ಕಾರವಾರ(ಉತ್ತರ ಕನ್ನಡ): ನೀರಿನ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ. ಬೆಂಗಳೂರಿನ ಜಯನಗರದ ನಿವಾಸಿಗಳಾದ ಸ್ಮಿತಾ ರವಿಚಂದ್ರನ್ (23), ನಿಹಾರಿಕಾ ಗಿರಿ (22) ಮತ್ತು ಪವಿತ್ರ ಸುಂದರ (22) ಜೀವಾಪಾಯದಿಂದ ಪಾರಾದವರು.
ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಗಳ ಆರ್ಭಟಕ್ಕೆ ಸಿಲುಕಿ ಮುಳುಗುತ್ತಿರುವುದನ್ನು ತಕ್ಷಣ ಗಮನಿಸಿದ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ. ಸಿಬ್ಬಂದಿಗಳಾದ ನವೀನ್ ಅಂಬಿಗ ಮತ್ತು ಮಂಜುನಾಥ್ ಹರಿಕಂತ್ರ ಪ್ರವಾಸಿಗರನ್ನು ರಕ್ಷಿಸಿದ ಸಿಬ್ಬಂದಿ. ಇವರಿಗೆ ಕೂಡ್ಲೆ ವಾಟರ್ ಸ್ಪೋರ್ಟ್ಸ್ ಮೈ ಸ್ಟಿಕ್ ಗೋಕರ್ಣ ಸಿಬ್ಬಂದಿ ಸಹಾಯ ಮಾಡಿದರು. ಜೀವ ರಕ್ಷಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂಓದಿ: ನದಿಯಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ್ದ ಧೀರನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕಾರ