ಮೈಸೂರು : ಹುಬ್ಬಳ್ಳಿಯ ಯುವತಿ ಅಂಜಲಿ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಆತನ ಬಗ್ಗೆ ಹೋಟೆಲ್ ಮಾಲೀಕ ಗೋವರ್ಧನ್ ಈಟಿವಿ ಭಾರತ ಜತೆ ಮಾತನಾಡಿದ್ದಾರೆ.
ಹುಬ್ಬಳ್ಳಿಯ ಯವತಿ ಅಂಜಲಿ ಕೊಲೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಮೈಸೂರಿನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮಂಗಳವಾರ ಹೋಟೆಲ್ ಮಾಲೀಕರಿಂದ ಹಣ ತೆಗೆದುಕೊಂಡು ಹುಬ್ಬಳ್ಳಿಗೆ ಹೋಗಿದ್ದಾನೆ. ಅನಂತರದ ಘಟನೆ ಹಾಗೂ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾಗ ವಿಶ್ವನ ವರ್ತನೆ ಬಗ್ಗೆ ಹೋಟೆಲ್ ಮಾಲೀಕ ಗೋವರ್ಧನ್ ಮಾತನಾಡಿದ್ದಾರೆ.
ವಿಶ್ವ ಅಲಿಯಾಸ್ ಗಿರೀಶ್ ಏಜೆನ್ಸಿಯಾ ಮೂಲಕ ಗೋವರ್ಧನ್ ಮನೆಯಲ್ಲಿ ಅವರ ತಂದೆಯನ್ನು ನೋಡಿಕೊಳ್ಳಲು ಬಂದಿದ್ದು, ಒಂದೂವರೆ ತಿಂಗಳು ಅವರ ಮನೆಯಲ್ಲೇ ಕೆಲಸ ಮಾಡಿದ್ದನು. ಬಳಿಕ ಕೆಲಸ ಬಿಟ್ಟು ಹುಬ್ಬಳ್ಳಿಗೆ ಹೋಗಿದ್ದಾನೆ. ಸ್ವಲ್ಪ ದಿನಗಳ ನಂತರ ಹುಬ್ಬಳ್ಳಿಯಿಂದ ಕರೆ ಮಾಡಿ ಪುನಃಹ ನಿಮ್ಮಲ್ಲಿಗೆ ಕೆಲಸಕ್ಕೆ ಬರುತ್ತೇನೆಂದು ಫೋನ್ ಮಾಡಿ ಬಂದಿದ್ದಾನೆ. ಕಳೆದ ಮೂರು - ನಾಲ್ಕು ತಿಂಗಳಿನಲ್ಲಿ ಒಂದೂವರೆ ತಿಂಗಳು ಮಾತ್ರ ನಮ್ಮಲ್ಲಿ ಕೆಲಸ ಮಾಡಿದ್ದು, 10-15 ದಿನಗಳಿಗೊಮ್ಮೆ ತಾಯಿಗೆ ಹುಷಾರಿಲ್ಲ ಎಂದು ಊರಿಗೆ ಹೋಗುತ್ತಿದ್ದ. ಆದರೆ, ಹೋಟೆಲ್ನಲ್ಲಿ ಸಿಬ್ಬಂದಿಗಳ ಜತೆ ಚನ್ನಾಗಿ ಇರುತ್ತಿದ್ದ. ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೋಟೆಲ್ ಮಾಲೀಕ ಗೋವರ್ಧನ್ ವಿವರಿಸುತ್ತಾರೆ.
ತಾಯಿಗೆ ಹುಷಾರಿಲ್ಲ ಎಂದು ಹೇಳಿ ಕೆಲಸ ಮಾಡಿದ ಹಣ ಪಡೆದು ಮಂಗಳವಾರ ಸಂಜೆ ಹುಬ್ಬಳ್ಳಿಗೆ ಹೋಗಿದ್ದನು. ಬುಧವಾರ ಹುಬ್ಬಳ್ಳಿಯಿಂದ ಪೊಲೀಸರು ಪೋನ್ ಮಾಡಿ ವಿಶ್ವನ ಬಗ್ಗೆ ವಿಚಾರಿಸಿದ್ದರು. ಆತ ಕೊಲೆ ಮಾಡಿದ್ದಾನೆ ಎಂದು ಹುಬ್ಬಳ್ಳಿ ಪೊಲೀಸರು ಹೇಳಿದಾಗ ನನಗೆ ನಂಬಲು ಆಗಲಿಲ್ಲ. ಕೊನೆಗೆ ಹೋಟೆಲ್ನ ಇತರ ಹುಡುಗರು ವಿಡಿಯೋ ತೋರಿಸಿದರು. ಆಗ ನಂಬಿಕೆ ಬಂತು. ಆನಂತರ ಹುಬ್ಬಳ್ಳಿ ಪೊಲೀಸರು ಬಂದು ನನನ್ನು ಹಾಗೂ ಆತನ ಸಹಪಾಠಿಗಳನ್ನ ವಿಚಾರಿಸಿದರು. ಪೊಲೀಸರು ನಿನ್ನೆ ರಾತ್ರಿವರೆಗೂ ಮೈಸೂರಿನಲ್ಲಿ ಇದ್ದರು. ಆತ ಸಿಕ್ಕಿಬಿದ್ದ ಬಳಿಕ ಹುಬ್ಬಳ್ಳಿ ಪೊಲೀಸರು ಇಲ್ಲಿಂದ ತೆರಳಿದ್ದರು ಎಂದು ಹೇಳಿದರು.
ವಿಶ್ವ ಫೋನ್ ಬಳಸುತ್ತಿರಲ್ಲಿಲ್ಲ: ಅಂಜಲಿ ಕೊಲೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನ ಬಳಿ ಯಾವುದೇ ಪೋನ್ ಇರಲಿಲ್ಲ. ಕಳೆದ ಎರಡು ತಿಂಗಳ ಹಿಂದ ಆತನ ಬಳಿ ಪೋನ್ವೊಂದು ಇತ್ತು. ಆದರೆ ಆ ನಂತರ ಫೋನ್ ಇರಲಿಲ್ಲ. ತಾಯಿಗೆ ಹೋಟೆಲ್ ಸಿಬ್ಬಂದಿಯವರ ಫೋನ್ನಿಂದ ಕರೆ ಮಾಡುತ್ತಿದ್ದ. ಆತ ನಮಗೆ ಯಾವಾಗಲು ಕೆಟ್ಟವನು ಅನಿಸಲಿಲ್ಲ. ಯಾರೊಂದಿಗೂ ಜಗಳ ಮಾಡುತ್ತಿರಲ್ಲಿಲ್ಲ. ಒಳ್ಳೆಯ ರೀತಿಯಲ್ಲಿ ಇರುತ್ತಿದ್ದ. ಆದರೆ ಆತ ಕೊಲೆ ಮಾಡಿದನೆಂದು ಕೇಳಿದ ಮೇಲೆ ಆಶ್ಚರ್ಯವಾಯಿತು. ತಪ್ಪು ಮಾಡಿದರೆ ಶಿಕ್ಷೆಯಾಗಲಿ ಎಂದು ಹೋಟೆಲ್ ಮಾಲೀಕ ಗೋವರ್ಧನ್ ಈಟಿವಿ ಭಾರತ ನಡೆಸಿರುವ ಸಂದರ್ಶನದಲ್ಲಿ ಹೇಳಿದರು.
ಓದಿ: ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಬಂಧನ: ರೈಲಿನಿಂದ ಬಿದ್ದು, ತಲೆ ಮುಖಕ್ಕೆ ಗಾಯ - Anjali Murder Accused Arrested