ETV Bharat / technology

ಹೊಸ 'ಆಫೀಸ್ ಜೆಟ್ ಪ್ರೊ' ಪ್ರಿಂಟರ್​ ಬಿಡುಗಡೆ ಮಾಡಿದ ಎಚ್​ಪಿ - ಆಫೀಸ್ ಜೆಟ್ ಪ್ರೊ

ಎಚ್​ಪಿ ಕಂಪನಿಯು ತನ್ನ ಹೊಸ ಪ್ರಿಂಟರ್​ಗಳ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಎಚ್​ಪಿ
HP introduces new range of printers for SMBs in India
author img

By ETV Bharat Karnataka Team

Published : Feb 29, 2024, 3:00 PM IST

ನವದೆಹಲಿ: ಪರ್ಸನಲ್ ಕಂಪ್ಯೂಟರ್ ಮತ್ತು ಪ್ರಿಂಟರ್​ಗಳನ್ನು ತಯಾರಿಸುವ ಪ್ರಖ್ಯಾತ ಕಂಪನಿ ಎಚ್​ಪಿ ಗುರುವಾರ ಭಾರತದಲ್ಲಿ ಹೊಸ ಶ್ರೇಣಿಯ 'ಆಫೀಸ್ ಜೆಟ್ ಪ್ರೊ' (OfficeJet Pro) ಪ್ರಿಂಟರ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರ ವಹಿವಾಟಿನ ಕಚೇರಿಗಳಿಗೆ ಸೂಕ್ತವಾಗುವಂತೆ ಇವನ್ನು ತಯಾರಿಸಲಾಗಿದೆ.

ಹೊಸ ಶ್ರೇಣಿಯಲ್ಲಿ ಆಫೀಸ್ ಜೆಟ್ ಪ್ರೊ 9720 ಮತ್ತು 9730 ವೈಡ್ ಫಾರ್ಮ್ಯಾಟ್ ಆಲ್-ಇನ್-ಒನ್ ಸರಣಿ, ಆಫೀಸ್ ಜೆಟ್ ಪ್ರೊ 9130 ಆಲ್-ಇನ್-ಒನ್ ಸರಣಿ ಮತ್ತು ಆಫೀಸ್ ಜೆಟ್ ಪ್ರೊ 8120 ಆಲ್-ಇನ್-ಒನ್ ಸರಣಿ ಸೇರಿವೆ. ಎಚ್​ಪಿ ಆಫೀಸ್ ಜೆಟ್ ಪ್ರೊ ಸರಣಿಯ ಆರಂಭಿಕ ಬೆಲೆ 21,562 ರೂ. ಆಗಿದೆ.

"ನಮ್ಮ ಆಫೀಸ್ ಜೆಟ್ ಪ್ರೊ ಸರಣಿಯು ಎ3 ಪ್ರಿಂಟಿಂಗ್, ದೊಡ್ಡ ಟಚ್ ಸ್ಕ್ರೀನ್ ಗಳು, ಸಮಗ್ರ ಭದ್ರತೆ ಮತ್ತು ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಭಾರತದಲ್ಲಿನ ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯವಹಾರೋದ್ಯಮಗಳ ವಿಭಿನ್ನ ಅಗತ್ಯಗಳನ್ನು ಪೂರೈಸುತ್ತದೆ" ಎಂದು ಎಚ್​ಪಿ ಇಂಡಿಯಾದ ಪ್ರಿಂಟಿಂಗ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ಸುನೀಶ್ ರಾಘವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿಯ ಪ್ರಕಾರ, ಆಫೀಸ್ ಜೆಟ್ ಪ್ರೊ ಸರಣಿಯು ಪಿ 3 ಬಣ್ಣದ ಬೆಂಬಲದೊಂದಿಗೆ ಉದ್ಯಮದ ಮೊದಲ ವಿಶಾಲ-ಸ್ವರೂಪದ ಬಿಸಿನೆಸ್​ ಇಂಕ್ ಜೆಟ್ ಪ್ರಿಂಟರ್​ಗಳ ನವೀನ ಶ್ರೇಣಿಯನ್ನು ಒಳಗೊಂಡಿದೆ. ಮುದ್ರಣ ಮತ್ತು ಸ್ಕ್ಯಾನಿಂಗ್ ಎರಡಕ್ಕೂ ಎ 3 ವರೆಗೆ ವಿವಿಧ ಪೇಪರ್ ಗಾತ್ರಗಳಲ್ಲಿ ನಿಖರವಾದ ಬಣ್ಣದ ಪ್ರಿಂಟಿಂಗ್ ಅನ್ನು ಖಚಿತಪಡಿಸುತ್ತದೆ.

ಈ ಸರಣಿಯು ದೊಡ್ಡ ಟಚ್ ಸ್ಕ್ರೀನ್ ಗಳು ಮತ್ತು ಆಧುನಿಕ ಇಂಟರ್ ಫೇಸ್ ಹೊಂದಿರುವುದರಿಂದ ಇದನ್ನು ಬಳಕೆದಾರರು ಸುಲಭವಾಗಿ ಬಳಸಬಹುದು. ಈ ಸರಣಿಯ ಪ್ರಿಂಟರ್​ಗಳನ್ನು ಶೇಕಡಾ 45 ರಷ್ಟು ಮರುಬಳಕೆ ಮಾಡಿದ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದೆ. ಇದು ಎಚ್​ಪಿ ಪರಿಸರ ಸ್ನೇಹಿ ಬದ್ಧತೆಗೆ ಅನುಗುಣವಾಗಿದೆ.

ಅಧಿಕೃತವಾಗಿ ಹೆವ್ಲೆಟ್-ಪ್ಯಾಕರ್ಡ್ ಕಂಪನಿ ಎಂದು ಕರೆಯಲ್ಪಡುವ ಎಚ್​ಪಿ ಕಂಪನಿಯನ್ನು ಜುಲೈ 2, 1939 ರಂದು ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿನ ಒಂದು ಕಾರು ಗ್ಯಾರೇಜ್​ನಲ್ಲಿ ಇಬ್ಬರು ದೂರದೃಷ್ಟಿಯ ಎಂಜಿನಿಯರ್​ಗಳಾದ ಬಿಲ್ ಹೆವ್ಲೆಟ್ ಮತ್ತು ಡೇವಿಡ್ ಪ್ಯಾಕರ್ಡ್ ಸ್ಥಾಪಿಸಿದರು. ಆರಂಭದಲ್ಲಿ ಎಚ್​ಪಿ ಎಲೆಕ್ಟ್ರಾನಿಕ್ ಪರೀಕ್ಷೆ ಮತ್ತು ಮಾಪನ ಉಪಕರಣಗಳನ್ನು ಉತ್ಪಾದಿಸುವತ್ತ ಗಮನ ಹರಿಸಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ 2ನೇ ಸೆಮಿಕಂಡಕ್ಟರ್​ ಸಂಶೋಧನಾ ಕೇಂದ್ರ ಆರಂಭಿಸಿದ ಸ್ಯಾಮ್​ಸಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.