Suchir Balaji Found Dead: ಚಾಟ್‌ಜಿಪಿಟಿಯನ್ನು ಅಭಿವೃದ್ಧಿಪಡಿಸಿದ ಪ್ರಮುಖ ಕೃತಕ ಬುದ್ಧಿಮತ್ತೆ ಕಂಪನಿಯಾದ ಓಪನ್‌ಎಐನಲ್ಲಿ 26 ವರ್ಷದ ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಅವರ ಸ್ಯಾನ್ ಫ್ರಾನ್ಸಿಸ್ಕೋ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುಚಿರ್ ಇತ್ತೀಚೆಗೆ OpenAI ನ ಕಾರ್ಯಶೈಲಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರ ಪ್ರಕಾರ, ಈ ಘಟನೆ ನವೆಂಬರ್ 26 ರಂದು ನಡೆದಿದ್ದು, ಡಿಸೆಂಬರ್ 14 ರಂದು ಬೆಳಕಿಗೆ ಬಂದಿದೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬಾಲಾಜಿ ಬಹಳ ಸಮಯದಿಂದ ತಮ್ಮ ಮನೆಯಿಂದ ಹೊರಬಂದಿರಲಿಲ್ಲ. ಅವನ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಫೋನ್ ಕರೆಗಳಿಗೆ ಸಹ ಸುಚಿರ್ ಉತ್ತರಿಸುತ್ತಿರಲಿಲ್ಲ. ಸುಚಿರ್ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಅವರ ಫ್ಲಾಟ್‌ಗೆ ತಲುಪಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಕೊಂಡರು. ಈ ಬಗ್ಗೆ ಅವರು ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಫ್ಲಾಟ್‌ನ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸುಚಿರ್ ಬಾಲಾಜಿ ಶವ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನಾಸ್ಪದ ವಸ್ತುಗಳ ಬಗ್ಗೆ ಸಾಕ್ಷಿಗಳು ಕಂಡು ಬಂದಿಲ್ಲ. ಇದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಹೇಳಿಕೆ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅವ್ಯವಹಾರದ ಬಗ್ಗೆ ಯಾವುದೇ ಪುರಾವೆಗಳು ಕಂಡು ಬಂದಿಲ್ಲ. ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತದೆ. ಸಾವಿನ ರೀತಿಯಲ್ಲಿ ಆತ್ಮಹತ್ಯೆ ಎಂದು ಅನುಮಾನ ವ್ಯಕ್ತವಾಗಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯ ನಿರ್ದೇಶಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುಚಿರ್ ಬಾಲಾಜಿ ಈ ವರ್ಷದ ಆಗಸ್ಟ್‌ನಲ್ಲಿ ಓಪನ್ AIಗೆ ರಾಜೀನಾಮೆ ನೀಡಿದ್ದರು ಮತ್ತು ಕಂಪನಿಯ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆಯ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರ ಸಾವಿನ ಸುದ್ದಿ ಹೊರಬಿದ್ದ ನಂತರ ಅನೇಕ ದೊಡ್ಡ ವ್ಯಕ್ತಿಗಳು ಆಶ್ಚರ್ಯಗೊಂಡಿದ್ದಾರೆ ಮತ್ತು ಇಂಟರ್ನೆಟ್‌ನಲ್ಲಿ ಈ ಬಗ್ಗೆ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು 'Hmmm' ಎಂದು ಪ್ರತಿಕ್ರಿಯಿಸಿದ್ದಾರೆ. ಸುಚಿರ್ ಬಾಲಾಜಿ ಸಾರ್ವಜನಿಕವಾಗಿ ಓಪನ್ಎಐ ತನ್ನ ಜನರೇಟಿವ್ ಎಐ ಪ್ರೋಗ್ರಾಂ ಚಾಟ್‌ಜಿಪಿಟಿಗೆ ತರಬೇತಿ ನೀಡಲು ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೇ ಹಕ್ಕುಸ್ವಾಮ್ಯದ ವಸ್ತುಗಳನ್ನು ಬಳಸುತ್ತಿದೆ ಎಂದು ಆರೋಪಿಸಿದರು. ಚಾಟ್‌ಜಿಪಿಟಿಯಂತಹ ತಂತ್ರಜ್ಞಾನಗಳು ಅಂತರ್ಜಾಲಕ್ಕೆ ಹಾನಿ ಮಾಡುತ್ತಿವೆ ಎಂದು ಹೇಳುವ ಮೂಲಕ ಗಂಭೀರವಾಗಿ ಆರೋಪ ಮಾಡಿದ್ದರು.
ಓದಿ: ಆಂಡ್ರಾಯ್ಡ್ ಎಕ್ಸ್ಆರ್ ಪರಿಚಯಿಸಿದ ಗೂಗಲ್ - ಸ್ಯಾಮ್ಸಂಗ್: ಇದರ ಕಾರ್ಯವೇನು ಗೊತ್ತಾ?