ETV Bharat / state

ಕಲ್ಪತರು ನಾಡಲ್ಲಿ ಕಮಲ ಕಮಾಲ್​: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣಗೆ ಭರ್ಜರಿ ಗೆಲುವು - V Somanna

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ತೀವ್ರ ಕುತೂಹಲ ಮೂಡಿಸಿದ ಕ್ಷೇತ್ರದಲ್ಲಿ ವಿ.ಸೋಮಣ್ಣ ಭರ್ಜರಿ ಗೆಲುವು ಕಂಡಿದ್ದಾರೆ.

Tumakuru Lok sabha Constituency
ತುಮಕೂರು ಲೋಕಸಭಾ ಕ್ಷೇತ್ರ (ETV Bharat)
author img

By ETV Bharat Karnataka Team

Published : Jun 4, 2024, 8:13 AM IST

ತುಮಕೂರು ಲೋಕಸಭಾ ಕ್ಷೇತ್ರ: ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಸ್‌.ಪಿ ಮುದ್ದಹನುಮೇಗೌಡ ಸೋಲಿನ ರುಚಿ ಕಂಡಿದ್ದಾರೆ.

  • ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಮುನ್ನಡೆ - 7,16,709 ಮತಗಳು.
  • ಕಾಂಗ್ರೆಸ್​ ಅಭ್ಯರ್ಥಿ ಎಸ್‌ಪಿ ಮುದ್ದಹನುಮೇಗೌಡ ಹಿನ್ನಡೆ - 5,43,064 ಮತಗಳು.
  • ಮತಗಳ ಅಂತರ: 1,73,645 ಮತಗಳು.

2023ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಿಂದ ಸೋತ ನಂತರ, ಸೋಮಣ್ಣ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಸ್ಥಳೀಯ ಮತ್ತು ವಲಸಿಗ ಅಸ್ತ್ರ ಪ್ರಯೋಗದ ನಡುವೆಯೂ ಕೈ ಅಭ್ಯರ್ಥಿ ಮುದ್ದಹನುಮೇಗೌಡ ಹಿನ್ನಡೆ ಅನುಭವಿಸಿದ್ದಾರೆ. ಸೋಮಣ್ಣ ಗೆಲುವಿನ ನಗೆ ಬೀರಿದ್ದಾರೆ.

ಕ್ಷೇತ್ರ ಇತಿಹಾಸ ನೋಡುವುದಾದರೆ ತುಮಕೂರು ಲೋಕಸಭಾ ಕ್ಷೇತ್ರವು 1952ರಿಂದ 2019ರವರೆಗೆ 17 ಚುನಾವಣೆಗಳನ್ನು ಕಂಡಿದೆ. ಈ ಬಾರಿ ಕಾಂಗ್ರೆಸ್​​​​​​ನ ಮಾಜಿ ಸಂಸದ ಮುದ್ದಹನುಮೇಗೌಡ ಗೆದ್ದು ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಹಂಬಲದಲ್ಲಿದ್ದರು. ಮತ್ತೊಂದೆಡೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯ ವಿ.ಸೋಮಣ್ಣ ರಾಜಕೀಯ ಜೀವನದ ಕಠಿಣ ಅದೃಷ್ಟ ಪರೀಕ್ಷೆ ಎದುರಿಸಿದ್ದರು. ಅಂತಿಮವಾಗಿ ಮತದಾರರು ಸೋಮಣ್ಣ ಅವರ ಕೈ ಹಿಡಿದಿದ್ದಾರೆ. ಈ ಬಾರಿ ಶೇ.78.05ರಷ್ಟು ಮತದಾನವಾಗಿತ್ತು.

ಚುನಾವಣಾ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್​ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಕೇಸರಿ ಅಭ್ಯರ್ಥಿ ಬಿಜೆಪಿ - ಜೆಡಿಎಸ್‌ ಮೈತ್ರಿಯ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಆದಿಯಾಗಿ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್​ ಅಭ್ಯರ್ಥಿ ಎಸ್‌ಪಿ ಮುದ್ದಹನುಮೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಟಿ.ಬಿ. ಜಯಚಂದ್ರ ಆದಿಯಾಗಿ ಪ್ರಚಾರ ಮತಯಾಚನೆ ಮಾಡಿದ್ದರು. ಮತಯಾಚನೆ ನಡೆಸುವ ವೇಳೆ ಅಭ್ಯರ್ಥಿಗಳ ಹೇಳಿಕೆಗಳು ಗಮನ ಸೆಳೆದಿದ್ದವು.

ಭದ್ರತೆ: ಫಲಿತಾಂಶದ ಹಿನ್ನೆಲೆ ಮತ ಎಣಿಕೆ ಕೇಂದ್ರ ಮತ್ತು ನಗರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳು ಸೇರಿದಂತೆ ಎಸಿಪಿಗಳು, ಸಿಪಿಐ, ಪಿಎಸ್ಐ, ಸಿಬ್ಬಂದಿ ನಿಯೋಜಿಸಲಾಗಿದೆ. ಎಣಿಕೆ ಕೇಂದ್ರ ಸೇರಿದಂತೆ ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ತೀವ್ರ ನಿಗಾ ವಹಿಸಲಾಗಿದೆ.

2019ರಲ್ಲಿ ಚುನಾವಣೆಯಲ್ಲಿ ಶೇ. 72.10ರಷ್ಟು ಮತದಾನದ ಪ್ರಮಾಣ ದಾಖಲಾಗಿದ್ದರೆ, 2024ರ ಚುನಾವಣೆಯಲ್ಲಿ ಶೇ. 77.18ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಲೋಕಸಭಾ ಚುನಾವಣೆಗಳು ದೇಶದಲ್ಲಿ ಒಟ್ಟು ಏಳು ಹಂತದಲ್ಲಿ ನಡೆದಿದ್ದು, ರಾಜ್ಯದ ಮೊದಲ ಹಂತದಲ್ಲಿ ಈ ಕ್ಷೇತ್ರಕ್ಕೆ ಮತದಾನ ನಡೆದಿತ್ತು.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ - ಕಣದಲ್ಲಿರುವ ಪ್ರಮುಖರಿವರು! - Lok Sabha election results 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.