ETV Bharat / technology

ಸ್ಯಾಮ್​ಸಂಗ್ ಗ್ಯಾಲಕ್ಸಿ A55 5G, A35 5G ಬಿಡುಗಡೆ: ಬೆಲೆ ಎಷ್ಟು, ವಿಶೇಷತೆ ಏನು?

author img

By ETV Bharat Karnataka Team

Published : Mar 20, 2024, 5:25 PM IST

ಮಧ್ಯಮ ಪ್ರೀಮಿಯಂ ಶ್ರೇಣಿಯ ಗ್ಯಾಲಕ್ಸಿ A55 5G, A35 5G ಸ್ಮಾರ್ಟ್​ಫೋನ್​ಗಳನ್ನು ಸ್ಯಾಮ್​ಸಂಗ್ ಬಿಡುಗಡೆ ಮಾಡಿದೆ.

Galaxy A55 5G, Galaxy A35
Galaxy A55 5G, Galaxy A35

ನವದೆಹಲಿ: ನವೀನ ತಂತ್ರಜ್ಞಾನವನ್ನೊಳಗೊಂಡ ಗ್ಯಾಲಕ್ಸಿ ಎ 55 5ಜಿ ಮತ್ತು ಗ್ಯಾಲಕ್ಸಿ ಎ 35 5ಜಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದಾಗಿ ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್​​ಸಂಗ್ ಇಂದು ಘೋಷಿಸಿದೆ. ಹೊಸ ಎ ಸರಣಿಯ ಸ್ಮಾರ್ಟ್​ಫೋನ್​ಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಸುರಕ್ಷತೆ, ಎಐನಿಂದ ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಟ್ಯಾಂಪರ್-ನಿರೋಧಕ ಸೆಕ್ಯೂರಿಟಿ ವೈಶಿಷ್ಟ್ಯ, ಸ್ಯಾಮ್​ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಫ್ಲ್ಯಾಗ್​ಶಿಪ್ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ.

ಫ್ಲ್ಯಾಗ್ ಶಿಪ್ ಮಾದರಿಯ ವಿನ್ಯಾಸ ಮತ್ತು ದೀರ್ಘ ಬಾಳಿಕೆ: ಗ್ಯಾಲಕ್ಸಿ ಎ 55 5ಜಿ ಮೆಟಲ್ ಫ್ರೇಮ್ ಮತ್ತು ಗ್ಯಾಲಕ್ಸಿ ಎ 35 5ಜಿ ಪ್ರೀಮಿಯಂ ಗ್ಲಾಸ್ ಬ್ಯಾಕ್ ಅನ್ನು ಹೊಂದಿದೆ. ಆವ್​ಸಮ್ ಲೈಲಾಕ್, ಆವ್​ಸಮ್ ಐಸ್ ಬ್ಲೂ ಮತ್ತು ಆವ್​ಸಮ್ ನೇವಿ ಬಣ್ಣಗಳಲ್ಲಿ ಈ ಫೋನ್​ಗಳು ಲಭ್ಯವಿವೆ. ಐಪಿ 67 ರೇಟಿಂಗ್ ಹೊಂದಿರುವುದರಿಂದ ಶುದ್ಧ ನೀರಿನಲ್ಲಿ 1 ಮೀಟರ್ ಆಳದಲ್ಲಿ 30 ನಿಮಿಷಗಳವರೆಗೆ ಏನೂ ಆಗದೇ ತಡೆಯ ಬಲ್ಲವು. ಧೂಳು ಮತ್ತು ಮರಳಿನಿಂದ ಯಾವುದೇ ಪ್ರತಿಕೂಲ ಪರಿಣಾಮ ಆಗದಂತೆ ಇವುಗಳನ್ನು ನಿರ್ಮಿಸಲಾಗಿದೆ.

6.6-ಇಂಚಿನ ಎಫ್ಎಚ್​ಡಿ+ ಸೂಪರ್ ಅಮೋಲೆಡ್ ಡಿಸ್​ಪ್ಲೇ ಮತ್ತು ಮಿನಿಮೈಸ್ಡ್​ ಬೆಜೆಲ್​ಗಳೊಂದಿಗೆ, 120 ಹೆರ್ಟ್ಜ್ ರಿಫ್ರೆಶ್ ರೇಟ್ ಅತ್ಯಂತ ಸುಗಮ ಕಾರ್ಯಕ್ಷಮತೆ ನೀಡುತ್ತದೆ. ಈ ಸ್ಮಾರ್ಟ್​ಫೋನ್​ಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯೊಂದಿಗೆ ಫ್ಲ್ಯಾಗ್​ಶಿಪ್ ಮಾದರಿಯ ದೀರ್ಘಾವಧಿ ಬಾಳಿಕೆ ಹೊಂದಿವೆ.

ಫ್ಲ್ಯಾಗ್​ಶಿಪ್ ಮಾದರಿಯ ಕ್ಯಾಮೆರಾ: ಹೊಸ ಎ ಸರಣಿಯ ಸ್ಮಾರ್ಟ್​ಫೋನ್​ಗಳು ಅನೇಕ ನವೀನ ಎಐ-ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿವೆ. ಫೋಟೋ ರಿಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಮುಂತಾದುವು ಪ್ರಮುಖ ವೈಶಿಷ್ಟ್ಯಗಳಾಗಿವೆ. ಗ್ಯಾಲಕ್ಸಿ ಎ 55 5ಜಿ ಮತ್ತು ಎ 35 5ಜಿ 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿವೆ. ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್​ಪಿ) ನಿಂದ ವರ್ಧಿತ ನೈಟೊಗ್ರಫಿಯೊಂದಿಗೆ ಈ ಕ್ಯಾಮೆರಾಗಳು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯುತ್ತವೆ.

ಫ್ಲ್ಯಾಗ್​ಶಿಪ್ ಮಟ್ಟದ ಭದ್ರತೆ: ಸ್ಯಾಮ್ ಸಂಗ್ ನಾಕ್ಸ್ ವಾಲ್ಟ್ ಸೆಕ್ಯುರಿಟಿ ವೈಶಿಷ್ಟ್ಯವನ್ನು ಇದೇ ಮೊದಲ ಬಾರಿಗೆ ಎ-ಸೀರಿಸ್ ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಲಾಗಿದೆ. ಇದು ಫ್ಲ್ಯಾಗ್ ಶಿಪ್ ಲೆವೆಲ್ ಸೆಕ್ಯುರಿಟಿ ನೀಡುತ್ತದೆ. ಹಾರ್ಡ್​​​​​​ವೇರ್ ಆಧರಿತ ಸುರಕ್ಷತಾ ವ್ಯವಸ್ಥೆಯು ಹಾರ್ಡ್​​​ವೇರ್ ಮತ್ತು ಸಾಫ್ಟ್ ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ. ಪಿನ್ ಕೋಡ್, ಪಾಸ್ ವರ್ಡ್ ಮತ್ತು ಲಾಕ್ ಸ್ಕ್ರೀನ್ ಅನ್ಲಾಕ್ ಸೇರಿದಂತೆ ಸಾಧನದಲ್ಲಿನ ಅತ್ಯಂತ ಪ್ರಮುಖ ಡೇಟಾ ರಕ್ಷಿಸಲು ಇದು ಸಹಾಯ ಮಾಡುತ್ತದೆ.

ಬೆಲೆ ಎಷ್ಟು?: ಗ್ಯಾಲಕ್ಸಿ ಎ55 5ಜಿ 8GB+128GB ಮಾದರಿಗೆ 36,999 ರೂ., 8GB+256GB ಮಾದರಿಗೆ 39,999 ರೂ. ಮತ್ತು 12GB+256GB ಮಾದರಿಗೆ 42,999 ರೂ. ಬೆಲೆ ನಿಗದಿಪಡಿಸಲಾಗಿದೆ. ಗ್ಯಾಲಕ್ಸಿ ಎ35 5ಜಿ 8GB+128GB ಮಾದರಿಗೆ 27,999 ರೂ. ಮತ್ತು 8GB+256GB ಮಾದರಿಗೆ 30,999 ಬೆಲೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ : 5ಜಿ ಡೇಟಾ ಬಳಕೆ 4ಜಿಗಿಂತ 4 ಪಟ್ಟು ವೇಗದಲ್ಲಿ ಹೆಚ್ಚಳ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.