ETV Bharat / state

ಕಲಬುರಗಿ: ಕಲ್ಲು ಎತ್ತಿ ಹಾಕಿ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಬರ್ಬರ ಹತ್ಯೆ - Women Murder

ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರನ್ನು ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿ ನಡೆದಿದೆ.

murder
ಕಲಬುರಗಿ: ಕಲ್ಲು ಎತ್ತಿ ಹಾಕಿ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಬರ್ಬರ ಹತ್ಯೆ
author img

By ETV Bharat Karnataka Team

Published : Apr 8, 2024, 6:44 AM IST

ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿ ನಗರದ ಹೊರವಲಯದ ತಾವರಗೇರಾ ಬಳಿ ನಡೆದಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ತಾಜ ಸುಲ್ತಾನಪುರ ನಿವಾಸಿಗಳಾದ ಶರಣಮ್ಮ (45) ಹಾಗೂ ಚಂದಮ್ಮ (45) ಕೊಲೆಯಾದ ಮಹಿಳೆಯರು ಎಂದು ಗುರುತಿಸಲಾಗಿದೆ.

ಪ್ರತಿನಿತ್ಯದಂತೆ ಭಾನುವಾರ ಬೆಳಗ್ಗೆ ನಗರದ ಗಂಜ್​ನಿಂದ ಬಸ್​​ನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. ನಂತರ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ‌ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ, ಇದೇ ರಸ್ತೆಯಲ್ಲಿ ತೆರಳುತ್ತಿದ್ದ ರೈತರೊಬ್ಬರು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

ಪ್ರತ್ಯೇಕ ಪ್ರಕರಣ - ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ರಸ್ತೆ ಅಪಘಾತವಾದಾಗ ಸ್ಥಳಕ್ಕೆ ಹೋಗಿ ಜಗಳ ಬಿಡಿಸಿದ ಪೊಲೀಸ್ ಕಾನ್ಸ್​ಟೆಬಲ್ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಆಳಂದ ಠಾಣೆಯ ಪೊಲೀಸ್​ ಕಾನ್ಸ್​ಟೇಬಲ್ ಗಣಪತರಾವ್ ಘಂಟೆ ಹಲ್ಲೆಗೊಳಗಾದವರು.

ಆಳಂದ ಹೊರವಲಯದ ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬೊಲೆರೋ ಹಾಗೂ ಆಟೋ ಮಧ್ಯೆ ಅಪಘಾತವಾಗಿತ್ತು. ಅಪಘಾತದ ಸುದ್ದಿ ತಿಳಿದು, ಕಾನ್ಸ್​ಟೆಬಲ್ ಗಣಪತರಾವ್ ಸ್ಥಳಕ್ಕೆ ತೆರಳಿದ್ದರು. ಪ್ರಕರಣ ಬಗೆಹರಿಸಿ ವಾಪಸ್ ಠಾಣೆಗೆ ತೆರಳುತ್ತಿರುವ ವೇಳೆ ನಿಪ್ಪಾಣಿ ತಾಂಡಾದ ಯುವಕರ ಗ್ಯಾಂಗ್, ಟಂಟಂ ಆಟೋದವನ ಜೊತೆ ಗಲಾಟೆ ಆರಂಭಿಸಿತ್ತು. ಜಗಳ ಬಿಡಿಸಲು ಹೋದ ಪೊಲೀಸ್​ ಕಾನ್ಸ್​ಟೆಬಲ್ ಮೇಲೆ ಯುವಕರ ಗ್ಯಾಂಗ್​ನ ನಿಖಿಲ್ ಹಾಗೂ ಕರ್ಣ ಸೇರಿದಂತೆ ಎಂಟು ಜನರು ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಆರು ಜನ ಯುವಕರು ಪರಾರಿಯಾಗಿದ್ದಾರೆ. ​ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣ: ಕತ್ತು ಬಿಗಿದು ಮಹಿಳೆ ಕೊಲೆ; ನಿರ್ಮಾಣ ಹಂತದ ಕಟ್ಟಡದ ಸಮೀಪ ಕಾರ್ಮಿಕನ ಶವ ಪತ್ತೆ - Bengaluru Crime

ETV Bharat Logo

Copyright © 2024 Ushodaya Enterprises Pvt. Ltd., All Rights Reserved.