ETV Bharat / technology

ಗೂಗಲ್​ ಸರ್ಚ್​ಗೆ ಪೈಪೋಟಿ: ಎಐ ಸಾಮರ್ಥ್ಯದ 'ಸರ್ಚ್​ ಜಿಪಿಟಿ' ತಯಾರಿಸಿದ ಓಪನ್​ ಎಐ - OpenAI Builds Search Engine

author img

By ETV Bharat Karnataka Team

Published : Jul 26, 2024, 12:29 PM IST

ಓಪನ್​ ಎಐ ಇದೇ ಮೊದಲ ಬಾರಿಗೆ ಗೂಗಲ್ ಸರ್ಚ್​ ಎಂಜಿನ್ ಮಾದರಿಯ ಸರ್ಚ್​ ಜಿಪಿಟಿಯನ್ನು ಜಾರಿಗೊಳಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಸ್ಯಾನ್ ಫ್ರಾನ್ಸಿಸ್ಕೋ: ಸದ್ಯ ಗೂಗಲ್ ಪ್ರಾಬಲ್ಯ ಹೊಂದಿರುವ ಸರ್ಚ್​ ಎಂಜಿನ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಚಾಟ್ ಜಿಪಿಟಿ ತಯಾರಕ ಕಂಪನಿ ಓಪನ್ ಎಐ ಘೋಷಿಸಿದೆ. ಇಂಟರ್​ನೆಟ್​ನಲ್ಲಿ ನೈಜ ಸಮಯದಲ್ಲಿ ಮಾಹಿತಿಗಳನ್ನು ಹುಡುಕಾಡಲು ನೆರವಾಗುವ ಎಐ ಸಾಮರ್ಥ್ಯದ ಸರ್ಚ್ ಜಿಪಿಟಿ (SearchGPT) ಹೆಸರಿನ ಸರ್ಚ್​ ಎಂಜಿನ್ ಅನ್ನು ಲಾಂಚ್ ಮಾಡುವುದಾಗಿ ಅದು ಹೇಳಿದೆ.

ಸ್ಪಷ್ಟವಾದ ಮತ್ತು ಸಂಬಂಧಿತ ಮೂಲಗಳಿಂದ ವೇಗವಾಗಿ ಹಾಗೂ ಸಮಯೋಚಿತವಾಗಿ ಹುಡುಕಾಟದ ಫಲಿತಾಂಶಗಳನ್ನು ನೀಡಬಲ್ಲ ಎಐ ಸಾಮರ್ಥ್ಯದ ಸರ್ಚ್ ಜಿಪಿಟಿಯ ತಾತ್ಕಾಲಿಕ ಮೂಲಮಾದರಿಯನ್ನು ಪ್ರಸ್ತುತ ಪರೀಕ್ಷಿಸುತ್ತಿರುವುದಾಗಿ ಸ್ಯಾಮ್ ಆಲ್ಟ್​ಮನ್ ನೇತೃತ್ವದ ಚಾಟ್​ ಜಿಪಿಟಿ ಹೇಳಿದೆ.

ಸರ್ಚ್ ಜಿಪಿಟಿಯನ್ನು ಅದರ ಎಐ ಮಾದರಿಗಳ ಸಾಮರ್ಥ್ಯವನ್ನು ಮತ್ತು ಇಂಟರ್​ನೆಟ್​ನಲ್ಲಿನ ಮಾಹಿತಿಗಳನ್ನು ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಬಳಕೆದಾರರಿಗೆ ಸ್ಪಷ್ಟ ಮತ್ತು ಸಂಬಂಧಿತ ಮೂಲಗಳಿಂದ ವೇಗದ ಮತ್ತು ಸಮಯೋಚಿತ ಉತ್ತರಗಳನ್ನು ನೀಡುತ್ತದೆ. ಇದು ಹೇಗೆ ಕೆಲಸ ಮಾಡಲಿದೆ ಎಂಬುದರ ಬಗ್ಗೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲು ಆರಂಭದಲ್ಲಿ ಇದನ್ನು ಸಣ್ಣ ಸಂಖ್ಯೆಯ ಬಳಕೆದಾರರು ಮತ್ತು ಪಬ್ಲಿಷರ್​ಗಳಿಗೆ ಬಳಸಲು ಬಿಡುಗಡೆ ಮಾಡುತ್ತಿರುವುದಾಗಿ ಓಪನ್ ಎಐ ಹೇಳಿದೆ.

"ಈ ಮೂಲಮಾದರಿ ತಾತ್ಕಾಲಿಕವಾಗಿದ್ದರೂ, ಭವಿಷ್ಯದಲ್ಲಿ ಅತ್ಯುತ್ತಮವಾದ ಎಲ್ಲ ವೈಶಿಷ್ಟ್ಯಗಳನ್ನು ನೇರವಾಗಿ ಚಾಟ್ ಜಿಪಿಟಿಗೆ ಸಂಯೋಜಿಸಲು ನಾವು ಯೋಜಿಸಿದ್ದೇವೆ" ಎಂದು ಕಂಪನಿ ಹೇಳಿದೆ. ಸರ್ಚ್​ ಮಾಡುವಾಗ ಪ್ರಮುಖವಾಗಿ ಉಲ್ಲೇಖಿಸುವ ಮತ್ತು ಲಿಂಕ್ ಮಾಡುವ ಮೂಲಕ ಬಳಕೆದಾರರು ಪಬ್ಲಿಷರ್​ಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವಂತೆ ಸರ್ಚ್ ಜಿಪಿಟಿಯನ್ನು ವಿನ್ಯಾಸಗೊಳಿಸಲಾಗಿದೆ.

ನೀವು ಓರ್ವ ವ್ಯಕ್ತಿಯೊಂದಿಗೆ ಸಂಭಾಷಣೆಯಲ್ಲಿ ಮಾಡಿದಂತೆ, ಪ್ರತಿ ಪ್ರಶ್ನೆಯೊಂದಿಗೆ ಆಯಾ ಸಂದರ್ಭಗಳಿಗೆ ತಕ್ಕಂತೆ ಅನುಸರಣಾ ಪ್ರಶ್ನೆಗಳನ್ನು ಕೇಳಲು ನಿಮಗೆ ಸಾಧ್ಯವಾಗುತ್ತದೆ.

"ಪ್ರತಿಕ್ರಿಯೆಗಳು ಸ್ಪಷ್ಟವಾಗಿದ್ದು, ಇನ್-ಲೈನ್, ಹೆಸರಿಸಲಾದ ಗುಣಲಕ್ಷಣ ಮತ್ತು ಲಿಂಕ್​ಗಳನ್ನು ಹೊಂದಿರಲಿವೆ. ಹೀಗಾಗಿ ಮಾಹಿತಿ ಎಲ್ಲಿಂದ ಬರುತ್ತಿದೆ ಎಂಬುದು ಬಳಕೆದಾರರಿಗೆ ಗೊತ್ತಾಗಲಿದೆ ಮತ್ತು ಸೈಡ್​ ಬಾರ್​ನಲ್ಲಿ ಮೂಲ ಲಿಂಕ್​​ಗಳೊಂದಿಗೆ ಇನ್ನೂ ಹೆಚ್ಚಿನ ಫಲಿತಾಂಶಗಳು ಕಾಣಿಸಿಕೊಳ್ಳಲಿದ್ದು, ತ್ವರಿತವಾಗಿ ಇವುಗಳನ್ನು ಕೂಡ ಹುಡುಕಾಡಬಹುದು" ಎಂದು ಓಪನ್ಎಐ ಹೇಳಿದೆ. ಸ್ಥಳೀಯ ಮಾಹಿತಿ ಮತ್ತು ವಾಣಿಜ್ಯದಂಥ ಕ್ಷೇತ್ರಗಳಲ್ಲಿ ಸರ್ಚ್​ ಫಲಿತಾಂಶಗಳನ್ನು ನಿರಂತರವಾಗಿ ಸುಧಾರಿಸುತ್ತಲೇ ಇರುವುದಾಗಿ ಕಂಪನಿ ಹೇಳಿದೆ. ಚಾಟ್​ ಜಿಪಿಟಿಯ ಈ ಹೊಸ ಸರ್ಚ್​ ಎಂಜಿನ್ ಗೂಗಲ್​ಗೆ ಪೈಪೋಟಿ ನೀಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಮತ್ತಷ್ಟು ಸ್ಮಾರ್ಟ್​ ವೈಶಿಷ್ಟ್ಯಗಳೊಂದಿಗೆ ಮೆಟಾ ಎಐ ಈಗ ಹಿಂದಿಯಲ್ಲೂ ಲಭ್ಯ - Meta AI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.