ETV Bharat / state

ಟೊಯೋಟಾ ಕಿರ್ಲೋಸ್ಕರ್ ಮೋಟಾರ್​ ಸಂಸ್ಥೆಯಿಂದ ನೀರು ಶುದ್ಧೀಕರಣ ಘಟಕ ಸ್ಥಾಪನೆ - Drinking Water Unit

author img

By ETV Bharat Karnataka Team

Published : Aug 20, 2024, 9:43 PM IST

ಸ್ಥಳೀಯರಿಗೆ ಅತ್ಯುತ್ತಮ ಗುಣಮಟ್ಟದ ನೀರನ್ನು ಒದಗಿಸುವ ನಿಟ್ಟಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್​ ಸಂಸ್ಥೆಯು ರಾಮನಗರ ಜಿಲ್ಲೆಯಲ್ಲಿ ಮೂರು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ.

DRINKING WATER UNIT
ನೀರು ಶುದ್ಧೀಕರಣ ಘಟಕ (ETV Bharat)

ರಾಮನಗರ: ಸ್ಥಳೀಯ ಜನರ ಸಮುದಾಯಗಳ ಆರೋಗ್ಯ ಮತ್ತು ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್​ (ಟಿಕೆಎಂ) ಸಂಸ್ಥೆ ಇಂದು ರಾಮನಗರ ಜಿಲ್ಲೆಯ ಬೆಣ್ಣೆಹಳ್ಳಿ, ಡಿಯಾಲಕರೇನಹಳ್ಳಿ ಮತ್ತು ಚನ್ನೆಮರೇಗೌಡನದೊಡ್ಡಿಯಲ್ಲಿ ಮೂರು ಹೊಸ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದೆ. ಈ ಘಟಕಗಳು 15 ಹಳ್ಳಿಗಳ ಸುಮಾರು 21,000 ಗ್ರಾಮಸ್ಥರಿಗೆ ಪ್ರಯೋಜನವಾಗಲಿದೆ.

ಪ್ರತೀ ನೀರಿನ ಶುದ್ಧೀಕರಣ ಘಟಕವು ಗಂಟೆಗೆ 1,000 ಲೀಟರ್ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಕಾರ್ಬನ್ ಫಿಲ್ಟರ್​ಗಳು, ಮಲ್ಟಿಮೀಡಿಯಾ ಫಿಲ್ಟರೇಷನ್, 5 ಮೈಕ್ರಾನ್ಸ್, ರಿವರ್ಸ್ ಓಸ್ಮಾಸಿಸ್ (ಆರ್​ಒ) ಮತ್ತು ಯುವಿ ಫಿಲ್ಟರೇಷನ್ ಎಂಬ ಆರು ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ನೀರನ್ನು ಶುದ್ಧೀಕರಿಸಲಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ನೀರನ್ನು ಒದಗಿಸಲಾಗುತ್ತದೆ. ಅತ್ಯಾಧುನಿಕ ಫಿಲ್ಟರೇಷನ್ ಪ್ರಕ್ರಿಯೆ ಮೂಲಕ ಕಾರ್ಯನಿರ್ವಹಿಸುವ ಈ ಘಟಕಗಳು ನವೀಕರಿಸಲಾಗುವ ಇಂಧನ ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಮೂಲಕ ಸುಸ್ಥಿರತೆಗೆ ಕೊಡುಗೆ ನೀಡುತ್ತವೆ. ಈ ಘಟಕಗಳು 15 ವರ್ಷಗಳ ಕಾಲ ಗ್ರಾಮ ಪಂಚಾಯತ್​ಗಳು ಮತ್ತು ನಿರ್ವಹಣಾ ಏಜೆನ್ಸಿಯ ಮೂಲಕ ನಿರ್ವಹಿಸಲ್ಪಡುತ್ತವೆ.

ಶುದ್ಧೀಕರಣ ಘಟಕಗಳ ಸ್ಥಾಪನೆಯ ಯೋಜನೆ ಆರಂಭಿಸಿದಾಗಿನಿಂದ ಇದುವರೆಗೆ ಟಿಕೆಎಂ ಸಂಸ್ಥೆಯು ಭಾರತದಾದ್ಯಂತ ಒಟ್ಟು 51 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ. ಇದರಿಂದ 312 ಹಳ್ಳಿಗಳ 3,50,000ಕ್ಕೂ ಹೆಚ್ಚು ಜನ ಶುದ್ಧ ಮತ್ತು ಸುರಕ್ಷಿತ ನೀರಿನ ಪ್ರಯೋಜನವನ್ನು ಪಡೆದಿದ್ದಾರೆ.

ಸಿಎಸ್ಆರ್ 2001ನೇ ಇಸವಿಯಿಂದಲೂ ಟಿಕೆಎಂ ಸಂಸ್ಥೆಯ ಆದ್ಯ ಕರ್ತವ್ಯಗಳ ಭಾಗ. ಉತ್ಪಾದನೆ ಹೆಚ್ಚಳು, ಸುಸ್ಥಿರತೆ ಕಡೆಗೆ ಗಮನ ಹರಿಸುವುದರ ಜೊತೆಗೆ ಟಿಕೆಎಂ ಮತ್ತು ಅದರ ಉದ್ಯೋಗಿಗಳು ಸ್ವಯಂ ಪ್ರೇರಣೆಯಿಂದ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಶಿಕ್ಷಣ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ, ರಸ್ತೆ ಸುರಕ್ಷತೆ ಹಾಗೂ ಕೌಶಲ್ಯ ಅಭಿವೃದ್ಧಿ ಎಂಬ ಐದು ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಚಟುವಟಿಕೆಗಳನ್ನು ನಡೆಸಲಾಗಿದೆ. ಇವುಗಳ ಜೊತೆಗೆ ಸ್ಥಳೀಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಸಮುದಾಯ ಆರೋಗ್ಯ ಕೇಂದ್ರವಾದ ಕರ್ನಾಟಕದ ಬಿಡದಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ-ಉತ್ಪಾದನಾ ಘಟಕವನ್ನು ಕೊಡುಗೆ ನೀಡಿದೆ.

ವಿಶೇಷವಾಗಿ, ಶಾಲಾಧರಿತ ಆರೋಗ್ಯ ಮತ್ತು ನೈರ್ಮಲ್ಯ ಯೋಜನೆಗಳಾದ ಎಬಿಸಿಡಿ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆ ಮತ್ತು ಟೊಯೋಟಾ ಶಾಲಾ ಆರೋಗ್ಯ ಕಾರ್ಯಕ್ರಮಗಳು ಆರೋಗ್ಯ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸವನ್ನು ಮಾಡಿವೆ. 2022-23ರ ಆರ್ಥಿಕ ವರ್ಷದಲ್ಲಿ ಈ ಯೋಜನೆಗಳು ಸುಮಾರು 64,000ಕ್ಕೂ ಹೆಚ್ಚಿನ ಜನರ ಬದುಕಲ್ಲಿ ಪ್ರಯೋಜನ ಉಂಟು ಮಾಡಿವೆ. ಟಿಕೆಎಂ ತನ್ನ ಹಲವಾರು ಸಿಎಸ್ಆರ್ ಯೋಜನೆಗಳ ಮೂಲಕ ಇಲ್ಲಿಯವರೆಗೆ ಸುಮಾರು 23 ಲಕ್ಷಕ್ಕೂ ಹೆಚ್ಚು ಜನರ ಬದುಕಲ್ಲಿ ಸಕಾರಾತ್ಮಕ ಪರಿಣಾಮ ಬೀರಿವೆ. ಜನರ ಅಗತ್ಯಕ್ಕೆ ತಕ್ಕಂತೆ, ದೇಶದ ಆದ್ಯತೆಗಳಿಗೆ ಪೂರಕವಾಗಿ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ನಿಟ್ಟಿನಲ್ಲಿ ಟಿಕೆಎಂನ ಯೋಜನೆಗಳನ್ನು ರೂಪಿಸಲಾಗುತ್ತದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು?: ಇಲ್ಲಿದೆ ನೋಡಿ ಮಹತ್ವದ ಮಾಹಿತಿ - Best Time For Drinking Water

ETV Bharat Logo

Copyright © 2024 Ushodaya Enterprises Pvt. Ltd., All Rights Reserved.