ETV Bharat / state

ಹೊಸ ವರ್ಷದಿಂದ ರೈಲುಗಳ ವೇಳಾಪಟ್ಟಿಯಲ್ಲಿ ಪರಿಷ್ಕರಣೆ : ವಿವರ ಇಲ್ಲಿದೆ - TRAIN TIME TABLE

ನೈರುತ್ಯ ರೈಲ್ವೆ ಇಲಾಖೆ ಜನವರಿ 1 ರಿಂದ ಮೈಸೂರಿಗೆ ಬರುವ ಮತ್ತು ಹೋಗುವ ರೈಲುಗಳ ವೇಳಾಪಟ್ಟಿಯನ್ನ ಪರಿಷ್ಕರಣೆ ಮಾಡಿದೆ.

Railway station
ರೈಲ್ವೆ ಸ್ಟೇಷನ್ (ETV Bharat)
author img

By ETV Bharat Karnataka Team

Published : Dec 31, 2024, 3:51 PM IST

ಮೈಸೂರು : ಜನವರಿ 1 ರಿಂದ ಮೈಸೂರಿಗೆ ಬರುವ ಮತ್ತು ಹೋಗುವ ರೈಲುಗಳ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ‌ ಪರಿಷ್ಕರಣೆ ಮಾಡಿದೆ. ಬದಲಾವಣೆಯಾದ ರೈಲುಗಳ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.

ನೈರುತ್ಯ ರೈಲ್ವೆ ಇಲಾಖೆಯೂ ಹೊಸ ವರ್ಷದ ಆರಂಭದ ಬೆನ್ನಲ್ಲೇ ತನ್ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಮೈಸೂರಿನಿಂದ ಇತರ ನಿಲ್ದಾಣಗಳಿಗೆ ನಿರ್ಗಮಿಸುವ ಹಾಗೂ ಆಗಮಿಸುವ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮತ್ತು ಸಾರ್ವಜನಿಕರು ಪರಿಷ್ಕೃತ ವೇಳಾಪಟ್ಟಿಯ ವಿವರಗಳನ್ನು ರೈಲ್ವೆ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಪಡೆಯಬಹುದಾಗಿದೆ.

ಮೈಸೂರಿನಿಂದ ಸಾಯಿನಗರ ಮತ್ತು ಶಿರಡಿಗೆ ಹೊರಡುವ ರೈಲು ಸಂಖ್ಯೆ - 16217 ದಿನಾಂಕ 06.01.2025 ರಿಂದ ಬೆಳಗ್ಗೆ 05:00 ಗಂಟೆಗೆ ಮೈಸೂರಿನಿಂದ ಹೊರಡಲಿದೆ.

Railway track
ರೈಲ್ವೆ ಹಳಿ (ETV Bharat)

ಟುಟಿಕೋರಿನ್‌ (ತೂತುಕುಡಿ)ನಿಂದ ಮೈಸೂರಿಗೆ ಹೊರಡುವ ರೈಲು ನಂ.16235 ಪಾಂಡವಪುರ ನಿಲ್ದಾಣಕ್ಕೆ 08:39 ಗಂಟೆಗೆ ತಲುಪುತ್ತದೆ ಮತ್ತು 08:40 ಗಂಟೆಗೆ ಹೊರಟು ಅಂತಿಮವಾಗಿ 09:30 ಗಂಟೆಗೆ ಮೈಸೂರು ತಲುಪುತ್ತದೆ.

ನಂಜನಗೂಡಿನಿಂದ ಮೈಸೂರಿಗೆ ಹೊರಡುವ ರೈಲು ನಂ. 06299 ನಂಜನಗೂಡಿನಿಂದ 10:25 ಗಂಟೆಗೆ ಹೊರಟು 11:15 ಗಂಟೆಗೆ ಮೈಸೂರಿಗೆ ತಲುಪುತ್ತದೆ.

ಮಾರ್ಗದಲ್ಲಿ ರೈಲು ಸುಜಾತಪುರಂ ಹಾಲ್ಟ್​ನಲ್ಲಿ 10:25 – 10:29, ತಾಂಡವಪುರ ಹಾಲ್ಟ್ 10:32 – 10:33, ಕಡಕೋಳ 10:38 – 10-:39, ಅಶೋಕಪುರಂ 10:48 – 10:49, ಚಾಮರಾಜಪುರಂ ನಿಲ್ದಾಣದಲ್ಲಿ 10:54 – 10:55ಕ್ಕೆ ಆಗಮಿಸುತ್ತದೆ – ನಿರ್ಗಮಿಸುತ್ತದೆ.

ಮೈಸೂರಿನಿಂದ ನಂಜನಗೂಡಿಗೆ ಹೊರಡುವ ಪ್ಯಾಸೆಂಜರ್ ರೈಲು ನಂ. 06300 ನಂಜನಗೂಡಿಗೆ 10:00 ಗಂಟೆಗೆ ತಲುಪಲಿದೆ.

ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ಪ್ಯಾಸೆಂಜರ್ ರೈಲು ನಂ. 60276 ಮೈಸೂರಿನಿಂದ 11:45 ಗಂಟೆಗೆ ನಿರ್ಗಮಿಸುತ್ತದೆ ಮತ್ತು ಚಾಮರಾಜನಗರಕ್ಕೆ 13:30 ಗಂಟೆಗೆ ತಲುಪುತ್ತದೆ.

ಮಾರ್ಗದಲ್ಲಿ ರೈಲು ಚಾಮರಾಜಪುರಂನಲ್ಲಿ 11:50-11:51, ಅಶೋಕಪುರಂ 11:56-11:55, ಕಡಕೋಳ 12:08-12:09, ತಾಂಡವಪುರ ಹಾಲ್ಟ್ 12:14-12:15, ಸುಜಾತಪುರಂ ಹಾಲ್ಟ್ 12:18-12:19, ನಂಜನಗೂಡು ಟೌನ್ 12:23-12:25, ಚಿನ್ನದಗುಡಿ ಹುಂಡಿ ಹಾಲ್ಟ್ 12:35-12:36, ನರಸಾಂಬುಧಿ ಹಾಲ್ಟ್ 12:38-12:39, ಕವಲಂದೆ ಹಾಲ್ಟ್ 12:44-12:45, ಕೊಣ್ಣನೂರು ಹಾಲ್ಟ್ 12:50-12:51, ಬದನಗುಪ್ಪೆ ಹಾಲ್ಟ್ 12:56-12:57, ಮರಿಯಾಲ ಹಾಲ್ಟ್ 13:03-13:04 ಗಂಟೆಗೆ ಆಗಮಿಸುತ್ತದೆ – ನಿರ್ಗಮಿಸುತ್ತದೆ.

ಚಾಮರಾಜನಗರದಿಂದ ಮೈಸೂರಿಗೆ ಹೋಗುವ ಪ್ಯಾಸೆಂಜರ್ ರೈಲು ನಂ.06234 ಅಶೋಕಪುರಂಗೆ 11:53 ಕ್ಕೆ ತಲುಪುತ್ತದೆ ಮತ್ತು 11:55 ಕ್ಕೆ ನಿರ್ಗಮಿಸುತ್ತದೆ ಹಾಗೂ ಚಾಮರಾಜಪುರಂಗೆ 12:01ಕ್ಕೆ ಆಗಮಿಸಿ 12:02ಕ್ಕೆ ನಿರ್ಗಮಿಸುತ್ತದೆ.

ಚಾಮರಾಜನಗರದಿಂದ ತುಮಕೂರು ಪ್ಯಾಸೆಂಜರ್ ರೈಲು ನಂ.07345 ಚಿನ್ನದಗುಡಿ ಹುಂಡಿಯಲ್ಲಿ 07:51- 07:52, ನಂಜನಗೂಡು ಟೌನ್ 08:02-08:04, ಸುಜಾತಪುರಂ ಹಾಲ್ಟ್ 08:08 – 08:09, ತಾಂಡವಪುರ ಹಾಲ್ಟ್ 08:13 – 08:14, ಕಡಕೋಳ 08:19-08:20, ಅಶೋಕಪುರಂ 08:33-08:34 ಮತ್ತು ಚಾಮರಾಜಪುರಂ 08:39-08:40 ಗಂಟೆಗೆ ತಲುಪುತ್ತದೆ ಎಂದು ರೈಲ್ವೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ : ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಸೇವೆ ವಿಸ್ತರಣೆ - HUBBALLI RAMESHWARAM TRAIN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.