ಬೆಂಗಳೂರು: ಗಣೇಶ ಚತುರ್ಥಿಯ ಇಂದಿನ ದಿನ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಕುಸಿದಿವೆ. ಶುಕ್ರವಾರ 10 ಗ್ರಾಂ ಶುದ್ಧ ಚಿನ್ನದ ಬೆಲೆ ರೂ.74,045ರಷ್ಟಿದ್ದರೆ, ಶನಿವಾರ 491ರೂಗಳಷ್ಟು ಇಳಿಕೆ ಕಂಡು 73,554ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 85,440 ರೂಗಳಿಷ್ಟಿದ್ದರೆ, ಶನಿವಾರ ರೂ.2,076 ಇಳಿಕೆಯಾಗಿ ರೂ.83,364ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆ 73,554 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,364 ರೂ.
22 ಕ್ಯಾರೆಟ್ 10 ಗ್ರಾಂನ ಆಭರಣ ಚಿನ್ನಕ್ಕೆ 66800 ರೂ ಇದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬಹುದು.
ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಸಾಕಷ್ಟು ಕಡಿಮೆಯಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ 2518 ಡಾಲರ್ ಆಗಿದ್ದರೆ ಶನಿವಾರ 21 ಡಾಲರ್ ಇಳಿಕೆಯಾಗಿ 2497 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 27.95 ಡಾಲರ್ ಆಗಿದೆ.
ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?
ಕ್ರಿಪ್ಟೋಕರೆನ್ಸಿ ವ್ಯಾಪಾರವು ಶನಿವಾರ ಮಿಶ್ರ ಪ್ರವೃತ್ತಿಯಲ್ಲಿ ಮುಂದುವರೆದಿವೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಹೀಗಿವೆ?
ಕ್ರಿಪ್ಟೋ ಕರೆನ್ಸಿಯ ಪ್ರಸ್ತುತ ಬೆಲೆ
- ಬಿಟ್ ಕಾಯಿನ್ ರೂ.43,60,026
- ಎಥೆರಿಯಂ ರೂ.1,86,883
- ಟೆಥರ್ ರೂ.77.6
- ಬಿನಾನ್ಸ್ ನಾಣ್ಯ ರೂ.39,113
- ಸೊಲೊನಾ ರೂ.10,152