ETV Bharat / technology

POCO M6 Plus 5G and Buds X1 ಬಿಡುಗಡೆ: ಅದ್ಬುತ ವಿನ್ಯಾಸದ ಜೊತೆಗೆ ಅಮೋಘ ಧ್ವನಿ ಅನುಭವ - POCO launches M6 Plus 5G

author img

By ETV Bharat Karnataka Team

Published : Aug 2, 2024, 12:52 PM IST

ಎಂ6 ಪ್ರೊ ಯಶಸ್ಸಿನ ಬೆನ್ನಲ್ಲೇ ಇದೀಗ ಎಂ6 ಪ್ರೊ 5ಜಿ ಸ್ಮಾರ್ಟ್​ಫೋನ್​ ಮತ್ತು ಪೊಕೊ ಬಡ್ಸ್​ ಎಕ್ಸ್​1 ಇಯರಿಂಗ್​ ಬಡ್​​ ಬಿಡುಗಡೆಗೆ ಸಜ್ಜಾಗಿದೆ.

POCO launches M6 Plus 5G and Buds X1, unleashing power, style, and immersive sound experience
POCO M6 Plus 5G and Buds X1 (ಐಎಎನ್​ಎಸ್​)

ಬೆಂಗಳೂರು: ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಗ್ರಾಹಕರನ್ನ ಸೆಳೆಯುತ್ತಿರುವ ಪೊಕೊ (POCO) ಮೊಬೈಲ್ ಎಂ ಸರೀಸ್​ ಫೋನ್​ಗಳ ಬಿಡುಗಡೆಗೆ ಸಜ್ಜಾಗಿದ್ದು​ ಇದೀಗ ಪೊಕೊ ಎಂ6 ಪ್ಲಸ್​ 5ಜಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಎಂ6 ಪ್ರೊ ಯಶಸ್ಸಿನ ಬೆನ್ನಲ್ಲೇ ಇದೀಗ ಎಂ6 ಪ್ರೊ 5ಜಿಯನ್ನು ಬಿಡುಗಡೆ ಕಾಣುತ್ತಿದೆ. ರಿಂಗ್​ ಫ್ಲಾಶ್​ ವಿನ್ಯಾಸದ ಜೊತೆಗೆ ಪ್ರೀಮಿಯಂ ಗ್ಲಾಸ್​, 108ಎಂಪಿ ಕ್ಯಾಮೆರಾ ಜೊತೆಯಲ್ಲಿ 3ಎಕ್ಸ್​​ ಇನ್​ ಸೆನ್ಸಾರ್​ ಜೂಮ್​ ಹೊಂದಿದ್ದು, ಸ್ನಾಪ್​ಡ್ರಾಗನ್​ 4 ಜೆನ್​2 ಎಇ ಪ್ರೊಸೆಸ್​ ವೈಶಿಷ್ಟ್ಯವನ್ನು ಈ ಫೋನ್​ ಹೊಂದಿದೆ.

ಬಡ್ಸ್​ಗಳು ತಂತ್ರಜ್ಞಾನದ ಜೊತೆಗೆ ಅತ್ಯುತ್ತಮ ಸ್ಟೈಲ್ : ಇದೇ ವೇಳೆ, ಪೊಕೊ ಬಡ್ಸ್​ ಎಕ್ಸ್​1 ಕೂಡ ಗ್ರಾಹಕರಿಗೆ ಪರಿಚಯಿಸಿದೆ. ಇದು 40ಡಿಬಿ ಹೈಬ್ರಿಡ್​ ಆಕ್ಟೀವ್​ ನಾಯ್ಸ್​ ಕ್ಯಾನ್ಸಲೇಷನ್​ ಮತ್ತು ಗ್ರಾಹಕರಿಗೆ ಅನುಕೂಲಕರವಾಗಿ ಆಡಿಯೋವನ್ನು ಸೆಟ್ಟಿಂಗ್​ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬಡ್ಸ್​ಗಳು ತಂತ್ರಜ್ಞಾನದ ಜೊತೆಗೆ ಸ್ಟೈಲ್​ ಒಲವನ್ನು ಹೆಚ್ಚಾಗಿ ಹೊಂದಿರುವ ಜೆನ್​ಝೆಡ್​ ಗ್ರಾಹಕರನ್ನು ಮೋಡಿ ಮಾಡಲಿದೆ.

ಯುವ ಪೀಳಿಗೆಯ ಸವಾಲು ಮತ್ತು ಪ್ರೇರಣೆಯ ಗುರಿಯನ್ನು ಪೊಕೊ ಹೊಂದಿದೆ. ಅದರಲ್ಲೂ ವಿಶೇಷವಾಗಿ ಜೆನ್​ ಝೆಡ್​​ ಅವರಿಗೆ ವಿಶಿಷ್ಟ ವಿನ್ಯಾಸಿತ ಉತ್ಪನ್ನದ ವೈಶಿಷ್ಟ್ಯವನ್ನು ಇದು ಹೊಂದಿದೆ. ಬ್ರ್ಯಾಂಡ್ ಈಗಾಗಲೇ ಉದ್ಯಮದಲ್ಲಿ ಇತರ ಉತ್ಪನ್ನಗಳಿಗೆ ಪೈಪೋಟಿ ಒಡ್ಡಿದ್ದು, ಅತ್ಯುತ್ತಮ ಬೆಲೆಯೊಂದಿಗೆ ಹೊಸ ಶ್ರೇಷ್ಟ ಮಾನದಂಡಗಳನ್ನು ಹೊಂದಿದೆ.

ಪೊಕೊ ಎಂ6 ಪ್ಲಸ್​ 5ಜಿ ಮತ್ತು ಬಡ್ಸ್​ ಎಕ್ಸ್​1 ಪರಿಚಯಿಸಿರುವ ಪೊಕೊ ಬಜೆಟ್​ ಸ್ನೇಹಿ ಉತ್ಪನ್ನಗಳ ಜೊತೆಗೆ ಅನಿರೀಕ್ಷಿತ ಮೌಲ್ಯಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಇದರ ಜೊತೆಗೆ ಹೊಸ ಅವಿಷ್ಕಾರ ಮತ್ತು ಗ್ರಾಹಕರ ತೃಪ್ತಿಗೆ ಬದ್ಧವಾಗಿದೆ ಎಂದು ಮತ್ತೊಮ್ಮೆ ಸಾಬೀತು ಮಾಡಿದೆ.

ಗ್ರಾಹಕರ ಆಶಯ ಈಡೇರಿಸುವುದೇ ನಮ್ಮ ಬದ್ಧತೆ: ಈ ಕುರಿತು ಮಾತನಾಡಿರುವ ಪೊಕೊ ಇಂಡಿಯಾದ ದೇಶದ ಮುಖ್ಯಸ್ಥ ಹಿಮಾಂಶು ತಂಡನ್​, ಪೊಕೊದ ಮೂಲಕ ನಮ್ಮ ಉದ್ದೇಶ ಉತ್ತಮ ಪ್ರದರ್ಶನ ಮತ್ತು ಪ್ರೀಮಿಯಂ ಅನುಭವವನ್ನು ಪ್ರತಿಯೊಬ್ಬರಿಗೆ ನೀಡುವುದಾಗಿದೆ. ಎಂ ಸೀರಿಸ್​ ನಿರಂತರವಾಗಿ ಈ ನಿರೀಕ್ಷೆಯ ಸವಾಲನ್ನು ಎದುರಿಸಿದೆ. ಇದೀಗ ಎಂ 6 5ಜಿ ಈ ಸಂಪ್ರದಾಯವನ್ನು ಮುಂದುವರೆಸಲಿದ್ದು, ನಮ್ಮ ಗುರಿಯನ್ನು ಸಂಪೂರ್ಣವಾಗಿ ಬಿಂಬಿಸಲಿದೆ. ಎಂಜಿ ಪ್ಲಸ್​ 5ಜಿ ಮತ್ತು ಬಡ್ಸ್​ ಎಕ್ಸ್​1 ಅತ್ಯುತ್ತಮ ಪ್ರದರ್ಶನದ ಸ್ಟೈಲ್​ ಜೊತೆಗೆ ಉತ್ತಮ ಬಜೆಟ್​ನಲ್ಲಿ ಲಭ್ಯವಾಗಲಿದೆ. ಈ ಉತ್ಪನ್ನವೂ ಮಾರುಕಟ್ಟೆಯಲ್ಲಿ ಕ್ರಾಂತಿ ತರುತ್ತದೆ ಎಂದು ನಂಬಿಕೆ ಹೊಂದಿದ್ದು, ವೈಶಿಷ್ಟ್ಯಗಳಿಂದಾಗಿ ಹೊಸ ಮಾನದಂಡ ರೂಪಿಸಲಿದೆ ಎಂದರು.

ಪೊಕೊ ಎಂ6 ಪ್ಲಸ್​ 5ಜಿ: ಸ್ನಾಪ್​ಡ್ರಾಗನ್​ 4 ಜೆನ್​ ಎಇ ಪ್ರೊಸೆಸರ್​ ಹೊಂದಿದೆ, ಅಡ್ವಾನ್ಸ್ಡ್​​ 5ಜಿ ಚಿಪ್​ಸೆಟ್​​, ಕಟ್ಟಿಂಗ್​- ಎಡ್ಜ್​​ 4ಎನ್​ಎಂ ಪ್ರೊಸೆಸ್​ನೊಂದಿಗೆ ನಿರ್ಮಾಣ ಮಾಡಿದ್ದು ಇದು ಹೊಸ ಮಟ್ಟದ ಅನುಭೂತಿ ನೀಡಲಿದೆ. 460ಕೆಯ ಪ್ರಭಾವಶಾಲಿ AnTuTu (V10) ಬೆಂಚ್‌ಮಾರ್ಕ್ ಸ್ಕೋರ್ ಜೊತೆಗೆ ವೇಗವಾದ ಯುಎಫ್​ಎಸ್​ 2.2 ಸಂಗ್ರಹಣೆ ಮತ್ತು 8ಜಿಬಿ ವರ್ಚುಯಲ್ ರ್ಯಾಮ್​ ಸೇರಿದಂತೆ 16ಜಿಬಿ ರ್‍ಯಾಮ್​ ಹೊಂದಿದ್ದು, ಬಳಕೆದಾರರಿಗೆ ಅದ್ಬುತ ಅನುಭವ ನೀಡಲಿದೆ.

ವಿನ್ಯಾಸದಲ್ಲಿ ಗಮನಿಸುವುದಾದರೆ ಎರಡು ಗ್ಲಾಸ್​ ವಿನ್ಯಾಸ ಹಾಗೂ ಹೊಸ ರಿಂಗ್​ ಫ್ಲಾಶ್​ ಹೊಂದಿದೆ. ಸ್ಲಿಮ್​ ಪ್ರೂಫೈಲ್​ 8.32 ಎಂಎಂ ಥಿಕ್​ ಆಗಿದ್ದು, ಕೊರ್ನಿಂಗ್​ ಗೊರಿಲ್ಲಾ ಗ್ಲಾಸ್​ 3 ಪ್ರೊಟೆಕ್ಷನ್​ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗೆ ಐಪಿ53 ರೇಟಿಂಗ್​ ಹೊಂದಿದೆ. 5ಜಿಯಲ್ಲಿ ಅತಿ ದೊಡ್ಡ ಡಿಸ್​​ಪ್ಲೇ ಹೊಂದಿದ್ದು, ಇದು 6.79 ಇಂಚ್​ ಎಲ್​ಸಿಡಿ ಜೊತೆಗೆ 2400x1080 ಎಫ್​ಎಚ್​ಡಿ ಪ್ಲಸ್​ ರೆಸಲ್ಯೂಷನ್​ ಗುಣಮಟ್ಟದ ವೀಕ್ಷಣೆ ಅನುಭವ ನೀಡುತ್ತದೆ.

ಪೊಕೊ ಬಡ್ಸ್​ ಎಕ್ಸ್​1: ಇದು 40 ಡಿಬಿ ಹೈಬ್ರಿಡ್​ ಆಕ್ಟೀವ್​ ನಾಯ್ಸ್​​ ಕ್ಯಾನ್ಸಲೇಷನ್​ ಹೊಂದಿದ್ದು, ಹಿಂಬದಿಯ ಶಬ್ಧಗಳನ್ನು ಹತ್ತಿಕ್ಕುವ ಮೂಲಕ ಕೇಳುಗರ ಅನುಭವ ಮತ್ತಷ್ಟು ಇಮ್ಮಡಿಯಾಗುವಂತೆ ಮಾಡಲಿದೆ. 12.4 ಡೈನಾಮಿಕ್​ ಟೈಟಾನಿಯಂ ಡ್ರೈವರ್ಸ್​​, ಅಧಿಕ ಗುಣಮಟ್ಟದ ಶಬ್ಧ ಹೊಂದಿದೆ. ಜೊತೆಗೆ ಎಐ ಪರಿಸರಾತ್ಮಕ ಶಬ್ಧಗಳನ್ನು ರದ್ದು ಮಾಡುವ ಕ್ವಾಡ್​ ಮೈಕ್​ ಸೆಟ್ - ​ಅಪ್​ ಹೊಂದಿದೆ. ಬಿರುಗಾಳಿಯಲ್ಲೂ ಉತ್ತಮ ಕೇಳುವಿಕೆಗೆ ಸ್ವಯಂ ಅಭಿವೃದ್ಧಿಪಡಿಸಿದ ಆಂಟಿ - ವಿಂಡ್ ಶಬ್ದ ಅಲ್ಗಾರಿದಮ್ ಸ್ಪಷ್ಟ ಸಂವಹನವನ್ನು ಖಾತರಿಪಡಿಸುತ್ತದೆ. ಪೊಕೊ ಬಡ್ಸ್​​ ಎಕ್ಸ್​1 ಐದು ಇಕ್ಯೂ ಸೌಂಡ್​ ವೈಶಿಷ್ಟ ನೀಡಲಿದ್ದು, ಕೇಳುಗರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕೇಳುವಿಕೆ ಸೆಟ್ಟಿಂಗ್​ ಅನ್ನು ಮಾಡಿಕೊಳ್ಳಬಹುದು.

ಇನ್ನೂ ಏನೇನು ವೈಶಿಷ್ಟ್ಯಗಳಿವೆ: ಒಂದೇ ಚಾರ್ಜ್​ನಲ್ಲಿ ನಿರಂತರ 7 ಗಂಟೆವರೆಗೂ ನಿರಂತರ ಬಳಕೆ ಮಾಡಬಹುದು. ಜೊತೆಗೆ 35 ಗಂಟೆಗಳ ಒಟ್ಟು ಕೇಳುವಿಕೆ ಸಾಮರ್ಥ್ಯವನ್ನು ಈ ಬಡ್ಸ್​​ ಹೊಂದಿದೆ. ಈ ಮೂಲಕ ಯಾವುದೇ ತಡೆಯಿಲ್ಲದ, ಕೇಳುವ ಅನುಭವ ನೀಡಲಿದೆ. ಕ್ಸಿಯಾಮಿ ಇಯರ್​ ಬಡ್​ ಆಪ್​ ಬಳಕೆದಾರರ ಅನುಭವನ್ನು ವಿಭಿನ್ನ ಇಕ್ಯೂ ಮೂಡ್​ನೊಂದಿಗೆ ಮತ್ತು ಸೆಟ್ಟಿಂಗ್​ನೊಂದಿಗೆ ಮೋಡಿ ಮಾಡಲಿದೆ. ಜೊತೆಗೆ ದೀರ್ಘಾವಧಿವರೆಗೆ ಅವರ ಬಳಕೆಗೆ ಅರಾಮದಾಯವಾಗಿರುವಂತಹ ಸುರಕ್ಷತೆಯನ್ನು ಈ ಬಡ್ಸ್​ನಲ್ಲಿ ನೀಡಲಾಗಿದೆ.

ಪೊಕೊ ಬಡ್ಸ್​​ ಎಕ್ಸ್​1, ಐಪಿ 54 ಪ್ರೊಟೆಕ್ಷನ್​ ಹೊಂದಿದ್ದು, ನೀರು ಮತ್ತು ಧೂಳುಗಳಿಂದ ರಕ್ಷಣೆ ಹೊಂದಿದೆ. ಹೊರಾಂಗಣ ಚಟುವಟಿಕೆ ಮತ್ತು ವರ್ಕೌಟ್​ಗಳ ವೇಳೆ ಬಳಕೆಗೆ ಅತ್ಯುತ್ತಮವಾಗಿದೆ. ಬ್ಲೂಟೂತ್​ 5.3 ಸ್ಥಿರ ಸಂಪರ್ಕ ಮತ್ತು ಗೂಗಲ್​ ವೇಗವಾಗಿ ಹೊಂದಾಣಿಕೆಯಾಗಲಿದೆ. ಯಾವುದೇ ಪರಿಸ್ಥಿತಿಯಲ್ಲೂ ಕೂಡ ಅತ್ಯುತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದೆ.

ಪೊಕೊ ಎಂ6 ಪ್ಲಸ್​ 5ಜಿ ಮತ್ತು ಪೊಕೊ ಬಡ್ಸ್​ ಎಕ್ಸ್​ 1 ಭಾರತದಲ್ಲಿ ಆಗಸ್ಟ್​ 5 ರಿಂದ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿದೆ.

ಈ ಬ್ಯಾಂಕ್​​ ಕಾರ್ಡ್​ಗಳಲ್ಲಿ ಆಫರ್​: ಎಂ6 ಪ್ಲಸ್​ 5ಜಿ ಮೊಬೈಲ್​ ಮೂರು ಬಣ್ಣದಲ್ಲಿ ಲಭ್ಯವಾಗಲಿದೆ. ಐಸ್​ ಸಿಲ್ವರ್​, ಮಿಸ್ಟಿ ಲ್ಯಾವೆಂಡರ್​ ಮತ್ತು ಗ್ರಾಫೈಟ್​ ಬ್ಲಾಕ್​. 6ಜಿಬಿ ಪ್ಲಸ್​ 128 ಜಿಬಿ ಸ್ಟೋರೇಜ್​ ಬೆಲೆ 11,999, 8ಜಿಬಿ ಜೊತೆಗೆ 128 ಜಿಬಿ 13,499ರೂ. ಮೊದಲ ದಿನದ ಸೇಲ್​ನಲ್ಲಿ ಎಸ್​ಬಿಐ, ಎಚ್​ಡಿಎಫ್​ಸಿ ಮತ್ತು ಐಸಿಐಸಿಐ ಬ್ಯಾಂಕ್​ ಕಾರ್ಡ್​​ 1,000 ಆಫರ್​ ನೀಡಬೇಕಿದೆ. 6ಪಪ್ಲಸ್​ 128ಜಿಬಿ ಮೊಬೈಲ್​ ಮೇಲೆ 500 ರೂ ಕೂಪನ್​ ಆಫರ್​ ಇದೆ. ಪೊಕೊ ಬಡ್ಸ್​ ಎಕ್ಸ್​1 1,699 ರೂನಲ್ಲಿ ಲಭ್ಯವಿದೆ (ಐಎಎನ್​ಎಸ್​)

ಇದನ್ನೂ ಓದಿ: ಅತ್ಯಂತ ಸುಧಾರಿತ ಸ್ಮಾರ್ಟ್​ಪೋನ್​ ಹಾನರ್ Magic6 Pro 5G ಆಗಸ್ಟ್​ 2ರಂದು ಭಾರತದಲ್ಲಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.