ETV Bharat / technology

ನಿಮ್ಮ ಮಕ್ಕಳ ಆರೋಗ್ಯ, ಚಟುವಟಿಕೆಗಳ ಮೇಲೆ ನಿಗಾ ಇಡಬೇಕೆ?: ಹಾಗಾದ್ರೆ ಈ ಆ್ಯಪಲ್​ ವಾಚ್​ ಬಳಸಿ - apple watch for kids

author img

By ETV Bharat Karnataka Team

Published : Jul 25, 2024, 10:57 PM IST

ಅಮೆರಿಕದ ತಂತ್ರಜ್ಞಾನ ದೈತ್ಯ ಆ್ಯಪಲ್ ಇತ್ತೀಚೆಗೆ ಭಾರತದಲ್ಲಿ 'ಆ್ಯಪಲ್ ವಾಚ್ ಫಾರ್ ಯುವರ್ ಕಿಡ್ಸ್' ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇದು ಪೋಷಕರು ತಮ್ಮ ಮಕ್ಕಳನ್ನು ಬಹಳ ಸುಲಭವಾಗಿ ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಅದು ಹೇಗೆ ಎಂಬುದು ಇಲ್ಲಿದೆ.

ನಿಮ್ಮ ಮಕ್ಕಳ ಮೇಲೆ ಆರೋಗ್ಯ, ಚಟುವಟಿಕೆಗಳ ಮೇಲೆ ನಿಗಾ ಇಡಬೇಕೆ
ನಿಮ್ಮ ಮಕ್ಕಳ ಮೇಲೆ ಆರೋಗ್ಯ, ಚಟುವಟಿಕೆಗಳ ಮೇಲೆ ನಿಗಾ ಇಡಬೇಕೆ (ETV Bharat)

ಹೈದರಾಬಾದ್​: ನಮ್ಮ ಮಗು ಎಲ್ಲಿದೆ, ಹೇಗಿದೆ, ಏನು ಮಾಡುತ್ತಿದೆ, ಏನಾದರೂ ಸಮಸ್ಯೆಗೆ ಸಿಲುಕಿದೆಯಾ ಎಂಬುದು ಪ್ರತಿ ಪೋಷಕರನ್ನು ಸಾಮಾನ್ಯವಾಗಿ ಕಾಡುವ ಭಯವಿದು. ಮಗು ಸ್ಕೂಲಿನಲ್ಲಿ ಇದ್ದಾಗ, ಪೋಷಕರು ಆಫೀಸ್​​ನಲ್ಲಿ ಇದ್ದಾಗ ಇಂತಹ ಆತಂಕ ಸಹಜವಾಗಿಯೇ ಇರುತ್ತದೆ. ಇದಕ್ಕೆ ಪರಿಹಾರ ಸೂಚಕವಾಗಿ ಟೆಕ್ ದೈತ್ಯ ಆ್ಯಪಲ್ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ.

ಭಾರತದಲ್ಲಿ ಈ ವೈಶಿಷ್ಯವನ್ನು ಹೊಸದಾಗಿ ಪರಿಚಯಿಸಿದೆ. ಅದೇನೆಂದರೆ, ನಿಮ್ಮ ಮಗುವು ಐಫೋನ್ ಹೊಂದಿಲ್ಲದಿದ್ದರೂ ಸಹ Apple ವಾಚ್‌ನೊಂದಿಗೆ ನೇರವಾಗಿ ಕರೆಗಳು ಮತ್ತು ಮಸೇಜ್​ಗಳ ಮುಖಾಂತರ ಸಂಪರ್ಕ ಸಾಧಿಸಬಹುದು. ಜೊತೆಗೆ ಅವರ ಚಟುವಟಿಕೆಗಳ ಮೇಲೂ ನಿಗಾ ವಹಿಸಬಹುದು. ಇದೆಲ್ಲಾ ಮಾಡುವುದು 'ಆಪಲ್ ವಾಚ್ ಫಾರ್ ಯುವರ್ ಕಿಡ್ಸ್' ಎಂಬ ತಂತ್ರಾಂಶದಿಂದ.

ಈ ವೈಶಿಷ್ಟ್ಯದಿಂದ ಏನೆಲ್ಲಾ ಲಾಭ: ಆ್ಯಪಲ್ ವಾಚ್ ಫಾರ್ ಯುವರ್ ಕಿಡ್ಸ್ ವೈಶಿಷ್ಟ್ಯವನ್ನು ನಿಮ್ಮ ಮಗುವಿನ ವಾಚ್​ನಲ್ಲಿ ಸಕ್ರಿಯಗೊಳಿಸಿದ ನಂತರ ಕುಟುಂಬಸ್ಥರು, ಸ್ನೇಹಿತರು ನಿರಂತರ ಸಂಪರ್ಕ ಸಾಧಿಸಬಹುದು. ಆ್ಯಪಲ್ ಮ್ಯಾಪ್​, ಸಿರಿ, ಆರೋಗ್ಯ ಫೀಚರ್​​ಗಳನ್ನೂ ಸಹ ಇದರಲ್ಲಿ ಬಳಸಬಹುದು. ಅವಸರದ ಸಂದರ್ಭಗಳಲ್ಲಿ ತುರ್ತು SOS ಅನ್ನು ಸಹ ಬಳಸಬಹುದು. ಇದಲ್ಲದೆ, ಪೋಷಕರು ತಮ್ಮ ಆ್ಯಪಲ್ ವಾಚ್​​ನಿಂದ ಮಕ್ಕಳಿಗೆ, ಅವರಿಂದ ಪೋಷಕರಿಗೆ ಲೊಕೇಶನ್​​ ಕೂಡ ಹಂಚಿಕೊಳ್ಳಬಹುದು.

ಇಷ್ಟೇ ಅಲ್ಲದೇ, ಆ್ಯಪಲ್ ಕಂಪನಿ ತಂದಿರುವ ಈ ಹೊಸ ಫೀಚರ್ ಮೂಲಕ ಪಾಲಕರು ತಮ್ಮ ಮಕ್ಕಳ ಮೇಲೆ ಇನ್ನೂ ಹೆಚ್ಚಿನ ನಿಗಾ ವಹಿಸಬಹುದು. ಅವರಲ್ಲಿ ಇರುವ ವಾಚ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲೂಬಹುದು. ಅವರು ಯಾವುದೇ ಹೊಸ ಆ್ಯಪ್​ ಡೌನ್‌ಲೋಡ್ ಮಾಡಲು ಅಥವಾ ಹೊಸ ಕಾಂಟ್ಯಾಕ್ಟ್​​ ಅನ್ನು ಸೇವ್​ ಮಾಡಬೇಕಾದರೆ, ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ. ಆಗ ಮಗುವಿನ ಚಟುವಟಿಕೆಯನ್ನು ಕಾಲಕಾಲಕ್ಕೆ ಟ್ರ್ಯಾಕ್ ಮಾಡಬಹುದು. ಇದಲ್ಲದೆ, ಅವರು ತಮ್ಮ ಐಫೋನ್ ಮೂಲಕ ಟಾಸ್ಕ್​ಗಳು, ವೇಳಾಪಟ್ಟಿ ಮತ್ತು ರಿಮೈಂಡರ್​​ ಹೊಂದಿಸಬಹುದು. ಮಕ್ಕಳು ಶಾಲಾ ಸಮಯದಲ್ಲಿ ಅನಗತ್ಯ ಆ್ಯಪ್​ಗಳ ಬಳಕೆಯನ್ನು ತಡೆಯಲು 'SchoolMode' ಅನ್ನು ವಾಚ್​ನಲ್ಲಿ ಸಕ್ರಿಯಗೊಳಿಸಬಹುದು.

ಇದರಲ್ಲಿ ಮಾತ್ರ ಬಳಕೆ ಸಾಧ್ಯ: ಮಕ್ಕಳ ಆ್ಯಪಲ್ ವಾಚ್ ಅನ್ನು ಬಳಸಲು, ಇದು ಆ್ಯಪಲ್ ವಾಚ್ 4ನೇ ಸರಣಿಯೇ ಆಗಿರಬೇಕು. Apple Watch SE ಸರಣಿಯು ಕೂಡ ಈ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಅಲ್ಲದೇ, iOS 14, ಓಎಸ್​ನೊಂದಿಗೆ iPhone 6s ಅಥವಾ ಅಥವಾ ಅದಕ್ಕಿಂತ ಹೆಚ್ಚಿನ ಅಪ್ಡೇಟ್​ ಮಾದರಿಗಳಲ್ಲಿ ಬಳಸಬಹುದು. ಇದಕ್ಕಾಗಿ ಆ್ಯಪಲ್ ವಾಚ್ ಮತ್ತು ಸೆಲ್ಯುಲಾರ್ ಯೋಜನೆ ಅಗತ್ಯವಿದೆ. ಈ ವೈಶಿಷ್ಟ್ಯವನ್ನು ಬಳಸಿದರೆ, ಆ್ಯಪಲ್ ವಾಚ್ ಒಂದು ಬಾರಿ ಚಾರ್ಜ್‌ ಮಾಡಿದಲ್ಲಿ 14 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ಆ್ಯಪಲ್ ಕಂಪನಿ ಹೇಳಿದೆ.

ಇದನ್ನೂ ಓದಿ: Foldable Phone: 6ನೇ ತಲೆಮಾರಿನ ಗ್ಯಾಲಕ್ಸಿ ಫೊಲ್ಡಬಲ್ ಸ್ಮಾರ್ಟ್​ಫೋನ್​ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - SAMSUNG FOLDABLE PHONE PRICE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.