FOREST FIRES INCREASE CARBON: ಕಳೆದ ಎರಡರಿಂದ ಎರಡೂವರೆ ದಶಕಗಳಲ್ಲಿ ಕಾಳ್ಗಿಚ್ಚುಗಳಿಂದ ಇಂಗಾಲದ ಹೊರಸೂಸುವಿಕೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಕಾಳ್ಗಿಚ್ಚಿನಿಂದಾಗಿ ಇಂಗಾಲದ ಹೊರಸೂಸುವಿಕೆ ಶೇಕಡಾ 60 ರಷ್ಟು ಹೆಚ್ಚಾಗಿದೆ. ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಅಧ್ಯಯನ ವರದಿ ಶುಕ್ರವಾರ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಜಾಗತಿಕವಾಗಿ ಕಾಡಿನ ಬೆಂಕಿ ಮತ್ತು ಅರಣ್ಯೇತರ ಬೆಂಕಿಯ ನಡುವೆ ವ್ಯತ್ಯಾಸ ಗುರುತಿಸಲು ಅಧ್ಯಯನ ನಡೆದಿರುವುದು ಇದೇ ಮೊದಲನೆಯದು ಎಂದು ಹೇಳುತ್ತದೆ.
ಸುಮಾರು ಮೂರು ಪಟ್ಟು ಇಂಗಾಲದ ಹೊರ ಸೂಸುವಿಕೆ ಹೆಚ್ಚಳ: 2001 ಮತ್ತು 2023 ರ ನಡುವೆ ಯುರೇಷಿಯಾ ಮತ್ತು ಉತ್ತರ ಅಮೆರಿಕದ ಬೋರಿಯಲ್ ಕಾಡುಗಳಲ್ಲಿ ಕಾಳ್ಗಿಚ್ಚುಗಳಿಂದ ಹೊರಸೂಸುವಿಕೆಯು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಕಳೆದ ಎರಡು ದಶಕಗಳಲ್ಲಿ ಕಾಳ್ಗಿಚ್ಚುಗಳ ಸಂಖ್ಯೆಯು ಅವುಗಳ ತೀವ್ರತೆಯ ಜೊತೆಗೆ ಹೆಚ್ಚಾಗಿದೆ ಎಂದು ಅಧ್ಯಯನವು ಕಂಡು ಹಿಡಿದಿದೆ. ಇಂಗ್ಲೆಂಡ್, ಅಮೆರಿಕ, ನೆದರ್ಲ್ಯಾಂಡ್ಸ್, ಬ್ರೆಜಿಲ್ ಮತ್ತು ಸ್ಪೇನ್‌ನ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಈ ಅಧ್ಯಯನ ನಡೆಸಿದೆ.
ಹದಗೆಡುತ್ತಿರುವ ಗಾಳಿಯ ಗುಣಮಟ್ಟ: ಹವಾಮಾನ ಬದಲಾವಣೆಯ ಪ್ರಾಥಮಿಕ ಕಾರಣಗಳಾದ ಪಳೆಯುಳಿಕೆ ಇಂಧನ ಹೊರಸೂಸುವಿಕೆ ತಡೆಗಟ್ಟಿದರೆ ಮಾತ್ರ ಕಾಡಿನ ಬೆಂಕಿಯ ಹರಡುವಿಕೆಯನ್ನು ತಡೆಯಬಹುದು ಎಂದು ತಂಡ ಹೇಳುತ್ತದೆ. ಇತ್ತೀಚಿನ ಕಾಳ್ಗಿಚ್ಚಿನ ನಂತರ ಕಾಡುಗಳು ಹೆಚ್ಚು ತೀವ್ರವಾಗಿ ಹೊಗೆ ಸೂಸುತ್ತಿವೆ. ಇದರಿಂದಾಗಿ ವಾತಾವರಣದಲ್ಲಿ ಇನ್ನಷ್ಟು ಅಪಾಯಕಾರಿ ಹೊಗೆ ಹರಡುತ್ತಿದೆ. ಬೆಂಕಿಯ ಪ್ರದೇಶಗಳ ಬಳಿ ಹೊಗೆಯಿಂದ ಕಳಪೆ ಗಾಳಿಯ ಗುಣಮಟ್ಟಕ್ಕೆ ಒಡ್ಡಿಕೊಳ್ಳುವ ನಾಗರಿಕರು ಹೆಚ್ಚಿನ ಅಪಾಯ ಎದುರಿಸುತ್ತಾರೆ ಎಂದು ತಂಡ ಬಹಿರಂಗಪಡಿಸಿದೆ.
ಜಾಗತಿಕ ತಾಪಮಾನ: ಹೆಚ್ಚುತ್ತಿರುವ ಅರಣ್ಯ ಬೆಂಕಿಯ ಬೆದರಿಕೆಯಿಂದ ಅರಣ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಜಾಗತಿಕ ತಾಪಮಾನ ತಡೆಗಟ್ಟುವುದು ಅವಶ್ಯಕ. ಟಿಂಡಾಲ್ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ರಿಸರ್ಚ್‌ನ ಪ್ರಮುಖ ಲೇಖಕ ಡಾ. ಮ್ಯಾಥ್ಯೂ ಜೋನ್ಸ್, ಶೂನ್ಯ ಹೊರಸೂಸುವಿಕೆಗೆ ತುರ್ತು ಗಮನ ನೀಡುವ ಅಗತ್ಯವನ್ನು ಅಧ್ಯಯನವು ಒತ್ತಿ ಹೇಳುತ್ತದೆ ಎಂದು ಹೇಳಿದರು.
ತಾಪಮಾನದಲ್ಲಿ ಗಮನಾರ್ಹ ಏರಿಕೆ: ಬೆಂಕಿ ಹೊರಸೂಸುವಿಕೆಯ ಗಮನವು ಉಷ್ಣವಲಯದ ಕಾಡುಗಳಿಂದ ದೂರ ಮತ್ತು ಉಪೋಷ್ಣವಲಯದ ಕಡೆಗೆ ಚಲಿಸುತ್ತಿದೆ. ಪರಿಣಾಮವಾಗಿ, ಉಷ್ಣವಲಯದ ಕಾಡುಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಹೆಚ್ಚಳವನ್ನು ವ್ಯಾಪಕವಾಗಿ ಗಮನಿಸಲಾಗಿದೆ.
ಹೀಟ್‌ವೇವ್ ಬರಗಾಲದ ಸಮಯದಲ್ಲಿ ಕಂಡುಬರುವ ಬಿಸಿ ಪರಿಸ್ಥಿತಿಗಳು ತಾಪಮಾನ ಏರಿಕೆಗೆ ಕೊಡುಗೆ ನೀಡುತ್ತವೆ. ಇದು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ವೇಗವಾಗಿ ನಡೆಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಕಾಳ್ಗಿಚ್ಚುಗಳ ಸಂಖ್ಯೆ ಮಾತ್ರವಲ್ಲದೇ ಅವುಗಳ ತೀವ್ರತೆಯೂ ಆತಂಕಕಾರಿಯಾಗಿದೆ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ. ಕಾರ್ಬನ್ ಸುಡುವ ದರ 2001 ಮತ್ತು 2023 ರ ನಡುವೆ ಪ್ರಪಂಚದಾದ್ಯಂತದ ಕಾಡುಗಳಲ್ಲಿ ಸುಮಾರು ಶೇ 60 ರಷ್ಟು ಹೆಚ್ಚಿದೆ.
ಓದಿ: ಡಿಜಿಲಾಕರ್ ಲಕ್ಷಾಂತರ ನಾಗರಿಕರಿಗೆ ತಮ್ಮ ಜೀವನವನ್ನು ಸರಳಗೊಳಿಸಲು ಅನುವು ಮಾಡಿಕೊಡುತ್ತಿದೆ: ಕೇಂದ್ರ