ಬೆಂಗಳೂರು: ನಿರ್ಬಂಧಿತ ಪ್ರದೇಶಕ್ಕೆ ಹೋಗಿ ವಿಡಿಯೋ ಮಾಡಿದ ಆರೋಪದ ಮೇರೆಗೆ ಯೂಟ್ಯೂಬರ್ವೊಬ್ಬನನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ನಿವಾಸಿಯಾಗಿರುವ ವಿಕಾಸ್ ಗೌಡ ಬಂಧಿತ ಯೂಟ್ಯೂಬರ್.
ಈ ಕುರಿತು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ಯಲಹಂಕ ನಿವಾಸಿದ ಯೂಟ್ಯೂಬರ್ ವಿಕಾಸ್ ಗೌಡ ಎಂಬಾತ ಏರ್ಪೋರ್ಟ್ ಅತಿಕ್ರಮ ಪ್ರವೇಶ ಮಾಡಿದ್ದಾನೆ. ವಿಮಾನದ ಟಿಕೆಟ್ ಪಡೆದು ಟ್ರಾವೆಲ್ ಮಾಡದೇ ರನ್ ವೇ ಬಳಿಯೇ 24 ಗಂಟೆ ಕಾಲ ಕಳೆದಿದ್ದೇನೆ ಎಂದು ವಿಮಾನ ನಿಲ್ದಾಣದ ಟರ್ಮಿನ್ ಒಳಗೆ ಮತ್ತು ರನ್ ವೇ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾಲನ್ನಲ್ಲಿ ಹಾಕಿ ಪ್ರಚಾರ ಪಡೆದುಕೊಂಡಿದ್ದಾನೆ. ಸಿಐಎಸ್ಎಫ್ ಅವರು ನೀಡಿದ ದೂರಿನ ಮೇರೆಗೆ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶ ಮತ್ತು ಸುಳ್ಳು ಪ್ರಚಾರ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಬಂಧಿತ ಯೂಟ್ಯೂಬ್ಗೆ ಹಾಕಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ. ನಾವು ಅಪ್ಲೋಡ್ ಆಗಿರುವ ವಿಡಿಯೋ ನೀಡುವಂತೆ ಯೂಟ್ಯೂಬರ್ಗೆ ಕೇಳಿದ್ದೇವೆ. ವಿಡಿಯೋ ಚಿತ್ರೀಕರಣ ಮಾಡಲು ಬಳಸಿದ್ದ ಗ್ಯಾಜೆಟ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಧಾರವಾಡದಲ್ಲಿ ಭಾರಿ ಪ್ರಮಾಣದ ದುಡ್ಡು ಪತ್ತೆ ಪ್ರಕರಣದ ತನಿಖೆ ಪೂರ್ಣ: ಹಣ ಬ್ಯಾಂಕ್ಗೆ ಶಿಫ್ಟ್ - Cash Found