂತ್ರಜ್ಞಾನಗಳಲ್ಲಿ ಒಂದು. ಹಿಂದೆ, ಆಟದ ಅಂಕಿಅಂಶಗಳನ್ನು ಸಂಗ್ರಹಿಸಲು ಹಿಂದಿನ ಸೀಸನ್‌ಗಳ ವಿಡಿಯೋಗಳನ್ನು ವೀಕ್ಷಿಸಲು ಮತ್ತು ಪರಿಶೀಲಿಸಲು ತರಬೇತುದಾರರಿಗೆ ದಿನಗಳ ಅಗತ್ಯವಿತ್ತು. ಆದರೆ AI ತಂತ್ರಜ್ಞಾನದ ಬಂದ ನಂತರ ಇವುಗಳನ್ನು ನಿಮಿಷಗಳಲ್ಲಿ ಮಾಡಬಹುದು.

8. Smart Mouthguards: ಸ್ಮಾರ್ಟ್ ಮೌತ್‌ಗಾರ್ಡ್‌ಗಳು ಅಕ್ಸೆಲೆರೊಮೀಟರ್‌ಗಳು ಮತ್ತು ಗೈರೊಸ್ಕೋಪ್‌ಗಳೊಂದಿಗೆ ಸಜ್ಜುಗೊಂಡಿವೆ. ಕ್ರೀಡೆಯ ಸಮಯದಲ್ಲಿ ಅಪಘಾತದ ಸಂದರ್ಭದಲ್ಲಿ ಗಾಯದ ಪ್ರಭಾವವನ್ನು ಪತ್ತೆ ಹಚ್ಚಲು ಇದು ಬಹಳ ಮುಖ್ಯ. ಸ್ಮಾರ್ಟ್ ಮೌತ್‌ಗಾರ್ಡ್‌ಗಳು ಆಟಗಾರರ ಶಕ್ತಿಯನ್ನು ತ್ವರಿತವಾಗಿ ಅಳೆಯಬಹುದು. ಇದು ತಕ್ಷಣದ ಡೇಟಾವನ್ನು ಒದಗಿಸಲು ವೈದ್ಯರು ಮತ್ತು ವೈದ್ಯಕೀಯ ತಂಡವನ್ನು ಶಕ್ತಗೊಳಿಸುತ್ತದೆ, ತಲೆ ಗಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ತಕ್ಷಣದ ವೈದ್ಯಕೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ.

9. Smart Footwear: ಕ್ರೀಡಾಪಟುವಿನ ನಡಿಗೆ, ಬಲ ಮತ್ತು ಸಮತೋಲನವನ್ನು ಅರ್ಥಮಾಡಿಕೊಳ್ಳಲು ಸ್ಮಾರ್ಟ್ ಶೂಗಳನ್ನು ಬಳಸಲಾಗುತ್ತದೆ. ಆಟಗಾರರಿಗೆ ವೈಯಕ್ತೀಕರಿಸಿದ ತರಬೇತಿ ನೀಡಲು ಸ್ಮಾರ್ಟ್ ಶೂಗಳಲ್ಲಿನ ಸಂವೇದಕಗಳಿಂದ ಡೇಟಾವನ್ನು ಬಳಸಲಾಗುತ್ತದೆ.

10. Virtual Reality Training: ಇದು ಗಾಯಾಳು ಆಟಗಾರರಿಗೆ ಕೌಶಲ್ಯ ತರಬೇತಿ ನೀಡಲು ಮತ್ತು ಒಳಾಂಗಣ ಅಖಾಡದಲ್ಲಿ ಆಟಗಾರರಿಗೆ ಉತ್ತಮ ತರಬೇತಿ ನೀಡಲು ಸಹಾಯ ಮಾಡುತ್ತದೆ.

11. Smart Stadiums: ಫುಟ್‌ಬಾಲ್ ಅಭಿಮಾನಿಗಳು ಲೈವ್ ಪಂದ್ಯಗಳನ್ನು ಆನಂದಿಸುವಲ್ಲಿ ಸ್ಮಾರ್ಟ್ ಸ್ಟೇಡಿಯಂಗಳು ಪ್ರಮುಖ ಪಾತ್ರವಹಿಸುತ್ತವೆ. ಸ್ಮಾರ್ಟ್ ಸ್ಟೇಡಿಯಂಗಳು ಆಟಗಾರರ ಅಂಕಿಅಂಶಗಳು ಮತ್ತು ಸ್ಕೋರ್ ವಿವರಗಳ ಕುರಿತು ಲೈವ್ ಮಾಹಿತಿಯನ್ನು ಒದಗಿಸುತ್ತವೆ.

ಇದನ್ನೂ ಓದಿ: ಸ್ವೀಡನ್‌ನಿಂದ ಫಿನ್‌ಲ್ಯಾಂಡ್‌ಗೆ ಪ್ರಯಾಣಿಸಿ ವಿಶ್ವದಾಖಲೆ ಬರೆದ ಎಲೆಕ್ಟ್ರಿಕ್ ಬೋಟ್​! - High Speed Electric Boat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.