ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ಹೊಡೆದ ಪರಿಣಾಮ ಬಸ್ನಲ್ಲಿ ಇದ್ದ ಮೂವರು ಮಹಿಳಾ ಪ್ರಯಾಣಿಕರು ಮೃತರಾಗಿದ್ದಾರೆ. ಈ ಘಟನೆ ಕಳ್ಳಂಬೆಳ್ಳ ಸಮೀಪ ಚಿಕ್ಕನಹಳ್ಳಿ ಸೇತುವೆ ಬಳಿ ನಡೆದಿದೆ. ಮುಂಜಾನೆ 4 ಗಂಟೆಯಾದ್ದರಿಂದ ಪ್ರಯಾಣಿಕರು ನಿದ್ದೆಯ ಮಂಪರಿನಲ್ಲಿದ್ದರು.
ಗೋವಾದಿಂದ-ಬೆಂಗಳೂರಿಗೆ ಬಸ್ ತೆರಳುತ್ತಿತ್ತು. ಬಸ್ನಲ್ಲಿ ಇದ್ದ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾಸನ: ಪ್ರೊಬೆಷನರಿ ಸೇವೆಗೆ ವರದಿ ಮಾಡಿಕೊಳ್ಳಲು ತೆರಳುವಾಗ ಅಪಘಾತ; ಯುವ ಐಪಿಎಸ್ ಅಧಿಕಾರಿ ಸಾವು!