ETV Bharat / technology

ಹುಡುಗಿಯರೇ ಸ್ಪೈ ಕ್ಯಾಮರಾಗಳನ್ನು ಪತ್ತೆ ಮಾಡುವುದು ಹೇಗೆ? ಇಲ್ಲಿವೆ ನಿಮಗೆ ಸೇಫ್ಟಿ ಟಿಪ್ಸ್​ - How To Detect Spy Cameras - HOW TO DETECT SPY CAMERAS

How To Detect Spy Cameras Around Us: ಇತ್ತೀಚಿನ ದಿನಗಳಲ್ಲಿ ಸ್ಪೈ ಕ್ಯಾಮೆರಾಗಳಲ್ಲಿ ಹುಡುಗಿಯರನ್ನು ಶೂಟ್ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಅನೇಕ ಮಹಿಳೆಯರು ಯಾರೊಂದಿಗೆ ಮಾತನಾಡಬೇಕೆಂದು ತಿಳಿಯದೆ ತೀವ್ರ ಭಾವನಾತ್ಮಕ ನೋವಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಈ ಸ್ಪೈ ಕ್ಯಾಮರಾಗಳನ್ನು ಸುಲಭವಾಗಿ ಗುರುತಿಸುವುದು ಹೇಗೆ ಎಂಬುದನ್ನು ತಿಳಿಯೋಣ..

HOW TO DETECT SPY CAMERAS AROUND US  DETECT SPY CAMERA  HOW TO DETECT HIDDEN CAMERA  DETECT CAMERA ON LAPTOP
ಹುಡುಗಿಯರೇ ಸ್ಪೈ ಕ್ಯಾಮೆರಾಗಳನ್ನು ಪತ್ತೆ ಮಾಡುವುದು ಹೇಗೆ (ETV Bharat)
author img

By ETV Bharat Tech Team

Published : Sep 2, 2024, 7:58 PM IST

How To Detect Spy Cameras Around Us: ಪ್ರಸ್ತುತ ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಬಳಕೆ ಹೆಚ್ಚಾಗಿದೆ. ನಾವು ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳು ಸೇರಿದಂತೆ ನಮ್ಮ ಮನೆಗಳ ಹೊರಗೆ ಮತ್ತು ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದ್ದೇವೆ. ಇವೆಲ್ಲವೂ ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಕಾಪಾಡುವುದು ಸತ್ಯ. ಇದೇ ವೇಳೆ ಕೆಲವು ಕ್ರಿಮಿನಲ್‌ಗಳು ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿ ಇತರರಿಗೆ ತಿಳಿಯದಂತೆ ವಿಡಿಯೋ ತೆಗೆಯುತ್ತಾರೆ. ನಂತರ ಅವರನ್ನು ಬೆದರಿಸಿ ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಕೊಡುವುದು ಹೆಚ್ಚಾಗಿದೆ.

ಸೈಬರ್ ಅಪರಾಧಿಗಳು ನಿಮ್ಮ ಫೋನ್, ಲ್ಯಾಪ್‌ಟಾಪ್, ಟ್ಯಾಬ್‌ನಂತಹ ಸಾಧನಗಳನ್ನು ನೇರವಾಗಿ ಹ್ಯಾಕ್ ಮಾಡುತ್ತಾರೆ. ಅಷ್ಟೇ ಅಲ್ಲ, ನಿಮ್ಮ ಕ್ಯಾಮರಾಗಳೊಂದಿಗೆ ನಿಮ್ಮನ್ನು ಟ್ರ್ಯಾಕ್ ಮಾಡುತ್ತಾರೆ. ಅವರು ನಿಮಗೆ ತಿಳಿಯದೆ ನಿಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಾರೆ. ಇವು ನಿಮ್ಮ ವೈಯಕ್ತಿಕ ಗೌಪ್ಯತೆಯನ್ನು ಉಲ್ಲಂಘಿಸಬಹುದು. ಆರ್ಥಿಕ ಮತ್ತು ಭಾವನಾತ್ಮಕ ನಷ್ಟದ ಅಪಾಯವೂ ಇದೆ. ಅದಕ್ಕಾಗಿಯೇ ಯಾರಾದರೂ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ನೀವು ಅನುಮಾನಿಸಿದರೆ ಅಥವಾ ಸ್ಪೈ ಕ್ಯಾಮೆರಾಗಳಿವೆ ಎಂದು ನೀವು ಭಾವಿಸಿದರೆ, ನೀವು ತಕ್ಷಣ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದು ಯಾವರೀತಿ ಎಂಬುದರ ಮಾಹಿತಿ ಇಲ್ಲಿದೆ.

ಕ್ಯಾಮೆರಾ ರೆಕಾರ್ಡಿಂಗ್ ಅನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಒಂದು ಅಧಿಕೃತ ರೆಕಾರ್ಡಿಂಗ್ ಮತ್ತು ಇನ್ನೊಂದು ಅನಧಿಕೃತ ರೆಕಾರ್ಡಿಂಗ್. ಉದಾಹರಣೆಗೆ, ಕಚೇರಿಗಳು, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಅಳವಡಿಸಲಾಗಿರುವ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗುವುದನ್ನು ಅಧಿಕೃತ ರೆಕಾರ್ಡಿಂಗ್ ಎಂದು ಕರೆಯಲಾಗುತ್ತದೆ. ಇದಲ್ಲದೆ, ಯಾರಿಗೂ ತಿಳಿಯದಂತೆ ಸ್ಪೈ ಕ್ಯಾಮರಾಗಳನ್ನು ಸ್ಥಾಪಿಸುವುದು ಅಥವಾ ನಿಮ್ಮ ಫೋನ್ ಅಥವಾ ಪಿಸಿಯನ್ನು ಹ್ಯಾಕ್ ಮಾಡುವುದು ಮತ್ತು ನಿಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡುವುದು ಅನಧಿಕೃತ ರೆಕಾರ್ಡಿಂಗ್ ಎಂದು ಕರೆಯಲಾಗುತ್ತದೆ.

ನಿಮ್ಮ ಫೋನ್‌ನೊಂದಿಗೆ ಸ್ಪೈ ಕ್ಯಾಮರಾಗಳನ್ನು ಪತ್ತೆ ಮಾಡಬಹುದು!

ನಿಮ್ಮ ಕೊಠಡಿ ಮತ್ತು ಸ್ನಾನಗೃಹದಲ್ಲಿ ಇರಿಸಲಾಗಿರುವ ರಹಸ್ಯ ಕ್ಯಾಮರಾಗಳನ್ನು ಮೊಬೈಲ್ ಫೋನ್ ಕ್ಯಾಮರಾದಿಂದಲೇ ಸುಲಭವಾಗಿ ಪತ್ತೆ ಮಾಡಬಹುದು. ರಹಸ್ಯ ಕ್ಯಾಮರಾಗಳು ಕತ್ತಲೆಯಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುವಂತೆ ಇನ್‌ಫ್ರಾರೆಡ್ ಮತ್ತು ಎಲ್‌ಇಡಿಗಳನ್ನು ಹೊಂದಿವೆ. ಆ ಕ್ಯಾಮರಾಗಳನ್ನು ಹುಡುಕಲು ಮೊದಲು ರೂಂನಲ್ಲಿನ ಎಲ್ಲಾ ಲೈಟ್​ಗಳನ್ನು ಆಫ್ ಮಾಡಬೇಕು. ವಿಂಡೋಗಳನ್ನು ಮುಚ್ಚಿ ಮತ್ತು ಕೋಣೆಯನ್ನು ಸಾಧ್ಯವಾದಷ್ಟು ಕತ್ತಲೆಯಾಗಿಸಿ. ನಂತರ ಮೊಬೈಲ್ ಕ್ಯಾಮರಾವನ್ನು ಆನ್ ಮಾಡಿ ಮತ್ತು ಇಡೀ ಕೋಣೆಯನ್ನು ಸ್ಕ್ಯಾನ್ ಮಾಡಿ. ಮೊಬೈಲ್ ಕ್ಯಾಮರಾ ಯಾವುದನ್ನಾದರೂ ಕೇಂದ್ರೀಕರಿಸಿದರೆ, ಅಲ್ಲಿ ಇನ್​ಫ್ರಾರೆಡ್​ ಕ್ಯಾಮೆರಾ ಇದೆ ಅಂತಾ ಅರ್ಥೈಸಿಕೊಳ್ಳಬೇಕು.

ಮೊಬೈಲ್ ಫೋನ್ ಫ್ಲ್ಯಾಶ್ ಲೈಟ್ ಬಳಸಿ ನೀವು ರಹಸ್ಯ ಕ್ಯಾಮರಾಗಳನ್ನು ನೇರವಾಗಿ ಪತ್ತೆ ಮಾಡಬಹುದು. ಇದಕ್ಕಾಗಿ ನೀವು ಕೋಣೆಗೆ ಹೋಗಿ ಫ್ಲ್ಯಾಷ್ ಲೈಟ್ ಆನ್ ಮಾಡಬೇಕಾಗುತ್ತದೆ. ಕೊಠಡಿಯಲ್ಲಿರುವ ಕನ್ನಡಿಗಳು, ಸ್ಮೋಕ್​ ಡಿಟೆಕ್ಟರ್​, ವಾಲ್​ ಪೇಯಂಟ್​, ಹೂವಿನ ಬೊಕ್ಕೆ ಸೇರಿದಂತೆ ಇತ್ಯಾದಿಗಳನ್ನು ಆಳವಾಗಿ ಮತ್ತು ಎಚ್ಚರಿಕೆಯಿಂದ ಗಮನಿಸಬೇಕು. ಸ್ಪೈ ಕ್ಯಾಮರಾ ಲೆನ್ಸ್‌ನಲ್ಲಿ ಫ್ಲ್ಯಾಷ್ ಲೈಟ್ ಬೆಳಕು ಬಿದ್ರೆ ಸಾಕು.. ತಕ್ಷಣವೇ ಆ ಕ್ಯಾಮರಾ ನಿಮಗೆ ಕಾಣಿಸುತ್ತದೆ.

ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಅನೇಕ ಹಿಡನ್ ಕ್ಯಾಮರಾ ಡಿಟೆಕ್ಟರ್ ಅಪ್ಲಿಕೇಶನ್‌ಗಳಿವೆ. ಇವು ಗುಪ್ತ ಕ್ಯಾಮರಾಗಳನ್ನು ಸ್ಕ್ಯಾನ್ ಮಾಡುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಪತ್ತೆ ಮಾಡುತ್ತವೆ. ಹಾಗಾಗಿ ಈ ಆಪ್​ಗಳನ್ನು ಡೌನ್ ಲೋಡ್ ಮಾಡಿ ಓಪನ್​ ಮಾಡಿದ್ರೆ ಸಾಕು.. ಅದು ಆಟೋಮೆಟಿಕ್​ ಆಗಿ ಫೋನಿನ ಕ್ಯಾಮರಾವನ್ನು ಬಳಸಿಕೊಂಡು ಗುಪ್ತ ಕ್ಯಾಮೆರಾಗಳು ಎಲ್ಲಿವೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡುತ್ತದೆ.

ಸ್ಪೈ ಕ್ಯಾಮೆರಾಗಳು ವೈ-ಫೈ ನೆಟ್‌ವರ್ಕ್‌ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಅವು ರೆಕಾರ್ಡ್ ಮಾಡಿದ ವಿಡಿಯೋವನ್ನು ವೈ-ಫೈ ಮೂಲಕ ರವಾನಿಸುತ್ತವೆ. ಆದ್ದರಿಂದ ನೀವು ಕೋಣೆಗೆ ಹೋದಾಗ, ಯಾವುದೇ ವೈಫೈ ನೆಟ್‌ವರ್ಕ್‌ಗಳಿವೆಯೇ ಎಂದು ಪರಿಶೀಲಿಸಿ. ಇದಕ್ಕಾಗಿ ನೀವು WiFiman, NetSpot ನಂತಹ ನೆಟ್ವರ್ಕ್ ಸ್ಕ್ಯಾನರ್ ಅಪ್ಲಿಕೇಶನ್​ಗಳನ್ನು ಸಹ ಬಳಸಬಹುದು. ಅವರ ಮೂಲಕ ನೀವು ಯಾವುದೇ ಅನುಮಾನಾಸ್ಪದ ನೆಟ್‌ವರ್ಕ್ ಅನ್ನು ಕಂಡುಕೊಂಡರೆ, ಅದನ್ನು ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ವರದಿ ಮಾಡಿ. ಅವರು ಪ್ರತಿಕ್ರಿಯಿಸದಿದ್ದರೆ, ಪೊಲೀಸರಿಗೆ ದೂರು ನೀಡಿ.

ಸ್ಮೋಕ್​ ಡಿಟೆಕ್ಟರ್​, ಗೋಡೆ ಗಡಿಯಾರಗಳು, ವಿದ್ಯುತ್ ಔಟ್ಲೆಟ್​ಗಳು, ಏರ್ ಪ್ಯೂರಿಫೈಯರ್​ಗಳು, ಲೈಟ್ ಬಲ್ಬ್​ಗಳು ಮುಂತಾದ ಹೋಟೆಲ್ ಕೊಠಡಿಗಳಲ್ಲಿ ಸ್ಪೈ ಕ್ಯಾಮರಾಗಳನ್ನು ಅಳವಡಿಸಲು ಅವಕಾಶವಿದೆ. ಆದ್ದರಿಂದ ನೀವು ಅನುಮಾನಾಸ್ಪದ ಸಾಧನಗಳು ಅಥವಾ ಹಿಡನ್ ಕ್ಯಾಮರಾಗಳನ್ನು ಕಂಡರೆ ಪೊಲೀಸರಿಗೆ ಕರೆ ಮಾಡಿ, ದೂರು ನೀಡಿ.

ಮನೆಯಲ್ಲಿ ಸ್ಪೈ ಕ್ಯಾಮರಾಗಳನ್ನು ಕಂಡು ಹಿಡಿಯುವುದ್ಹೇಗೆ?

  • ನೀವು ಇರುವ ಸ್ಥಳದಲ್ಲಿ ಯಾವುದೇ ಅನಧಿಕೃತ ರೆಕಾರ್ಡಿಂಗ್ ನಡೆಯುತ್ತಿದ್ದರೆ, ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್ ಕ್ಯಾಮೆರಾ ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತದೆ. ಇದು ಯಾರಾದರೂ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದರ್ಥ.
  • ನಿಮ್ಮ ಪಾಲ್ಗೊಳ್ಳುವಿಕೆ ಇಲ್ಲದೆ ಪಿಸಿ ಮತ್ತು ಫೋನ್‌ಗಳಲ್ಲಿನ ಲೈಟ್​ಗಳು ಆನ್ ಮತ್ತು ಆಫ್ ಆಗುತ್ತಿದ್ದರೆ, ಯಾರಾದರೂ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಅರ್ಥ.
  • ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಪತ್ತೆಹಚ್ಚಿದರೂ ಸಹ, ನೀವು ಅನಧಿಕೃತ ಕಣ್ಗಾವಲಿನಲ್ಲಿರುತ್ತೀರಿ ಎಂದು ತಿಳಿದಿರಬೇಕು.
  • ನಿಮ್ಮ ಲ್ಯಾಪ್‌ಟಾಪ್ ಅಥವಾ PC ಯಲ್ಲಿ ಪಾಪ್-ಅಪ್ ವಿಂಡೋಗಳು ಆಗಾಗ್ಗೆ ತೆರೆದುಕೊಳ್ಳುತ್ತಿದ್ದರೆ, ನೀವು ಅನಧಿಕೃತ ಕಣ್ಗಾವಲಿನ ನೆರಳಿನ ಅಡಿಯಲ್ಲಿರುತ್ತೀರಿ ಎಂದು ನೀವು ಅರ್ಥಮಾಡಿಕೊಳ್ಳಬೇಕು.
  • ನಿಮಗೆ ತಿಳಿಯದೆ ನಿಮ್ಮ PC ಹೋಮ್​ ಪೇಜ್​ನಲ್ಲಿ ಬದಲಾವಣೆಗಳು ಕಂಡು ಬಂದ್ರೆ ಬೇಹುಗಾರಿಕೆ ನಡೆಯುತ್ತಿದೆ ಎಂದು ಶಂಕಿಸಿ.
  • ನಿಮ್ಮ ಸಾಧನವು ಹ್ಯಾಂಗ್ ಆಗಿರಲಿ ಅಥವಾ ನಿಮ್ಮ ಸಿಸ್ಟಮ್ ಸ್ಟಾರ್ಟ್‌ಅಪ್‌ನಲ್ಲಿ ಅಜ್ಞಾತ ಪ್ರೋಗ್ರಾಂಗಳು ಪ್ರಾರಂಭವಾದರೆ ಆಗ ನಿಮ್ಮ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂದು ತಿಳಿದುಕೊಳ್ಳಬೇಕು.

ಅನಧಿಕೃತ ಕಣ್ಗಾವಲು ರೆಕಾರ್ಡಿಂಗ್‌ಗಳನ್ನು ತಡೆಯುವುದು ಹೀಗೆ!

  • ಕೆಲವು ರೀತಿಯ ವೆಬ್‌ಸೈಟ್‌ಗಳು ನಮ್ಮ ಮೇಲೆ ಕಣ್ಣಿಡುತ್ತವೆ. ಅದಕ್ಕಾಗಿಯೇ ಅಂತಹ ಸೈಟ್​ಗಳನ್ನು ಓಪನ್​ ಮಾಡಬಾರದು.
  • ನೀವು ಪತ್ತೇದಾರಿ ಕ್ಯಾಮೆರಾಗಳು ಅಥವಾ ಮೈಕ್ರೊಫೋನ್​​ಗಳನ್ನು ಪತ್ತೆ ಮಾಡಿದರೆ ತಕ್ಷಣವೇ ಅವುಗಳನ್ನು ಭೌತಿಕವಾಗಿ ನಾಶಪಡಿಸಿ. ಅಥವಾ ಅಲ್ಲಿಂದ ತೆಗೆದುಹಾಕಿ.
  • ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ PC ಕ್ಯಾಮರಾಗಳನ್ನು ಯಾವುದಾದರೂ ಸ್ಟಿಕ್ಕರ್‌ನೊಂದಿಗೆ ಕವರ್ ಮಾಡಿ. ಅವಶ್ಯಕತೆ ಇದ್ದಾಗ ಮತ್ತೆ ಅದನ್ನು ಬಳಸಿಕೊಳ್ಳಿ.

ಸ್ಪೈ ಕ್ಯಾಮರಾಗಳಿಂದ ರಕ್ಷಣೆ ಬೇಕೆ?

  • ನೀವು ಲ್ಯಾಪ್‌ಟಾಪ್ / ಪಿಸಿ, ಫೋನ್‌ಗಳನ್ನು ಬಳಸುತ್ತಿದ್ದರೆ ನೀವು ಬಲವಾದ ಪಾಸ್‌ವರ್ಡ್‌ಗಳನ್ನು ರಚಿಸಬೇಕು.
  • ಸುಮಾರು 12 ಅಂಕಿಗಳ ಪಾಸ್‌ವರ್ಡ್ ಅನ್ನು ಹೊಂದಿಸುವುದು ಉತ್ತಮ. ಅಕ್ಷರಗಳು, ಸಂಖ್ಯೆಗಳು, ವಿಶೇಷ ಅಕ್ಷರಗಳು ಇತ್ಯಾದಿಗಳನ್ನು ಒಳಗೊಂಡಂತೆ ಆ ಪಾಸ್​ವರ್ಡ್​ ಇರಬೇಕು.
  • ಸಾಧ್ಯವಾದರೆ ಟೂ ಫ್ಯಾಕ್ಟರ್​ ಅಥೆಂಟಿಫಿಕೇಷನ್​ ಎನೆಬಲ್​ ಮಾಡಿಕೊಳ್ಳಿ.
  • ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಾಧನಗಳನ್ನು ಕಾಲಕಾಲಕ್ಕೆ ಅಪ್​ಡೇಟ್​ ಮಾಡಿ.
  • ಅಗತ್ಯವಿದ್ದಲ್ಲಿ ವೆಬ್‌ಕ್ಯಾಮ್‌ಗಳು, ಸ್ಮಾರ್ಟ್ ಟಿವಿಗಳು ಅಥವಾ ಪ್ರಿಂಟರ್‌ಗಳಂತಹ IoT ಸಾಧನಗಳಿಗೆ ಇಂಟರ್ನೆಟ್ ಅನ್ನು ಸಂಪರ್ಕಿಸಬೇಡಿ.

ನೀವು ಕಡ್ಡಾಯ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಅನ್ನು ಬಳಸಬೇಕಾದ ಸಂದರ್ಭದಲ್ಲಿ ಇವನ್ನು ಉಪಯೋಗಿಸಿ..

  • IoT ಸಾಧನಗಳಿಗೆ VPN ಸಂಪರ್ಕವನ್ನು ಒದಗಿಸಿ.
  • ಇಂಟರ್ನೆಟ್ ಪ್ರವೇಶವನ್ನು ನಿರ್ಬಂಧಿಸಲು IP ವಿಳಾಸ ಫಿಲ್ಟರ್ ಬಳಸಿ.
  • ಎಂಪಿಕ್​ ಮಾಡಿರುವ ಐಪಿ ವಿಳಾಸವನ್ನು ಮಾತ್ರವೇ ಇಂಟರ್ನೆಟ್​ ಆ್ಯಕ್ಸಸ್​ ಬರುವಂತೆ ಸೆಟಿಂಗ್ಸ್​ ಬದಲಾಯಿಸಿ.
  • ಇಲ್ಲದಿದ್ದರೆ ಜಿಯೋ-ಐಪಿ ಫಿಲ್ಟರ್ ಬಳಸಿ.

ಅಂತಿಮವಾಗಿ ಏನು ಮಾಡಬೇಕು..

  • ನಿಮ್ಮ ಸಾಧನಕ್ಕೆ ಇಂಟರ್ನೆಟ್ ಪ್ರವೇಶವನ್ನು ತಕ್ಷಣವೇ ನಿಲ್ಲಿಸಬೇಕು.
  • ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದರೆ, ಪೊಲೀಸರಿಗೆ ದೂರು ನೀಡಿ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ.

ಓದಿ: ಕೈಗೆಟುಕುವ ದರದಲ್ಲಿ ಈ ಟಾಪ್​ 5 ಡಿಎಸ್​ಎಲ್​ಆರ್​ ಕ್ಯಾಮೆರಾಗಳು ಸೂಪರ್​! - Budget DSLR Cameras

ETV Bharat Logo

Copyright © 2024 Ushodaya Enterprises Pvt. Ltd., All Rights Reserved.