ETV Bharat / business

MSCI EM IM ಸೂಚ್ಯಂಕದಲ್ಲಿ ಚೀನಾವನ್ನು ಮೀರಿಸಿದ ಭಾರತ: ಮೋರ್ಗಾನ್ ಸ್ಟಾನ್ಲಿ ವರದಿ - MSCI EM IM Index - MSCI EM IM INDEX

ಭಾರತವು MSCI ಎಮರ್ಜಿಂಗ್ ಮಾರ್ಕೆಟ್ಸ್ ಇನ್ವೆಸ್ಟಬಲ್ ಮಾರ್ಕೆಟ್ ಸೂಚ್ಯಂಕದಲ್ಲಿ ಚೀನಾವನ್ನು ಹಿಂದಿಕ್ಕಿದೆ. ಮೋರ್ಗನ್ ಸ್ಟ್ಯಾನ್ಲಿ ಪ್ರಕಟಿಸಿದ ವರದಿ ಪ್ರಕಾರ, ಸೆಪ್ಟೆಂಬರ್ 2024ರ MSCI EM IM ನಲ್ಲಿ ಭಾರತದ ತೂಕ ಶೇ. 22.27ಕ್ಕೆ ಏರಿದೆ.

ಮೋರ್ಗನ್ ಸ್ಟ್ಯಾನ್ಲಿ
ಮೋರ್ಗನ್ ಸ್ಟ್ಯಾನ್ಲಿ (PTI)
author img

By ETV Bharat Karnataka Team

Published : Sep 7, 2024, 10:48 PM IST

ನವದೆಹಲಿ: ಭಾರತವು MSCI ಎಮರ್ಜಿಂಗ್ ಮಾರ್ಕೆಟ್ಸ್ ಇನ್ವೆಸ್ಟಬಲ್ ಮಾರ್ಕೆಟ್ ಸೂಚ್ಯಂಕದಲ್ಲಿ ಚೀನಾವನ್ನು ಮೀರಿಸಿದೆ. ಮೋರ್ಗನ್ ಸ್ಟ್ಯಾನ್ಲಿ ಪ್ರಕಟಿಸಿದ ವರದಿ ಪ್ರಕಾರ, ಸೆಪ್ಟೆಂಬರ್ 2024ರ MSCI EM IM ನಲ್ಲಿ ಭಾರತದ ವೇಟೇಜ್​(ಮೌಲ್ಯ) ಶೇ. 22.27ಕ್ಕೆ ಏರಿದೆ. ಆದರೆ ಚೀನಾದ ತೂಕವು ಶೇ. 21.58ಕ್ಕೆ ಇಳಿದಿದೆ.

MSCI IMI 3,355 ಸ್ಟಾಕ್‌ಗಳನ್ನು ಮತ್ತು ದೊಡ್ಡ, ಮಧ್ಯಮ ಮತ್ತು ಸಣ್ಣ ಕ್ಯಾಪ್ ಕಂಪನಿಗಳನ್ನು ಒಳಗೊಂಡಿದೆ. ಇದು 24 ಉದಯೋನ್ಮುಖ ಮಾರುಕಟ್ಟೆ ದೇಶಗಳಲ್ಲಿನ ಷೇರುಗಳನ್ನು ಒಳಗೊಂಡಿದೆ ಮತ್ತು ಪ್ರತಿಯೊಂದು ದೇಶದಲ್ಲೂ ಸುಮಾರು 85 ಮುಕ್ತವಾಗಿ ಹೊಂದಾಣಿಕೆ ಮಾಡಿದ ಮಾರುಕಟ್ಟೆ ಬಂಡವಾಳವನ್ನು ಒಳಗೊಳ್ಳುವ ಗುರಿ ಹೊಂದಿದೆ.

ಪ್ರಮುಖ MSCI EM ಸೂಚ್ಯಂಕ (ಸ್ಟ್ಯಾಂಡರ್ಡ್ ಇಂಡೆಕ್ಸ್) ದೊಡ್ಡ ಮತ್ತು ಮಧ್ಯಮ ಮೊತ್ತದ ಕಂಪನಿಗಳನ್ನು ಒಳಗೊಂಡಿದೆ. IMI ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ, ಮಧ್ಯಮ ಮತ್ತು ಸಣ್ಣ ಮೊತ್ತದ ಷೇರುಗಳನ್ನು ಒಳಗೊಳ್ಳುತ್ತದೆ.

ಈ ಮರುಸಮತೋಲನವು ವ್ಯಾಪಕವಾದ ಮಾರುಕಟ್ಟೆ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಚೀನಾದಲ್ಲಿನ ಆರ್ಥಿಕ ಅಡೆತಡೆಗಳಿಂದಾಗಿ ಚೀನಾದ ಮಾರುಕಟ್ಟೆಗಳು ಸಂಕಷ್ಟ ಎದುರಿಸುತ್ತಿರುವಾಗ, ಭಾರತದ ಮಾರುಕಟ್ಟೆಗಳು ಅನುಕೂಲಕರವಾದ ಸ್ಥೂಲ ಆರ್ಥಿಕ ಪರಿಸ್ಥಿತಿಗಳಿಂದ ಲಾಭ ಪಡೆದಿವೆ. ಇತ್ತೀಚಿನ ಕಾಲದಲ್ಲಿ, ಭಾರತದ ಆರ್ಥಿಕತೆಯ ಬಲವಾದ ಸಮಷ್ಟಿ ಆರ್ಥಿಕ ಮೂಲಾಂಶಗಳು ಹಾಗೂ ಭಾರತೀಯ ಕಂಪನಿಗಳ ದೃಢವಾದ ಕಾರ್ಯನಿರ್ವಹಣೆಯಿಂದ ಪ್ರೇರಿತವಾಗಿ, ಭಾರತವು ಅತ್ಯಂತ ಶ್ರೇಷ್ಠ ಈಕ್ವಿಟಿ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ತೋರಿಸಿದೆ.

ಇದಲ್ಲದೇ, ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿನ ಲಾಭಗಳು ವ್ಯಾಪಕವಾಗಿದ್ದು, ಲಾರ್ಜ್ ಕ್ಯಾಪ್ ಮತ್ತು ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳಲ್ಲಿ ಪ್ರತಿಬಿಂಬಿತವಾಗಿವೆ. 2024ರ ಆರಂಭದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ (FDI) 47% ಹೆಚ್ಚಳ, ಬ್ರೆಂಟ್ ಕಚ್ಚಾ ಬೆಲೆಗಳ ಇಳಿಕೆ ಮತ್ತು ಭಾರತೀಯ ಸಾಲ ಮಾರುಕಟ್ಟೆಗಳಲ್ಲಿ ಗಣನೀಯ ವಿದೇಶಿ ಬಂಡವಾಳ ಹೂಡಿಕೆ (FPI)) ಈ ಸಕಾರಾತ್ಮಕ ಪ್ರವೃತ್ತಿಗೆ ಕೊಡುಗೆ ನೀಡಿದ ಪ್ರಮುಖ ಅಂಶಗಳಾಗಿವೆ.

ಪರಿಣಾಮವಾಗಿ, MSCI ತನ್ನ ಸೂಚ್ಯಂಕಗಳಲ್ಲಿ ಭಾರತೀಯ ಷೇರುಗಳ ಸಾಪೇಕ್ಷ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದೆ. EM IMI ಹೊರತುಪಡಿಸಿ, MSCI EM ಸೂಚ್ಯಂಕದಲ್ಲಿ ಚೀನಾದ ತೂಕದಲ್ಲಿ ಕುಸಿತದೊಂದಿಗೆ ಭಾರತದ ತೂಕದ ಏರಿಕೆಯಿಂದ ಇದು ಸ್ಪಷ್ಟವಾಗಿದೆ. ಮಾರ್ಚ್24 ರಿಂದ ಆಗಸ್ಟ್ 24ರ ಅವಧಿಯಲ್ಲಿ, MSCI EM ನಲ್ಲಿ ಭಾರತದ ತೂಕವು 18% ರಿಂದ 20% ಕ್ಕೆ ಏರಿದೆ, ಆದರೆ ಅದೇ ಅವಧಿಯಲ್ಲಿ ಚೀನಾದ ತೂಕವು 25.1% ರಿಂದ 24.5% ಕ್ಕೆ ಕುಸಿದಿದೆ.

ವಿಶ್ಲೇಷಕರ ಅಂದಾಜಿನ ಪ್ರಕಾರ, ಎಂಎಸ್ಸಿಐ ಇಎಂ ಐಎಂಐನಲ್ಲಿನ ಈ ಮರುಪರಿಶೀಲನೆಯ ನಂತರ, ಭಾರತೀಯ ಷೇರುಗಳು ಸುಮಾರು 4 ರಿಂದ 4.5 ಬಿಲಿಯನ್ ಅಮೆರಿಕನ್ ಡಾಲರ್​ ಹೂಡಿಕೆಗೆ ಸಾಕ್ಷಿಯಾಗಬಹುದು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಪೇಕ್ಷಿತ ಹೂಡಿಕೆಗಳ ವೇಗವನ್ನು ಕಾಪಾಡಿಕೊಳ್ಳಲು, ಭಾರತಕ್ಕೆ ದೇಶೀಯ ಮತ್ತು ವಿದೇಶಿ ಮೂಲಗಳಿಂದ ಬಂಡವಾಳದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಜಾಗತಿಕ ಇಎಂ ಸೂಚ್ಯಂಕಗಳಲ್ಲಿ ಭಾರತದ ತೂಕದ ಹೆಚ್ಚಳವು ಮಹತ್ವವನ್ನು ಪಡೆಯುತ್ತದೆ.

ಇದನ್ನೂ ಓದಿ: ವಾಲ್​​ ಸ್ಟ್ರೀಟ್​​ನಲ್ಲಿ ಮಹಾ ಕುಸಿತ: ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಏನಾಗಲಿದೆ? - ಏರಿಕೆಯೋ -ಇಳಿಕೆಯೋ? - INDIAN STOCK MARKET FORECAST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.