ETV Bharat / state

ಲೋಕ ಸಮರದಲ್ಲಿ ಮಾಜಿ ಸಿಎಂಗಳು - ಹಾಲಿ ಕೇಂದ್ರ ಸಚಿವರು; ಜೋಶಿ, ಹೆಚ್​ಡಿಕೆ, ಶೆಟ್ಟರ್, ಬೊಮ್ಮಾಯಿಗೆ ಮುನ್ನಡೆ - VIP candidates - VIP CANDIDATES

ರಾಜ್ಯದಲ್ಲಿ ಮೂವರು ಮಾಜಿ ಸಿಎಂಗಳು ಹಾಗೂ ಮೂವರು ಕೇಂದ್ರ ಸಚಿವರು ಕಣದಲ್ಲಿ ಇದ್ದಾರೆ. ಅವರ ಬಗೆಗಿನ ಕ್ಷಣಕ್ಷಣದ ಮಾಹಿತಿಯನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ಅವರೆಲ್ಲರ ಸಂಪೂರ್ಣ ವಿವರ ಈ ಸ್ಟೋರಿಯಲ್ಲಿದೆ.

Etv Bharavip-candidates-karnataka-lok-sabha-election-results-2024-complete-list-of-winners-updating-livet
Etv Bಲೋಕ ಸಮರದಲ್ಲಿ ಮಾಜಿ ಸಿಎಂಗಳು; ಹೆಚ್​ಡಿಕೆಗೆ ಪ್ರತಿಷ್ಠೆಯ ಪಣ, ಶೆಟ್ಟರ್​ಗೆ ಅಗ್ನಿ ಪರೀಕ್ಷೆ, ಗೆದ್ದು ಬೀಗುತ್ತಾರಾ ಬೊಮ್ಮಾಯಿ?harat (ETV Bharat)
author img

By ETV Bharat Karnataka Team

Published : Jun 4, 2024, 7:40 AM IST

Updated : Jun 4, 2024, 8:22 AM IST

ಮಂಡ್ಯ - ಕುಮಾರಸ್ವಾಮಿ - ಮುನ್ನಡೆ

ಬೆಳಗಾವಿ - ಜಗದೀಶ್​ ಶೆಟ್ಟರ್​ - ಮುನ್ನಡೆ

ಹಾವೇರಿ - ಬಸವರಾಜ ಬೊಮ್ಮಾಯಿ - ಮುನ್ನಡೆ

ಧಾರವಾಡ - ಪ್ರಹ್ಲಾದ್ ಜೋಶಿ - ಮುನ್ನಡೆ

ಬೀದರ್​ - ಭಗವಂತ್​ ಖೂಬಾ - ಹಿನ್ನಡೆ

ಬೆಂಗಳೂರು ಉತ್ತರ - ಬಿಜೆಪಿಯ ಶೋಭಾ ಕರಂದ್ಲಾಜೆ - ಮುನ್ನಡೆ

ಬೆಂಗಳೂರು: ರಾಜ್ಯದ 28 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದೆ. ಹೆಚ್ಚು ಸ್ಥಾನ ಗೆಲ್ಲಲೇಬೇಕೆಂಬ ಪೈಪೋಟಿ ಆಡಳಿತ-ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಮೂವರು ಮಾಜಿ ಮುಖ್ಯಮಂತ್ರಿಗಳು ಅಖಾಡಕ್ಕಿಳಿದಿದ್ದಾರೆ. ಮಂಡ್ಯದಿಂದ ಎನ್​ಡಿಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಾವೇರಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ, ಬೆಳಗಾವಿಯಿಂದ ಜಗದೀಶ್​ ಶೆಟ್ಟರ್​ ಸ್ಪರ್ಧಿಸಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ: ಮಂಡ್ಯದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಈ ಹೆಚ್​ಡಿಕೆಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​ನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಸ್ಪರ್ಧೆ ಮಾಡಿದ್ದಾರೆ. ಪ್ರಸ್ತುತ ಸ್ಟಾರ್​ ಚಂದ್ರು ಹಿನ್ನಡೆಯಲ್ಲಿದ್ದಾರೆ. ಈ ಹಿಂದೆಯೂ 2013ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆ ಆಗಿ ಒಂದು ಬಾರಿ ಸಂಸತ್​ ಮೆಟ್ಟಿಲೇರಿದ್ದ ಕುಮಾರಸ್ವಾಮಿ ಈಗ ಮತ್ತೆ ಕಣದಲ್ಲಿದ್ದಾರೆ.

ಜಗದೀಶ್​ ಶೆಟ್ಟರ್​: ಬೆಳಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಸ್ಪರ್ಧಿಸಿದ್ದು, ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಹೆಬ್ಬಾಳ್ಕರ್​ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಶೆಟ್ಟರ್​ ಪರ ಮೋದಿ ಸೇರಿ ಅನೇಕ ಬಿಜೆಪಿ ಅನೇಕ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು.

ಬಸವರಾಜ ಬೊಮ್ಮಾಯಿ: ಹಾವೇರಿ -ಗದಗ ಕ್ಷೇತ್ರದಲ್ಲಿ ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್​ನ ಆನಂದಸ್ವಾಮಿ ಗಡ್ಡದೇವರಮಠ ನಡುವೆ ತೀವ್ರ ಪೈಪೋಟಿ ಇದೆ. ಶಿಗ್ಗಾವಿ-ಸವಣೂರು ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬೊಮ್ಮಾಯಿ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಹಾಲಿ ಸಂಸದ ಶಿವಕುಮಾರ್ ಉದಾಸಿ ಈ ಬಾರಿ ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ, ಬೊಮ್ಮಾಯಿ ಅವರಿಗೆ ಬಿಜೆಪಿ ಮಣೆ ಹಾಕಿತ್ತು.

ಪ್ರಹ್ಲಾದ್​ ಜೋಶಿ: ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮತ್ತೆ ಕಣದಲ್ಲಿದ್ದು, ಕಾಂಗ್ರೆಸ್​​ನ ವಿನೋದ್​ ಅಸೂಟಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಈಗಾಗಲೇ ಸತತವಾಗಿ ನಾಲ್ಕು ಬಾರಿ ಗೆದ್ದಿರುವ ಜೋಶಿ ಐದನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ, ಧಾರವಾಡದಲ್ಲಿ ಗೆಲುವಿಗಾಗಿ ಕಾಂಗ್ರೆಸ್​ ಶತಾಯಗತಾಯ ಪ್ರಯತ್ನ ಪಟ್ಟಿತ್ತು.

ಶೋಭಾ ಕರಂದ್ಲಾಜೆ: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಾರಿ ಸ್ಪರ್ಧೆ ಮಾಡಿದ್ದಾರೆ. ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಹಾಲಿ ಸಂಸದೆಯಾದ ಕರಂದ್ಲಾಜೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಂದಿದ್ದಾರೆ. ಇಲ್ಲಿ ಕಾಂಗ್ರೆಸ್​ನ ರಾಜೀವ್​ಗೌಡ ಅವರನ್ನು ಎದುರಿಸುತ್ತಿದ್ದಾರೆ. ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಭಗವಂತ ಖೂಬಾ: ಬೀದರ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಪ್ರಭಾವಿ ನಾಯಕ ಹಾಗೂ ಸಚಿವ ಈಶ್ವರ್​ ಖಂಡ್ರೆ ಪುತ್ರ ಸಾಗರ್​ ಖಂಡ್ರೆ ವಿರುದ್ಧ ಕೇಂದ್ರ ಸಚಿವ ಭಗವಂತ ಖೂಬಾ ಅಖಾಡದಲ್ಲಿದ್ದಾರೆ. ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಭಗವಂತ ಖೂಬಾ ಹಿನ್ನಡೆ ಅನುಭವಿಸಿದ್ದಾರೆ.

ಇದನ್ನು ಓದಿ: ಮತ ಎಣಿಕೆಗೆ ಕ್ಷಣಗಣನೆ: ರಾಜ್ಯದ 29 ಕೇಂದ್ರಗಳಲ್ಲಿ ಸಕಲ ಸಿದ್ಧತೆ, 13 ಸಾವಿರ ಸಿಬ್ಬಂದಿ ನೇಮಕ - Lok Sabha Election Results 2024

Last Updated : Jun 4, 2024, 8:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.