ETV Bharat / state

ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಕಾಲರಾ ಲಕ್ಷಣಗಳೇನು?: ಈ ಕಾಯಿಲೆ ತಡೆಗಟ್ಟುವುದು ಹೇಗೆ? ತಜ್ಞರು ನೀಡಿದ ಸಲಹೆಗಳೇನು? - How to prevent cholera

author img

By ETV Bharat Health Team

Published : 2 hours ago

Updated : 41 minutes ago

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಲರಾ ಆತಂಕ ಸೃಷ್ಟಿಸಿದೆ. ಕಾಲರಾವು ವಾಕರಿಕೆ ಮತ್ತು ಹಠಾತ್ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣ, ಆಯಾಸವಾಗುವುದು, ಬಾಯಿ ಒಣಗುವುದು, ತೀವ್ರ ಬಾಯಾರಿಕೆ ರೋಗದ ಮುಖ್ಯ ಲಕ್ಷಣವಾಗಿದೆ.

HOW TO PREVENT CHOLERA
ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಕಾಲರಾ (ETV Bharat)

ಮಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಲರಾ ಆತಂಕ ಸೃಷ್ಟಿಸಿದೆ. ಕಾಲರಾವು ಸಾಂಕ್ರಾಮಿಕ ಕಾಯಿಲೆಯಾಗಿದೆ. ವಾಕರಿಕೆ ಮತ್ತು ಹಠಾತ್ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣ, ಆಯಾಸವಾಗುವುದು, ಬಾಯಿ ಒಣಗುವುದು, ತೀವ್ರ ಬಾಯಾರಿಕೆ ರೋಗದ ಮುಖ್ಯ ಲಕ್ಷಣವಾಗಿದೆ.

ಮಕ್ಕಳಲ್ಲಿ ತೀವ್ರ ನಿದ್ರಾಹೀನತೆ, ಜ್ವರ ಮತ್ತು ಸೆಳೆತದಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಮತ್ತು ಕಾಲರಾಕ್ಕೆ ಕಲುಷಿತ ಆಹಾರ ಸೇವನೆಯೇ ಮುಖ್ಯ ಕಾರಣವಾಗಿದೆ. ಕಾಲರಾ ಬಾರದಂತೆ ತಡೆಗಟ್ಟುವುದು ಅಗತ್ಯ ಕ್ರಮಗಳನ್ನು ವಹಿಸಬೇಕಾಗುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.

ದಕ್ಷಿಣ‌ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿಕೆ (ETV Bharat)

ಕಾಲರಾದ ಪ್ರಮುಖ ಲಕ್ಷಣಗಳೇನು?: ಕಾಲರಾದ ಮುಖ್ಯ ಲಕ್ಷಣವೆಂದರೆ ವಾಂತಿ, ಭೇದಿ. ನಿಯಂತ್ರಿಸಲಾಗದಷ್ಟು ವಾಂತಿ ಭೇದಿ ಮನುಷ್ಯನನ್ನು ಹೈರಾಣು ಮಾಡಿಬಿಡುತ್ತದೆ. ಇದರಲ್ಲಿ ಮೂರ್ನಾಲ್ಕು ಬಾರಿ ಭೇದಿಯಾದರೆ ಮನುಷ್ಯ ನಿರ್ಜಲೀಕರಣಕ್ಕೊಳಗಾಗಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಏನಿದು ಕಾಲರಾ ಕಾಯಿಲೆ?: ಕಾಲರಾ ರೋಗ ಪ್ರಮುಖವಾಗಿ ಕಲುಷಿತ ಆಹಾರ ಸೇವನೆಯಿಂದ ಹರಡುತ್ತದೆ. ಸಾಮಾನ್ಯವಾಗಿ ಕಾಲರಾ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಅತೀಸಾರ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ವಿಬ್ರಿಯೊ ಕಾಲರಾ ಬ್ಯಾಕ್ಟಿರಿಯಾದಿಂದ ಕೂಡಿದ ಕಲುಷಿತ ಆಹಾರ ಸೇವನೆಯಿಂದಲೇ ರೋಗ ಪತ್ತೆಯಾಗುತ್ತಿದ್ದು, ವಾಂತಿ, ಭೇದಿ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡುವುದು ಒಳಿತು ಎನ್ನುವುದು ಆರೋಗ್ಯ ಇಲಾಖೆ ತಿಳಿಸಿದೆ.

ಕಾಲರಾ ತಡೆಯುವುದು ಹೇಗೆ?:

  • ಆಹಾರ ಮತ್ತು ನೀರಿನಿಂದಲೂ ಕಾಲರಾ ಸೋಂಕು ಹರುಡುತ್ತದೆ. ಆದ್ದರಿಂದ ಶುದ್ಧ ನೀರು ಕುಡಿಯಬೇಕು.
  • ಜನರು ಹಣ್ಣು ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಕೆ ಮಾಡಬೇಕು.
  • ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳು ಗಾಡಿಯಲ್ಲಿ ಮಾರಾಟ ಮಾಡುವ ಆಹಾರಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬಾರದು.
  • ಶಾಲಾ - ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಸೇವಿಸುವ ಕುರಿತು ಅರಿವು ಮೂಡಿಸಬೇಕು.
  • ಕಾಲರಾ ಸೋಂಕು ಅತಿಸಾರ, ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸ್ವಚ್ಛತೆಗೆ ಆದ್ಯತೆ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
  • ಮನೆಗೆ ತರುವ ತರಕಾರಿ, ಹಣ್ಣು ಹಾಗೂ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಬಳಸಬೇಕು.
  • ತೀವ್ರವಾದ ಅತಿಸಾರ, ವಾಂತಿ ಹಾಗೂ ನಿರ್ಜಲೀಕರಣದಂತಹ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
  • ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣ ರೈಲು ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಲು ಹೆಚ್ಚಿನ ಅದ್ಯತೆ ನೀಡಬೇಕು.
  • ಮಳೆಗಾಲ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಬಾವಿ ಹಾಗೂ ಇತರ ಮೂಲದ ನೀರು ಪರೀಕ್ಷೆಯನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಕೈಗೊಂಡು ಅವುಗಳು ಬಳಕೆಗೆ ಯೋಗ್ಯವಾಗಿವೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು.
  • ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಬೇಕು. ಆಹಾರ ನಿರ್ವಹಣೆ ಮಾಡುವವರಲ್ಲಿ ಸಾಕಷ್ಟು ನೈರ್ಮಲ್ಯ ಇರಬೇಕು‌. ಕೈಗಳನ್ನು ನಿರಂತರವಾಗಿ ತೊಳೆಯುವ ಮೂಲಕ ಅವುಗಳನ್ನು ಸ್ವಚ್ಛವಾಗಿಡಬೇಕು. ಸೇವಿಸುವ ಮೊದಲು ಯಾವಾಗಲೂ ನೀರನ್ನು ಕುದಿಸಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಬೇಕು ಎಂದು ಆರೋಗ್ಯ ಇಲಾಖೆ ಸೂಚಿಸುತ್ತದೆ.

ಜಿಲ್ಲಾ ಆರೋಗ್ಯಾಧಿಕಾರಿ ಹೇಳಿಕೆ: ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ‌ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರು ''ಕಾಲರಾ ಕಲುಷಿತ ನೀರು, ಆಹಾರ ಸೇವಿಸುವುದರಿಂದ ಬರುವ ಖಾಯಿಲೆ. ಸ್ವಚ್ಛಯ ಕೊರತೆ ಇರುವಲ್ಲಿ ಈ ರೋಗ ಹರಡುತ್ತದೆ. ಇದನ್ನು ಶೀಘ್ರ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಗುಣಮುಖವಾಗುವ ಖಾಯಿಲೆ. ಎಲ್ಲರೂ ಬಿಸಿ ನೀರನ್ನು ಬಳಸಬೇಕು. ಮನೆಯ ಟ್ಯಾಂಕ್​ಗಳನ್ನು ಸ್ವಚ್ಛಗೊಳಿಸಬೇಕು. ಸರಿಯಾದ ರೀತಿಯಲ್ಲಿ ಕೈ ತೊಳೆಯುವುದು ಕೂಡ ಅಗತ್ಯ'' ಎಂದು‌ ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ನ್ನು ಸಂಪರ್ಕಿಸಬಹುದು:

https://www.ncbi.nlm.nih.gov/books/NBK526099/

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Last Updated : 41 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.