ಅತ್ಯಂತ ಹಗುರ ಮೊಟೊರೊಲಾ 50 Edge Neo ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - Motorola 50 Edge Neo - MOTOROLA 50 EDGE NEO
ಮೊಟೊರೊಲಾ ತನ್ನ ಹೊಸ Motorola 50 Edge Neo ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.
By ANI
Published : Sep 16, 2024, 5:37 PM IST
ನವದೆಹಲಿ: ತನ್ನ ಎಡ್ಜ್ 50 ಸರಣಿಯನ್ನು ಮತ್ತಷ್ಟು ವಿಸ್ತರಿಸಿರುವ ಮೊಟೊರೊಲಾ ಸೋಮವಾರ ತನ್ನ ಹೊಸ ಸ್ಮಾರ್ಟ್ಫೋನ್ ಮೊಟೊರೊಲಾ 50 ಎಡ್ಜ್ ನಿಯೋವನ್ನು (Motorola 50 Edge Neo) ಭಾರತದಲ್ಲಿ ಬಿಡುಗಡೆ ಮಾಡಿದೆ. ಎಡ್ಜ್ 50, ಎಡ್ಜ್ 50 ಫ್ಯೂಷನ್, ಎಡ್ಜ್ 50 ಅಲ್ಟ್ರಾ ಮತ್ತು ಎಡ್ಜ್ 50 ಪ್ರೊನಂತಹ ಈ ಹಿಂದೆ ಬಿಡುಗಡೆಯಾದ ಫೋನ್ಗಳ ನಂತರ ಎಡ್ಜ್ 50 ಸರಣಿಯ ಐದನೇ ಸ್ಮಾರ್ಟ್ ಫೋನ್ ಇದಾಗಿದೆ.
ಹೊಸದಾಗಿ ಬಿಡುಗಡೆಯಾಗಿರುವ ಮೊಟೊರೊಲಾ ಎಡ್ಜ್ 50 ನಿಯೋ ಐಪಿ 68 ನೀರು ಪ್ರತಿರೋಧ ಮತ್ತು ಮಿಲಿಟರಿ ದರ್ಜೆಯ ಬಾಳಿಕೆ ಮಾನದಂಡಗಳನ್ನು ಹೊಂದಿದೆ. ಈ ಪ್ರಮಾಣೀಕರಣಗಳನ್ನು ಹೊಂದಿರುವ ಭಾರತದ ಅತ್ಯಂತ ಹಗುರವಾದ ಸ್ಮಾರ್ಟ್ ಫೋನ್ ಇದಾಗಿದೆ. ಇದು 6.4 ಇಂಚಿನ ಪಿಒಎಲ್ಇಡಿ ಎಲ್ಟಿಪಿಒ 1.5 ಕೆ ಡಿಸ್ ಪ್ಲೇ, ಎಚ್ಡಿಆರ್ 10 + ಬೆಂಬಲ, 3,000 ನಿಟ್ಸ್ ಪೀಕ್ ಬ್ರೈಟ್ನೆಸ್, 10 ಹರ್ಟ್ಸ್ನಿಂದ 120 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದೆ. ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸುವ ಸ್ಟಿರಿಯೊ ಸ್ಪೀಕರ್ ಗಳನ್ನು ಇದು ಒಳಗೊಂಡಿದೆ.
ವೈರ್ಲೆಸ್ ಚಾರ್ಜಿಂಗ್ಗೆ ಸಪೋರ್ಟ್: 4,310 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದರೊಂದಿಗೆ 68 ವ್ಯಾಟ್ ಚಾರ್ಜರ್ ನೀಡಲಾಗುತ್ತಿದೆ. ಈ ಫೋನ್ 15 ವ್ಯಾಟ್ ವೈರ್ ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ 14 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಇದರಲ್ಲಿದ್ದು, 5 ಬಾರಿ ಆಪರೇಟಿಂಗ್ ಸಿಸ್ಟಂ ಅಪ್ಡೇಟ್ಗಳನ್ನು ಮತ್ತು 5 ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ಗಳನ್ನು ನೀಡಲಾಗುವುದು.
32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ?: ಎಡ್ಜ್ 50 ನಿಯೋ 50 ಮೆಗಾಪಿಕ್ಸೆಲ್ ಸೋನಿ ಲೈಟ್ 700 ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ + ಮ್ಯಾಕ್ರೋ ಲೆನ್ಸ್ ಮತ್ತು 10 ಎಂಪಿ 3 ಎಕ್ಸ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದು 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಪ್ರೀಮಿಯಂ ವೇಗನ್ ಲೆದರ್ ಫಿನಿಶ್, ನಾಟಿಕಲ್ ಬ್ಲೂ, ಪೊಯಿನ್ಸಿಯಾನಾ, ಲ್ಯಾಟೆ ಮತ್ತು ಗ್ರಿಸೈಲ್ ಎಂಬ ನಾಲ್ಕು ಅದ್ಭುತ ಬಣ್ಣಗಳಲ್ಲಿ ಫೋನ್ ಸಿಗಲಿದೆ.
ಸೆ.24ರಿಂದ ಫ್ಲಿಪ್ಕಾರ್ಟ್ನಲ್ಲಿ ಲಭ್ಯ: ಈ ಹೊಸ ಸ್ಮಾರ್ಟ್ಫೋನ್ ಸೆಪ್ಟೆಂಬರ್ 24 ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ ಕಾರ್ಟ್, Motorola.in ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. 8 ಜಿಬಿ + 256 ಜಿಬಿ ಮಾದರಿಯ ಮೊಟೊರೊಲಾ 50 ಎಡ್ಜ್ ನಿಯೋ ಆವೃತ್ತಿಗೆ 23,999 ರೂ. ಬೆಲೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು ಮೂಲದ ಕಂಪನಿಯಿಂದ ಭಾರತದ ಮೊದಲ ಆಲ್ ಟೆರೆನ್ ವಾಹನ ಬಿಡುಗಡೆ - All Terrain Vehicle