ETV Bharat / technology

ಅತ್ಯಾಧುನಿಕ ಏರ್​ ಟ್ಯಾಕ್ಸಿ ತಂತ್ರಜ್ಞಾನ ಅನಾವರಣಗೊಳಿಸಿದ ಹ್ಯುಂಡೈ ಮೋಟಾರ್: ಏನಿದರ ಪ್ರಯೋಜನ? - Air Taxi Technology

author img

By ETV Bharat Karnataka Team

Published : Jul 29, 2024, 7:56 PM IST

ಹ್ಯುಂಡೈ ಮೋಟಾರ್ ಮತ್ತು ಕಿಯಾ ಜೊತೆಯಾಗಿ ಅತ್ಯಾಧುನಿಕ ಏರ್​ ಟ್ಯಾಕ್ಸಿ ತಂತ್ರಜ್ಞಾನ ಅನಾವರಣಗೊಳಿಸಿವೆ.

ಅತ್ಯಾಧುನಿಕ ಏರ್​ ಟ್ಯಾಕ್ಸಿ ತಂತ್ರಜ್ಞಾನ ಅನಾವರಣ
ಅತ್ಯಾಧುನಿಕ ಏರ್​ ಟ್ಯಾಕ್ಸಿ ತಂತ್ರಜ್ಞಾನ ಅನಾವರಣ (IANS)

ಸಿಯೋಲ್ : ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಗಳಾದ ಹ್ಯುಂಡೈ ಮೋಟಾರ್ ಮತ್ತು ಕಿಯಾ ಸೋಮವಾರ ಇಂಡೋನೇಷ್ಯಾದಲ್ಲಿ ತಮ್ಮ ಸಮಗ್ರ ಏರ್ ಟ್ಯಾಕ್ಸಿ ಸೇವಾ ತಂತ್ರಜ್ಞಾನವನ್ನು ಅನಾವರಣಗೊಳಿಸಿವೆ. ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತರಾ ಬಳಿಯ ಸಮರಿಂಡಾ ವಿಮಾನ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಂಯೋಜಿತ ಸಮಗ್ರ ಸುಧಾರಿತ ವಾಯು ಚಲನಶೀಲತೆ (ಎಎಎಂ) (advanced air mobility -AAM) ತಂತ್ರಜ್ಞಾನ ಪ್ರದರ್ಶಿಸಲಾಯಿತು.

ಹ್ಯುಂಡೈ ಮತ್ತು ಕಿಯಾ ಕಂಪನಿಯ ಬೇಡಿಕೆ - ಸ್ಪಂದಿಸುವ ಸಾರಿಗೆ ಸೇವೆಯಾದ ಶುಕಲ್ ಮತ್ತು ಸಂಬಂಧಿತ ಎಎಎಂ ಸೇವೆಗಳು ವಾಸ್ತವದಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಇಂಡೋನೇಷ್ಯಾದ ಸಾರಿಗೆ ಸಚಿವಾಲಯ, ನುಸಂತರಾ ಕ್ಯಾಪಿಟಲ್ ಸಿಟಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿದ್ದವರಿಗೆ ಶುಕಲ್ ಸೇವೆಯನ್ನು ನೇರವಾಗಿ ಬಳಸಿ ನೋಡುವ ಅವಕಾಶ ನೀಡಲಾಯಿತು.

ಕೊರಿಯಾ ಏರೋಸ್ಪೇಸ್ ರಿಸರ್ಚ್ ಇನ್ ಸ್ಟಿಟ್ಯೂಟ್​ನ ವಾಯು ವಾಹನ ಒಪ್ಪಾವ್ ಬಳಸಿ ವಿಮಾನ ಪ್ರದರ್ಶನ ನೀಡಲಾಯಿತು. ಹ್ಯುಂಡೈ ಮೋಟಾರ್ ಗ್ರೂಪ್ ನ ಪವರ್ ಟ್ರೇನ್ ತಂತ್ರಜ್ಞಾನದಿಂದ ಚಾಲಿತವಾದ ಒಪ್ಪಾವ್ ಪೂರ್ವನಿರ್ಧರಿತ ಮಾರ್ಗದಲ್ಲಿ ಸುಮಾರು 2 ಕಿಲೋಮೀಟರ್ ಹಾರಾಟ ನಡೆಸಿತು. 18,000 ಕ್ಕೂ ಹೆಚ್ಚು ದ್ವೀಪಗಳನ್ನು ಒಳಗೊಂಡಿರುವ ವಿಶಾಲವಾದ ಭೂಪ್ರದೇಶವನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ರಸ್ತೆ ಸಾರಿಗೆ ವ್ಯವಸ್ಥೆ ಸುಧಾರಿಸುವುದು ಬಹಳ ಕಷ್ಟಕರವಾಗಿದೆ. ಹೀಗಾಗಿ ಇಲ್ಲಿ ಏರ್​ ಟ್ಯಾಕ್ಸಿ ವ್ಯವಹಾರ ಬೆಳೆಯಲು ಹೆಚ್ಚಿನ ಅವಕಾಶವಿದೆ.

ಹ್ಯುಂಡೈ ಮೋಟಾರ್ ಗ್ರೂಪ್ ಸ್ಥಳೀಯ ಎಎಎಂ ವ್ಯವಸ್ಥೆಯನ್ನು ಸ್ಥಾಪಿಸಲು ಇಂಡೋನೇಷ್ಯಾದ ನುಸಂತರಾ ಕ್ಯಾಪಿಟಲ್ ಸಿಟಿ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತಿದೆ. ಹೊಸ ರಾಜಧಾನಿಯಲ್ಲಿ ಎಎಎಂ ಅನ್ನು ಅನ್ವಯಿಸುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದರಿಂದ ಹಿಡಿದು, ನೆಲ ಮತ್ತು ವಾಯು ಸಾರಿಗೆಯ ಪರಿಕಲ್ಪನೆಗಳನ್ನು ಮೌಲ್ಯೀಕರಿಸುವುದು ಮತ್ತು ಸ್ಥಳೀಯ ಪ್ರದರ್ಶನಗಳನ್ನು ನಡೆಸುವುದು ಸೇರಿದಂತೆ ವಿವಿಧ ಉಪಕ್ರಮಗಳಲ್ಲಿ ಕಂಪನಿ ಮತ್ತು ಸರ್ಕಾರ ಕೆಲಸ ಮಾಡುತ್ತಿವೆ.

ದುಬೈನಲ್ಲಿ ಏರ್​ ಟ್ಯಾಕ್ಸಿ ಆರಂಭ: ದುಬೈನಲ್ಲಿ ಇತ್ತೀಚೆಗೆ ಅತ್ಯಾಧುನಿಕ ಏರ್ ಟ್ಯಾಕ್ಸಿ ಸೇವೆ ಪ್ರಾರಂಭಿಸಲಾಗಿದೆ. ಈ ವೈಮಾನಿಕ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿ ಕನಿಷ್ಠ 350 ದಿರ್ಹಾಮ್ ಶುಲ್ಕ ಪಾವತಿಸಬೇಕಾಗುತ್ತದೆ. ಅಮೆರಿಕ ಮೂಲದ ಪ್ರಮುಖ ವಾಯುಯಾನ ಕಂಪನಿಯಿಂದ ನಿರ್ವಹಿಸಲ್ಪಡುವ ಏರ್ ಟ್ಯಾಕ್ಸಿಗಳನ್ನು ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮ ಗಮನದಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ಈ ಏರ್​ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಿ ದುಬೈನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು ಮತ್ತು ನಗರದ ಟ್ರಾಫಿಕ್​​ನ ಅಡೆತಡೆಗಳಿಲ್ಲದೇ ಬೇಕಾದಲ್ಲಿಗೆ ಪ್ರಯಾಣಿಸಬಹುದು.

ಇದನ್ನೂ ಓದಿ : ಬೆಳೆ ಇಳುವರಿ ಹೆಚ್ಚಿಸಲು ಕಡಿಮೆ ವೆಚ್ಚದ ಮೈಕ್ರೋಫ್ಲೂಯಿಡಿಕ್ ವ್ಯವಸ್ಥೆ: ಐಐಟಿ ಗುವಾಹಟಿ ವಿಜ್ಞಾನಿಗಳ ಸಾಧನೆ - Crop Yield Technology

ETV Bharat Logo

Copyright © 2024 Ushodaya Enterprises Pvt. Ltd., All Rights Reserved.