ETV Bharat / technology

ಟಾಟಾ - ಏರ್‌ಬಸ್ ಸೌಲಭ್ಯ ಭಾರತದ ರಕ್ಷಣಾ ಪಯಣಕ್ಕೆ ಅದ್ಭುತದ ಕ್ಷಣವಾಗಿದೆ: ಪ್ರಧಾನಿ ಮೋದಿ - MODI ON TATA AIRBUS

Modi On Tata Airbus: ಟಾಟಾ-ಏರ್‌ಬಸ್ ಸೌಲಭ್ಯ ಭಾರತದ ರಕ್ಷಣಾ ಪಯಣಕ್ಕೆ ಅದ್ಭುತದ ಕ್ಷಣವಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ಮೋದಿ ತಿಳಿಸಿದ್ದಾರೆ.

TATA AIRBUS FACILITY  INDIA DEFENCE JOURNEY  PRIME MINISTER NARENDRA MODI
ಪ್ರಧಾನಿ ಮೋದಿ (IANS)
author img

By ETV Bharat Tech Team

Published : Oct 31, 2024, 7:21 AM IST

Modi On Tata Airbus: ವಡೋದರಾದಲ್ಲಿ ಸಿ-295 ವಿಮಾನ ತಯಾರಿಕಾ ಸಂಕೀರ್ಣದ ಉದ್ಘಾಟನೆಯು ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಪ್ರಯಾಣದಲ್ಲಿ ಮಹತ್ವದ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿ ಅವರು ಅನುಷ್ಠಾನದ ವೇಗವು ಆಶ್ಚರ್ಯಕರವಾಗಿದೆ. ಇದು ಹೊಸ ಕೆಲಸದ ಸಂಸ್ಕೃತಿ ಮತ್ತು ಭಾರತದ ಜನರ ಸಾಮರ್ಥ್ಯಗಳ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ಗುಣಗಾನ ಮಾಡಿದ್ದಾರೆ.

2023-24 ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆಯು 1.27 ಲಕ್ಷ ಕೋಟಿ ರೂ. ಇತ್ತು. ಉತ್ಪಾದನೆಯೊಂದಿಗೆ ಜೊತೆಗೆ ಭಾರತದ ರಕ್ಷಣಾ ರಫ್ತು 21,000 ಕೋಟಿ ರೂ.ಆಗಿದೆ. 2014ರಲ್ಲಿ 1000 ಕೋಟಿ ರೂ. ಇತ್ತು ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿ, ಕೇವಲ 3 ವರ್ಷಗಳಲ್ಲಿ 12,300 ಕ್ಕೂ ಹೆಚ್ಚು ವಸ್ತುಗಳನ್ನು ದೇಶೀಯಗೊಳಿಸಲಾಗಿದೆ ಮತ್ತು DPSU ಗಳು (ಡಿಫೆನ್ಸ್ PSU ಗಳು) ದೇಶೀಯ ಮಾರಾಟಗಾರರಲ್ಲಿ 7,500 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಮ್ಮ ಯುವ ಶಕ್ತಿಯ ಸಾಮರ್ಥ್ಯ ಮತ್ತು ಕೌಶಲ್ಯ ಹಾಗೂ ಸರ್ಕಾರದ ಪ್ರಯತ್ನದಿಂದ ಆಮದು ಮೇಲಿನ ಅವಲಂಬನೆ ಕಡಿಮೆಯಾಗಿದೆ. ಭಾರತದ ರಕ್ಷಣಾ ವಲಯವು ನಮ್ಮ ಯುವಕರು, ಸ್ಟಾರ್ಟ್‌ಅಪ್‌ಗಳು, ತಯಾರಕರು ಮತ್ತು ನವೋದ್ಯಮಿಗಳಿಗೆ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಇತಿಹಾಸದ ಭಾಗವಾಗಲು ಇದು ನಿಮ್ಮ ಕ್ಷಣವಾಗಿದೆ. ಭಾರತಕ್ಕೆ ನಿಮ್ಮ ಪರಿಣತಿ ಮತ್ತು ಉತ್ಸಾಹದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವೀನ್ಯತೆಗಾಗಿ ಬಾಗಿಲುಗಳು ತೆರೆದಿವೆ, ನೀತಿಗಳು ಬೆಂಬಲಿತವಾಗಿವೆ ಮತ್ತು ಅವಕಾಶವು ಅಭೂತಪೂರ್ವವಾಗಿದೆ. ಒಟ್ಟಾಗಿ, ನಾವು ಭಾರತವನ್ನು ರಕ್ಷಣೆಯಲ್ಲಿ ಕೇವಲ ಆತ್ಮನಿರ್ಭರ್ ಮಾಡದೇ, ರಕ್ಷಣಾ ಉತ್ಪಾದನೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದರು. ಐತಿಹಾಸಿಕವಾಗಿ ಭಾರತವು ತನ್ನ ರಕ್ಷಣಾ ಅಗತ್ಯಗಳಿಗಾಗಿ ವಿದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸುಮಾರು 65-70 ಪ್ರತಿಶತದಷ್ಟು ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಇನ್ನು ಪರಿಸ್ಥಿತಿ ಈಗ ನಾಟಕೀಯವಾಗಿ ಬದಲಾಗಿದೆ. ಸುಮಾರು 65 ಪ್ರತಿಶತದಷ್ಟು ರಕ್ಷಣಾ ಸಾಧನಗಳನ್ನು ಈಗ ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಡೋದರಾದಲ್ಲಿನ TATA-Airbus ಸೌಲಭ್ಯವು ಭಾರತದಲ್ಲಿನ ಮಿಲಿಟರಿ ವಿಮಾನಗಳಿಗಾಗಿ ಮೊದಲ ಖಾಸಗಿ ವಲಯದ ಅಂತಿಮ ಜೋಡಣೆ ಮಾರ್ಗವಾಗಿದೆ (FAL). ಇದು ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಈ ಯೋಜನೆ ಅಡಿ , 56 C-295 ವಿಮಾನಗಳನ್ನು ವಿತರಿಸಲಾಗುವುದು. ಆರಂಭಿಕವನ್ನು 16 ಏರ್​ಬಸ್​ಗಳು ಸ್ಪೇನ್‌ನಿಂದ ಆಗಮಿಸುತ್ತದೆ ಮತ್ತು ಉಳಿದ 40 ದೇಶೀಯವಾಗಿ ಉತ್ಪಾದಿಸಲಾಗುತ್ತದೆ.

ಓದಿ: ಐರಾವತ 2.0ಗೆ ಸಿಎಂ ಚಾಲನೆ: ಬಸ್​ನ ವಿಶೇಷತೆಗಳೇನು? ಇವು ಎಲ್ಲೆಲ್ಲಿ ಸಂಚರಿಸುತ್ತವೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.