ETV Bharat / technology

ಜಪಾನ್​ನ ಮೊದಲ ಖಾಸಗಿ ರಾಕೆಟ್ ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ ಸ್ಫೋಟ! - Private Rocket Explodes

ಜಪಾನ್​ನ ಖಾಸಗಿ ಕಂಪನಿ ಹಾರಿಬಿಟ್ಟ ಉಪಗ್ರಹ ಲಾಂಚ್ ಆದ​ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡು ನಾಶವಾಗಿದೆ.

ಜಪಾನ್​ನ ಮೊದಲ ಖಾಸಗಿ ರಾಕೆಟ್
ಜಪಾನ್​ನ ಮೊದಲ ಖಾಸಗಿ ರಾಕೆಟ್
author img

By ETV Bharat Karnataka Team

Published : Mar 13, 2024, 10:15 AM IST

ಓಕಿಯೋ (ಜಪಾನ್​): ಜಪಾನ್​ನ ಖಾಸಗಿ ಕಂಪನಿಯೊಂದು ಕಕ್ಷೆಗೆ ಹಾರಿಬಿಟ್ಟ ಉಪಗ್ರಹ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದೆ. ಭಾರೀ ಸದ್ದು, ಬೆಂಕಿಯೊಂದಿಗೆ ಹೊತ್ತಿ ಉರಿದ ರಾಕೆಟ್​ ಅರಣ್ಯ ಪ್ರದೇಶದೊಳಗೆ ಬಿದ್ದಿದೆ. ಈ ಘಟನೆ ಲೈವ್​ ವಿಡಿಯೋದಲ್ಲಿ ಸೆರೆಯಾಗಿದೆ.

ಇಲ್ಲಿನ ಸ್ಟಾರ್ಟ್​ಅಪ್​ ಕಂಪನಿಯ ನೇತೃತ್ವದಲ್ಲಿ ಹಾರಿಬಿಟ್ಟ ಕೈರೋಸ್ ಹೆಸರಿನ ಈ ರಾಕೆಟ್​ ಯಶಸ್ವಿಯಾಗಿ ಕಕ್ಷೆ ಸೇರಿದ್ದರೆ, ಜಪಾನ್​ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಯಿಂದ ಯಶಸ್ವಿ ಉಡಾವಣೆ ಕಂಡ ಮೊದಲ ರಾಕೆಟ್​ ಎಂಬ ಹಿರಿಮೆಗೆ ಪಾತ್ರವಾಗುತ್ತಿತ್ತು. ಅಲ್ಲದೇ, ರಾಕೆಟ್​ ಹಾರಿಬಿಟ್ಟ ಮೊದಲ ಖಾಸಗಿ ಕಂಪನಿಯಾಗಿ ಈ ಸ್ಟಾರ್ಟ್​ಅಪ್ ಇತಿಹಾಸ ಪುಟಗಳಲ್ಲಿ ಸೇರುತ್ತಿತ್ತು.

ಏನಾಯ್ತು?: ಟೋಕಿಯೋ ಮೂಲದ ಸ್ಪೇಸ್ ಒನ್ ಎಂಬ ಖಾಸಗಿ ಕಂಪನಿಯನ್ನು 2018 ರಲ್ಲಿ ಕ್ಯಾನನ್ ಎಲೆಕ್ಟ್ರಾನಿಕ್ಸ್, ಐಎಚ್​ಐ, ಶಿಮಿಜು ಮತ್ತು ಪ್ರಮುಖ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ. ಸಣ್ಣ ಪ್ರಮಾಣದ ಕೈರೋಸ್​ ಹೆಸರಿನ ರಾಕೆಟ್​ ಅನ್ನು ಬುಧವಾರ ಉಡಾವಣೆ ಮಾಡಿದೆ. ಇದಕ್ಕೂ ಮೊದಲು ಈ ರಾಕೆಟ್​ ಅನ್ನು ಹಲವು ಬಾರಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು.

ರಾಕೆಟ್​​ ಅನ್ನು ಕಕ್ಷೆಗೆ ಸೇರಿಸುವ ಪ್ರಯತ್ನ ನಡೆಸಿದ ಸ್ಪೇಸ್​ ಒನ್​ ಕಂಪನಿ ಬುಧವಾರ ಅದನ್ನು ಉಡಾವಣೆ ಮಾಡಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಅದು ಹಾರಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡು ಬೆಂಕಿ ಕಾರುತ್ತಾ ಮಧ್ಯ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ ಪ್ರದೇಶದಲ್ಲಿ ಬಿದ್ದಿದೆ.

ರಾಕೆಟ್​ ಬಿದ್ದ ಕೆಲವೇ ಸೆಕೆಂಡ್​ಗಳಲ್ಲಿ ಇಡೀ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡಿದೆ. ಜೊತೆಗೆ ಬೆಂಕಿಯ ಜ್ವಾಲೆಗಳು ಎದ್ದಿವೆ. ತಕ್ಷಣವೇ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿರುವುದು ಲೈವ್​ ವಿಡಿಯೋದಲ್ಲಿ ಕಾಣಬಹುದು.

ವಿಳಂಬವಾಗಿದ್ದ ಯೋಜನೆ: ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಈ ಯೋಜನೆಯ ಹಲವು ಬಾರಿ ಮುಂಡೂಡುತ್ತಲೇ ಬಂದಿತ್ತು. ಕಳೆದ ಶನಿವಾರ (ಮಾರ್ಚ್​ 9 ರಂದು) ಉಡಾವಣೆಗೆ ಸಿದ್ಧತೆ ನಡೆಸಿ ಕೊನೆಯಲ್ಲಿ ರದ್ದಾಗಿತ್ತು. ರಾಕೆಟ್​ ಚಲಿಸುವ ಕಕ್ಷೆಯಲ್ಲಿ ಸಮಸ್ಯೆ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಬಳಿಕ ಬುಧವಾರದಂದು ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡು ಲಾಂಚ್​ ಮಾಡಿದಾಗ ರಾಕೆಟ್ ಸ್ಫೋಟಗೊಂಡು ನಾಶವಾಗಿದೆ.

ಇನ್ನೂ, ಉಡಾವಣೆ ವಿಫಲವಾಗಿದ್ದರ ಬಗ್ಗೆ ಸ್ಟಾರ್ಟ್ಅಪ್ ಸ್ಪೇಸ್ ಒನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಜಪಾನ್‌ ಬಾಹ್ಯಾಕಾಶ ಪರಿಶೋಧನೆಗಾಗಿ ಸರ್ಕಾರದ ಅಡಿಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಏಜೆನ್ಸಿಯನ್ನು ಹೊಂದಿದೆ. ಇದು ಅಮೆರಿಕದ ನಾಸಾಕ್ಕೆ ಸಮಾನವಾಗಿದೆ.

ಇದನ್ನೂ ಓದಿ: ಫುಕುಶಿಮಾ ಪರಮಾಣು ದುರಂತಕ್ಕೆ 13 ವರ್ಷ: ಈಗ ಹೇಗಿದೆ ಸ್ಥಾವರದ ಸ್ಥಿತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.