ETV Bharat / state

ಗಣೇಶ ಚತುರ್ಥಿ ಪ್ರಸಾದಕ್ಕೆ ಆಹಾರ ಪರವಾನಗಿ ಕಡ್ಡಾಯ: ಹಿಂದೂ ಜನಜಾಗೃತಿ ಸಮಿತಿ ಖಂಡನೆ - Hindu Jana Jagruti Samiti - HINDU JANA JAGRUTI SAMITI

ಪೆಂಡಾಲುಗಳಲ್ಲಿ ಪ್ರಸಾದ ತಯಾರಿಸುವ ವ್ಯಕ್ತಿ ಆಹಾರ ಪರವಾನಗಿ ಪ್ರಮಾಣಪತ್ರ ಪಡೆದಿರಬೇಕೆಂಬ ಕಡ್ಡಾಯ ಆದೇಶ ಜಾರಿಗೊಳಿಸಿ ಬಿಬಿಎಂಪಿ, ಈ ಪುಣ್ಯಕಾರ್ಯದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಕಿಡಿಕಾರಿದೆ.

ಗಣೇಶ ಚತುರ್ಥಿ ಪ್ರಸಾದಕ್ಕೆ ಆಹಾರ ಪರವಾನಗಿ ಕಡ್ಡಾಯ
ಗಣೇಶ ಚತುರ್ಥಿ ಪ್ರಸಾದಕ್ಕೆ ಆಹಾರ ಪರವಾನಗಿ ಕಡ್ಡಾಯ (ETV Bharat)
author img

By ETV Bharat Karnataka Team

Published : Sep 7, 2024, 10:42 PM IST

ಬೆಂಗಳೂರು: ಅನೇಕ ವರ್ಷಗಳಿಂದ ಹಿಂದೂ ಸಮಾಜ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸುತ್ತ ಬಂದಿದೆ. ಈ ಮೂಲಕ ಇಡೀ ಸಮಾಜ ಯಾವುದೇ ಭೇದವಿಲ್ಲದೆ ಒಂದಾಗುತ್ತದೆ. ಈ ಗಣೇಶೋತ್ಸವ ಪೆಂಡಾಲುಗಳಲ್ಲಿ ತಲತಲಾಂತರಗಳಿಂದ ನಮ್ಮ ಬಂಧು ಮಿತ್ರರಿಗೆ ಪ್ರಸಾದ ಹಂಚುವುದು, ಅನ್ನ ಸಂತರ್ಪಣೆಯಂತಹ ಪುಣ್ಯಕಾರ್ಯಗಳನ್ನು ಮಾಡಲಾಗುತ್ತದೆ. ಈ ವೇಳೆ ಪೆಂಡಾಲುಗಳಲ್ಲಿ ಪ್ರಸಾದ ತಯಾರಿಸುವ ವ್ಯಕ್ತಿ ಆಹಾರ ಪರವಾನಗಿ ಪ್ರಮಾಣಪತ್ರ ಪಡೆದಿರಬೇಕೆಂಬ ಕಡ್ಡಾಯ ಆದೇಶ ಜಾರಿಗೊಳಿಸಿ ಬಿಬಿಎಂಪಿ ಈ ಪುಣ್ಯಕಾರ್ಯದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಅನೇಕ ಕಡೆಗಳಲ್ಲಿ ಗಣೇಶಭಕ್ತರು ಅತ್ಯಂತ ಶ್ರದ್ಧಾ ಭಕ್ತಿಯಿಂದ ತಮ್ಮ ತಮ್ಮ ಮನೆಗಳಲ್ಲಿ ಪ್ರಸಾದದ ತಯಾರಿ ಮಾಡಿ ಅದನ್ನು ಪೆಂಡಾಲುಗಳಲ್ಲಿ ಇತರರಿಗೆ ಹಂಚುತ್ತಾರೆ. ಹೀಗಿರುವಾಗ ಅಂಥವರು ಆಹಾರ ಪರವಾನಗಿ ಪ್ರಮಾಣಪತ್ರ ಎಲ್ಲಿಂದ ತರಲಾಗುತ್ತದೆ. ಬೇರೆ ಬೇರೆ ಸಂದರ್ಭದಲ್ಲಿ ಅಕ್ರಮವಾಗಿ ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಿ ವಿತರಣೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರಿಶೀಲನೆ ಬಗ್ಗೆ ಬಿಬಿಎಂಪಿ ಎಂದಾದರೂ ಪ್ರಶ್ನಿಸುವುದೇ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಶರತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕ ವರ್ಷಗಳಿಂದ ಹಿಂದೂ ಸಮಾಜ ಈ ಪ್ರಸಾದ ಸೇವೆ ಮಾಡುತ್ತಾ ಬಂದಿದೆ. ಇದುವರೆಗೆ ಇದರ ಬಗ್ಗೆ ಹಿಂದೂ ಸಮಾಜದಲ್ಲಿ ಯಾವುದೇ ಆಕ್ಷೇಪವಿಲ್ಲದಿರುವಾಗ ಬಿಬಿಎಂಪಿಗೆ ಇದರಲ್ಲಿ ಮೂಗು ತೂರಿಸುವ ಅವಶ್ಯಕತೆ ಏನಿದೆ?. ಕೇವಲ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಇಂತಹ ಧೋರಣೆಗಳನ್ನು ತಂದು ಕಾಂಗ್ರೆಸ್ ಪುನಃ ತನ್ನ ಹಿಂದೂದ್ವೇಷವನ್ನು ಎತ್ತಿ ಹಿಡಿದಿದ್ದಲ್ಲದೇ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹಿಂದೂ ಮಹಾಸಭಾ ಗಣಪತಿ ತರುವ ವೇಳೆ ಎಂಎಲ್​ಸಿ ಸಿಟಿ ರವಿ ಭರ್ಜರಿ ಡ್ಯಾನ್ಸ್ - MLC C T Ravi Dance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.