ಶಿವಮೊಗ್ಗ: ಭ್ರಷ್ಟಚಾರದ ಬಗ್ಗೆ ಆರೋಪ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಭ್ರಷ್ಟಚಾರದಲ್ಲಿ ನಂಬರ್ 1 ರ‍್ಯಾಂಕ್ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಪಿಚ್ಚರ್ ಬಿಡಿಸುವುದು ಇದೆ. ವಿಜಯೇಂದ್ರ ಅವರು ತಮ್ಮ ಪಕ್ಷದ ಯತ್ನಾಳ್ರನ್ನು ಕಂಟ್ರೋಲ್ ಮಾಡುವುದಕ್ಕೆ ಆಗದೇ ಸುಮ್ಮನೆ ನಮ್ಮ ಪಕ್ಷದ ಸಿಎಂ ಹಾಗೂ ಡಿಕೆಶಿ ಅವರ ಕುರಿತು ಆರೋಪ ಮಾಡುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿಜಯೇಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅನೇಕ ಆರೋಪಗಳಿವೆ. ಆದರೂ ಸಹ ಅವರು ಬೇರೆಯವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರನ್ನು ತುಳಿಯಲು ಇಡಿಗೆ ಪತ್ರ ಬರೆದಿದ್ದರು. ಈಗ ಡಿ.ಕೆ.ಶಿವಕುಮಾರ್ ಸುಪ್ರೀಂ ಕೋರ್ಟ್ನಲ್ಲಿ ಗೆದ್ದುಕೊಂಡು ಬಂದಿದ್ದಾರೆ. ಡಿ.ಕೆ. ಶಿವಕುಮಾರ್ರನ್ನು ಮುಟ್ಟಲು ಹೋದವರೇ ಭಸ್ಮ ಆಗಿ ಹೋಗುತ್ತಾರೆ ಎಂದು ಹರಿಹಾಯ್ದರು.
ಬಿಎಸ್ವೈ ಅಧಿಕಾರದಿಂದ ಕೆಳಗೆ ಇಳಿಯಲು ಮಗನೇ ಕಾರಣ: ಸಿಎಂ ಸಿದ್ದರಾಮಯ್ಯ ಅವರು ಇದುವರೆಗೂ ಒಂದು ಕಳಂಕವನ್ನು ಹೊಂದಿಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಡಾವನ್ನು ಕಂಟ್ರೋಲ್ ಮಾಡಿದ್ದು ಇದೇ ವಿಜಯೇಂದ್ರ. ಮುಡಾದಲ್ಲಿ ಇರುವಂತೆ, ಸೂಡಾದಲ್ಲಿಯೂ ಸಹ ಹಗರಣವನ್ನು ನಾವು ಹೊರಗೆ ತೆಗೆಯುತ್ತೆವೆ ಎಂದು ವಿಜಯೇಂದ್ರ ಹೇಳಿದರು.
ನಮ್ಮ ಪಕ್ಷ ಹಾಗೂ ಸಚಿವ ಸಂಪುಟ ಸಿಎಂ ಸಿದ್ದರಾಮಯ್ಯನವರ ಪರ ಇದ್ದೇವೆ. ಯಡಿಯೂರಪ್ಪ ಮೊದಲು 2009 ರಲ್ಲಿ ಸಿಎಂ ಆದಾಗ ಅಧಿಕಾರ ಕಳೆದುಕೊಂಡಿದ್ದು ವಿಜಯೇಂದ್ರರಿಂದಲೇ. ಕೊನೆಯ ಅವಧಿಯಲ್ಲಿ ಸಹ ಯಡಿಯೂರಪ್ಪರನ್ನು ಪೂರ್ಣ ಅಧಿಕಾರ ನೀಡಲಿಲ್ಲ. ಯಡಿಯೂರಪ್ಪ ಕೆಳಗೆ ಇಳಿಯಲು ಅವರ ಮಗ ವಿಜಯೇಂದ್ರ ಕಾರಣ ಎಂದು ಆರೋಪಿಸಿದರು.
ಒಬಿಸಿ ಸಮುದಾಯವನ್ನು ತುಳಿಯಲು ಹೊರಟಿದ್ದಾರೆ: ಪ್ರವಾಹ, ಭೂ ಕುಸಿತವಾಗುತ್ತಿದೆ. ಈ ಸಂದರ್ಭದಲ್ಲಿ ಜನರ ಪರವಾಗಿ ಇರುವುದನ್ನು ಬಿಟ್ಟು ಪಾದಯಾತ್ರೆ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಒಬಿಸಿ ಸಮುದಾಯವರನ್ನು ಸಿಎಂ ಮಾಡಿದೆ. ಅದು ಬೇರೆ ಪಕ್ಷದಲ್ಲಿ ಈ ಕಾರ್ಯ ಆಗಿಲ್ಲ. ಬಿಜೆಪಿಯವರು ಒಬಿಸಿ ಸಿಎಂ ಸಿದ್ದರಾಮಯ್ಯನವರಿಗೆ ಕಳಂಕ ತರುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ದೂರಿದರು.
ಕೇಂದ್ರ ಸರ್ಕಾರದವರಿಗೆ ಮಾನಮಾರ್ಯಾದೆನೇ ಇಲ್ಲ. ಕಳಂಕ ಹೊಂದಿದವರು ಬಿಜೆಪಿ ಸೇರಿದ ತಕ್ಷಣ ಕಳಂಕ ರಹಿತವಾಗುವುದು ಹೇಗೆ ಎಂದು ಪ್ರಶ್ನಿಸಿದರು. ಬಿಜೆಪಿರವರು ಅಧಿಕಾರದಲ್ಲಿದ್ದಾಗ ತಮ್ಮ ಕೊನೆಯ ಸಚಿವ ಸಂಪುಟದಲ್ಲಿ ಸೂಡಾ ಹಗರಣವನ್ನು ಲೋಕಾಯುಕ್ತದಿಂದ ವಾಪಸ್ ತೆಗೆದುಕೊಂಡರು.
2015 ರ ನಂತರ ಅರಣ್ಯ ಒತ್ತುವರಿ ತೆರವು ಖಂಡಿತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ರಾಜ್ಯಪಾಲ ಹಾಗೂ ರಾಜ್ಯ ಸರ್ಕಾರದ ತಿಕ್ಕಾಟ ನಮ್ಮ ರಾಜ್ಯದಲ್ಲಿ ಪ್ರಾರಂಭವಾಗಿದೆ. ಜೈಲಿಗೆ ಹೋದ ಬಿಜೆಪಿಯವರಿಗೆ ಜೈಲಿಗೆ ಕಳುಹಿಸುವುದು ಚಟವಾಗಿದೆ. ಭ್ರಷ್ಟಚಾರದ ಬಗ್ಗೆ ಮಾತನಾಡಲು ಅವರಿಗೆ ಯಾವು ನೈತಿಕತೆ ಇಲ್ಲ ಎಂದರು.
ಶರಾವತಿ ಪಂಪ್ ಸ್ಟೋರೇಜ್ ಅಸ್ತುಗೆ ಸಂತಸ: ಶರಾವತಿ ಪಂಪ್ ಸ್ಟೋರೇಜ್ ಕಾಮಗಾರಿಗೆ ಕೇಂದ್ರ ಅನುಮತಿ ನೀಡುವುದು ಸ್ವಾಗರ್ತವಾಗಿದೆ. ಇಲ್ಲಿ ಅರಣ್ಯ ಪ್ರದೇಶಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಚಿವರು ಹೇಳಿದರು.
ಓದಿ: ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸೂಕ್ತ ಕ್ರಮ: ಸಿಎಂ ಸಿದ್ದರಾಮಯ್ಯ - CM Siddaramaiah