Apple AI Beta Version Preview Released: ಆಪಲ್ ತನ್ನ ಸಾಫ್ಟ್ವೇರ್ನ ಬೀಟಾ ವರ್ಸನ್ ಪ್ರಿವ್ಯೂವ್ ಹೊರತಂದಿದೆ. ಇದು ಹೊಸ ಇಂಟೆಲಿಜೆನ್ಸ್ ಸಾಮರ್ಥ್ಯಗಳು ಸೇರಿದಂತೆ ಹೆಚ್ಚು ಮಾತನಾಡುವ ಚಾಟ್ಜಿಪಿಟಿ ಏಕೀಕರಣ ಒಳಗೊಂಡಿದೆ. ಇನ್ನು ಇದು ಪರೀಕ್ಷಾ ಹಂತದಲ್ಲಿದ್ದು, ಆದಷ್ಟು ಬೇಗ ಬಳಕೆದಾರರಿಗೆ ಲಭ್ಯವಾಗಲಿದೆ.
ಆಪಲ್ ಇಂಟೆಲಿಜೆನ್ಸ್ ತಿಂಗಳಿನಿಂದ ಪರೀಕ್ಷಾ ಹಂತದಲ್ಲಿದೆ. ಟೆಕ್ ದೈತ್ಯ ಕಂಪನಿ ಐಒಎಸ್ 18.1 ರ ಅಪ್ಡೇಟ್ನಲ್ಲಿ ಈ ಆಪಲ್ ಇಂಟೆಲಿಜೆನ್ಸ್ನ ಮೊದಲ ಅಲೆಯನ್ನು ಪರಿಚಯಿಸಲಿದೆ. ಮುಂದಿನ ವಾರದಲ್ಲಿ ಇದು ಆಪಲ್ ಬಳಕೆದಾರರ ಕೈಗೆ ಸಿಗುವ ನೀರಿಕ್ಷೆಯಿದೆ.
ಈ ಫೀಚರ್ಗಳ ಬಗ್ಗೆ ಆಪಲ್ ಈ ವರ್ಷದ ಆರಂಭದಲ್ಲಿ ವಾರ್ಷಿಕ ಡೆವಲಪರ್ ಸಮ್ಮೇಳನದಲ್ಲಿ ಪರಿಚಯಿಸಿತು. ಇದರಲ್ಲಿ ಜೆನ್ಮೊಜಿ, ಇಮೇಜ್ ಪ್ಲೇಗ್ರೌಂಡ್, ಕ್ಯಾಮೆರಾ ಕಂಟ್ರೋಲ್ನೊಂದಿಗೆ ವಿಜುವಲ್ ಇಂಟಲಿಜೆನ್ಸ್, ಓಪನ್ಎಐ ಚಾಟ್ಜಿಪಿಟಿ ಸೇರಿದಂತೆ ಇತರೆ ಫೀಚರಗಳು ಇವೆ. ಜೆನ್ಮೊಜಿ ಮತ್ತು ಇಮೇಜ್ ಪ್ಲೇಗ್ರೌಂಡ್ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸುವುದಕ್ಕೆ ಡಿವೈಜಲ್ ಇಮೇಜೆಸ್ ರೂಪಿಸಲು ಉಪಯೋಗವಾಗುತ್ತದೆ.
ಆಪಲ್ ಇಂಟೆಲಿಜೆನ್ಸ್ ಫೀಚರ್ ಚಾಟ್ಜಿಪಿಟಿ ಜೊತೆ ಕನೆಕ್ಟ್: ಕಂಪನಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆಪಲ್ ಇಂಟೆಲಿಜೆನ್ಸ್ ಫೀಚರ್ ಚಾಟ್ಜಿಪಿಟಿ ಜೊತೆ ಕನೆಕ್ಟ್ ಆಗಿರುತ್ತದೆ. ಒಂದು ವೇಳೆ ನೀವು ಆಪಲ್ ಸಿರಿಗೆ ಕಷ್ಟವಾದ ಪ್ರಶ್ನೆಗಳನ್ನು ಕೇಳಿದ್ರೆ ಆಗ ಸಿರಿ "Use Chat-GPT?" ಎಂಬ ಆಪ್ಷನ್ ತೋರಿಸುತ್ತದೆ. ಆಗ ನೀವು ಬೇಕಂದ್ರೆ ಆ ಆಪ್ಷನ್ ಆರಿಸಿಕೊಳ್ಳಬಹುದು ಅಥವಾ ಬೇಡವಾದಲ್ಲಿ ತಿರಸ್ಕರಿಸಬಹುದು. ಒಂದು ವೇಳೆ ನೀವು ಚಾಟ್ಜಿಪಿಟಿ ಆಪ್ಷನ್ ಆರಿಸಿಕೊಂಡರೇ Gen- AI ಸರ್ವಿಸ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಆ ಬಳಿಕ ಇದರ ಉತ್ತರ ಮೊಬೈಲ್ ಡಿಸ್ಪ್ಲೇ ಮೇಲೆ ಕಾಣಿಸುತ್ತದೆ.
ಪ್ರೀಮಿಯಂ Chat-GPT ಬಳಸಿಕೊಂಡರೆ ಹೆಚ್ಚುವರಿ ಪ್ರಯೋಜನ: ಈ ಸೌಲಭ್ಯವು ಎಲ್ಲ ಆಪಲ್ ಯೂಜರ್ಸ್ಗೆ ಉಚಿತವಾಗಿದೆ. ಇನ್ನು ಚಾಟ್ಜಿಪಿಟಿ ಪ್ರಿಮಿಯಂ ಆಯ್ಕೆ ಮಾಡಿಕೊಂಡವರು ಹೆಚ್ಚುವರಿ ಪ್ರಯೋಜನೆಗಳನ್ನು ಪಡೆಯಲು ಆಪಲ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಷ್ಟೇ ಅಲ್ಲ ವಿಷುವಲ್ ಕೂಡಾ Apple AI ಜೊತೆ ಕನೆಕ್ಟ್ ಹೊಂದಿದೆ. ಈ ವೈಶಿಷ್ಟ್ಯದ ಮೂಲಕ ಫೋನ್ನ ಕ್ಯಾಮೆರಾ ಕಂಟೆಂಟ್ ಅಥವಾ ವಸ್ತುಗಳನ್ನು ಪತ್ತೆ ಮಾಡಿ ಉತ್ತರ ನೀಡುತ್ತದೆ.
ಈ ವರ್ಷ ಜೂನ್‌ನಲ್ಲಿ ಆಪಲ್ ತನ್ನ AI ವೈಶಿಷ್ಟ್ಯಗಳನ್ನು ಘೋಷಿಸಿದಾಗ, ಈ ಸಾಫ್ಟ್‌ವೇರ್ ಎರಡು ಐಫೋನ್ ಮಾದರಿಗಳು, ಕೆಲವು ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಮಾತ್ರ ಲಭ್ಯವಿತ್ತು. ಆದರೆ, ಈಗ ಹೊಸದಾಗಿ ಬಿಡುಗಡೆಯಾದ ಐಫೋನ್ 16 ಮಾದರಿಗಳು ಮತ್ತು ಹೊಸದಾಗಿ ಬಿಡುಗಡೆಯಾದ ಮಿನಿ ಐಪ್ಯಾಡ್ ಸೇರಿದಂತೆ ಎಲ್ಲ ಮ್ಯಾಕ್‌ಗಳು ಆಪಲ್ ಇಂಟೆಲಿಜೆನ್ಸ್ ಅನ್ನು ಸಪೋರ್ಟ್ ಮಾಡುತ್ತವೆ. ಆಪಲ್ ಶೀಘ್ರದಲ್ಲೇ ಮತ್ತೊಂದು ಹೊಸ M4-Macs ಅನ್ನು ತರಲು ನೋಡುತ್ತಿದೆ. ಇದು ಆಪಲ್ ಇಂಟೆಲಿಜೆನ್ಸ್ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಹೊಸ ಪ್ರೊಸೆಸರ್‌ಗಳು AI ಕಾರ್ಯಗಳನ್ನು ಇನ್ನಷ್ಟು ವೇಗವಾಗಿ ಮಾಡುತ್ತವೆ.
ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿಗೂ ಬಂತು ಆಂಡ್ರಾಯ್ಡ್ 15 ಅಪ್ಡೇಟ್: ಈ ಎಲ್ಲ ಸರಣಿಗಳಿಗೆ Update ಲಭ್ಯ