Google Theft Protection Feature: ಈ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಸುರಕ್ಷಿತ ವೈಶಿಷ್ಟ್ಯಗಳನ್ನು ಘೋಷಿಸಿದೆ. ಥೆಫ್ಟ್ ಡಿಟೆಕ್ಷನ್ ಲಾಕ್, ಆಫ್‌ಲೈನ್ ಡಿವೈಸ್ ಲಾಕ್ ಮತ್ತು ರಿಮೋಟ್ ಲಾಕ್ ವೈಶಿಷ್ಟ್ಯಗಳನ್ನು ಗೂಗಲ್ ಪರಿಚಯಿಸಿದೆ. ನಿಮ್ಮ ಸಾಧನಗಳನ್ನು ಕದ್ದರೆ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ಈ ಸುರಕ್ಷತಾ ಕ್ರಮಗಳನ್ನು ಉಪಯೋಗವಾಗಲಿದೆ.
ಟೆಕ್ ದೈತ್ಯ ಅಮೆರಿಕಾ ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯಗಳನ್ನು ಹೊರತರಲು ಪ್ರಾರಂಭಿಸಿದೆ. ಈ ವರ್ಷದ ನಂತರ Google Play ಸೇವೆಗಳ ಅಪ್ಡೇಟ್ ಮೂಲಕ Android 10+ ಚಾಲನೆಯಲ್ಲಿರುವ ಎಲ್ಲಾ ಸಾಧನಗಳಲ್ಲಿ ಈ ವೈಶಿಷ್ಟ್ಯಗಳ ಲಭ್ಯತೆಯನ್ನು Google ದೃಢಪಡಿಸಿದೆ. ಈ ಹೊಸ Android ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣಾ ಬನ್ನಿ..
Android ಕಳ್ಳತನ ರಕ್ಷಣೆ ವೈಶಿಷ್ಟ್ಯಗಳು:
ಥೆಫ್ಟ್ ಡಿಟೆಕ್ಷನ್ ಲಾಕ್ ವೈಶಿಷ್ಟ್ಯವು ನಿಮ್ಮ ಫೋನ್ ಅನ್ನು ಯಾರಾದರೂ ಕಿತ್ತುಕೊಂಡು ಕಾಲ್ನಡಿಗೆಯಲ್ಲಿ ಅಥವಾ ವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿದಾಗ ಪತ್ತೆಹಚ್ಚಲು Google AI ಅನ್ನು ಬಳಸುತ್ತದೆ. ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದ ಸಾಮಾನ್ಯ ಚಟುವಟಿಕೆಯನ್ನು ಅದು ಗ್ರಹಿಸಿದರೆ, ಅದು ಸ್ವಯಂಚಾಲಿತವಾಗಿ ಫೋನ್ ಸ್ಕ್ರೀನ್ ಅನ್ನು ಲಾಕ್ ಮಾಡುತ್ತದೆ. ಕಳ್ಳರು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾವನ್ನು ಸುಲಭವಾಗಿ ಕದಿಯುವುದನ್ನು ತಡೆಯುತ್ತದೆ.
ಒಂದುವೇಳೆ ಥೆಫ್ಟ್ ಡಿಟೆಕ್ಷನ್ ಲಾಕ್ ವೈಶಿಷ್ಟ್ಯವು ಕಳ್ಳತನವನ್ನು ಪತ್ತೆಹಚ್ಚಲು ವಿಫಲವಾದರೆ, ಆಫ್‌ಲೈನ್ ಡಿವೈಸ್ ಲಾಕ್ ಮತ್ತು ರಿಮೋಟ್ ಲಾಕ್ ವೈಶಿಷ್ಟ್ಯಗಳು ಸಹಾಯಕ್ಕೆ ಬರುತ್ತವೆ. ಕಳ್ಳನು ಕದ್ದ ಸಾಧನವನ್ನು ದೀರ್ಘಕಾಲದವರೆಗೆ ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸಿದರೆ ಈ ಸಾಧನವು ಗ್ರಿಡ್‌ನಿಂದ ಹೊರಗಿರುವಾಗಲೂ ಆಫ್‌ಲೈನ್ ಡಿವೈಸ್ ಲಾಕ್ ವೈಶಿಷ್ಟ್ಯವು ಆಟೋಮೆಟಿಕ್ ಆಗಿ ಲಾಕ್ ಮಾಡುತ್ತದೆ.
ರಿಮೋಟ್ ಲಾಕ್ ವೈಶಿಷ್ಟ್ಯವು ಇತರೆ ಪ್ರಯತ್ನಗಳನ್ನು ಒಳಗೊಂಡಂತೆ ಕದ್ದ ಸಾಧನದ ಇತರ ಚಿಹ್ನೆಗಳನ್ನು ಸಹ ಗುರುತಿಸಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ನಿಮ್ಮ ಫೋನ್ ಸಂಖ್ಯೆ ಮತ್ತು ತ್ವರಿತ ಭದ್ರತಾ ಸವಾಲನ್ನು ಹೊಂದಿರುವ ಯಾವುದೇ ಸಾಧನವನ್ನು ಬಳಸಿಕೊಂಡು ನಿಮ್ಮ ಫೋನ್ ಸ್ಕ್ರೀನ್ ಅನ್ನು ರಿಮೋಟ್ ಆಗಿ ಲಾಕ್ ಮಾಡಲು ಸಹ ನಿಮಗೆ ಅನುಮತಿಸುತ್ತದೆ. ಇದು ನಿಮ್ಮ ಖಾತೆಯ ವಿವರಗಳನ್ನು ಮರುಪಡೆಯಲು ಮತ್ತು ಫೈಂಡ್ ಮೈ ಡಿವೈಸಸ್ ನಂತಹ ವೈಶಿಷ್ಟ್ಯಗಳನ್ನು ಪ್ರವೇಶಿಸಲು ನಿಮಗೆ ಸಮಯವನ್ನು ನೀಡುತ್ತದೆ ಎಂದು Google ಹೇಳಿದೆ.
ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಲಾಕ್ ಮಾಡುವ ಮೊದಲು ಫೈಂಡ್ ಮೈ ಡಿವೈಸಸ್ ನಿಷ್ಕ್ರಿಯಗೊಳಿಸಲು ಅಥವಾ ಸ್ಕ್ರೀನ್ ಅವಧಿಯನ್ನು ಹೆಚ್ಚಿಸಲು ಕಳ್ಳನು ಪ್ರಯತ್ನಿಸಿದರೆ, ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಆರೋಪಿ ನಿಮ್ಮ ಫೋನ್‌ನ ಪಿನ್, ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ನಮೂದಿಸಬೇಕಾಗುತ್ತದೆ.
ಹೆಚ್ಚುವರಿಯಾಗಿ, Android ನ ಫ್ಯಾಕ್ಟರಿ ರೀಸೆಟ್ ರಕ್ಷಣೆಗೆ ಅಪ್‌ಗ್ರೇಡ್‌ನೊಂದಿಗೆ ಕದ್ದ ಸಾಧನವನ್ನು ರೀಸೆಟ್ಗೊಳಿಸಲು ಕಠಿಣ ಕ್ರಮಗಳನ್ನು ಅಳವಡಿಸಲು Google ಹೆಚ್ಚು ಪ್ರಯತ್ನಿಸುತ್ತಿದೆ. ಕಳ್ಳನು ಕದ್ದ ಸಾಧನವನ್ನು ರಿಸೆಟ್ ಮಾಡಲು ಒತ್ತಾಯಿಸಿದರೆ, ಅವನು ಅಥವಾ ಅವಳು ನಿಮ್ಮ Google ಖಾತೆಯ ಅನುಮತಿಸದೇ ರಿಸೆಟ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಫೋನ್ ಅನ್ನು ಮರು ಮಾರಾಟಕ್ಕೆ ಸೂಕ್ತವಲ್ಲದಂತೆ ಮಾಡುತ್ತದೆ. ಫೋನ್ ಕಳ್ಳತನಕ್ಕೆ ಪ್ರೋತ್ಸಾಹವನ್ನು ಕಡಿಮೆ ಮಾಡುತ್ತದೆ.