ETV Bharat / state

ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ, ಎಲ್ಲರೂ ತಮ್ಮ ಹಕ್ಕು ಚಲಾಯಿಸಿ: ಡಾ.ಸಿ.ಎನ್.ಮಂಜುನಾಥ್ ಕರೆ - Democracy Festival

ಎಲ್ಲ ದಾನಕ್ಕಿಂತ ಮಹತ್ವವಾದ ಮತದಾನಕ್ಕೆ ಎಲ್ಲರೂ ಸಮಯ ನೀಡಿ. ನಮ್ಮ ಕ್ಷೇತ್ರದಲ್ಲಿ ರಾತ್ರಿ ಕೆಲವು ಘಟನೆ ಆಗಿದೆ. ಇದು ಅಸಹ್ಯ ಬೆಳವಣಿಗೆ ಎಂದು ಡಾ.ಸಿ.ಎನ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

BIGGEST FESTIVAL  DEMOCRACY  DR C N MANJUNATH CASTS VOTE  BENGALURU
ಡಾ.ಸಿ.ಎನ್.ಮಂಜುನಾಥ್
author img

By ETV Bharat Karnataka Team

Published : Apr 26, 2024, 12:21 PM IST

ಡಾ.ಸಿ.ಎನ್.ಮಂಜುನಾಥ್ ಹೇಳಿಕೆ

ಬೆಂಗಳೂರು : ಇದು ಪ್ರಜಾಪ್ರಭುತ್ವ ಅತಿದೊಡ್ಡ ಹಬ್ಬ. ನಾನು ಮತ್ತು ಶ್ರೀಮತಿ, ಮಕ್ಕಳು ಎಲ್ಲರೂ ಸೇರಿ ಮತ ಹಾಕಿದ್ದೇವೆ. ಎಲ್ಲ ದಾನಕ್ಕಿಂತ ಮತದಾನ ಮಹತ್ವದ್ದು. ಇದಕ್ಕೆ ಎಲ್ಲರೂ ಸಮಯ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಮನವಿ ಮಾಡಿದ್ದಾರೆ.

ಪದ್ಮಾನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಬೇಕಾದ ಸರ್ಕಾರ ತರಲು ಇದೊಂದು ಅವಕಾಶ. ಯಾವುದೇ ಕೆಲಸ ಇರಲಿ ಮತದಾನಕ್ಕೆ ಒಂದೆರೆಡು ಗಂಟೆ ಮೀಸಲಿಡಿ.‌ ಯುವಕರು ಮುಂದೆ ಬಂದು ವೋಟ್ ಮಾಡಬೇಕು. ವೀಕೆಂಡ್ ಅಂತ ಬೆಂಗಳೂರು ಬಿಟ್ಟು ಹೋಗಬಾರದು. ಇಂದು ಕ್ಷೇತ್ರದಲ್ಲೇ ಇದ್ದು ಮತಹಾಕಿ. ವೋಟ್ ಹಾಕದಿದ್ದರೆ ಟೀಕೆ ಮಾಡುವ ಹಕ್ಕೂ ಕೂಡಾ ಇರುವುದಿಲ್ಲ ಎಂದರು.

ಕನಕಪುರದಲ್ಲಿ ಕೂಪನ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ರಾತ್ರಿ ಕೆಲವು ಘಟನೆ ಆಗಿದೆ. ನಿನ್ನೆ ರಾತ್ರಿ ಕನಕಪುರ, ಸಾತನೂರು, ಮಾಗಡಿ, ರಾಮನಗರ ಭಾಗದಲ್ಲಿ ಆಮೀಷ, ಗ್ಯಾರಂಟಿ ಕಾರ್ಡ್ ಹಂಚಿಕೆ ಆಗಿದೆ. ಇದು ಅತ್ಯಂತ ಅಪವಿತ್ರ ವಿಚಾರ. ಯಾವತ್ತೂ ಮತದಾರರ ಮೇಲೆ ಒತ್ತಡ ಹಾಕಬಾರದು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ‌ ಮುಕ್ತ ಅವಕಾಶ ಕೊಡಬೇಕು. ಚುನಾವಣೆ ಆರೋಗ್ಯಕರವಾಗಿರಬೇಕು ಎಂದು ಹೇಳಿದರು.

ಗ್ಯಾರಂಟಿ ಕಾರ್ಡ್ ಹಂಚಿಕೆ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದೇವೆ. ಗ್ಯಾರಂಟಿ ಕಾರ್ಡ್, ಕೂಪನ್ ಕೊಡಲಾಗುತ್ತಿದೆ. ಮತ ಹಾಕಿದ ನಂತರ ಕೂಪನ್ ಬಳಸಿ ನಿಮಗೆ ಬೇಕಾದನ್ನು ಖರೀದಿಸಿ ಅಂತಿದ್ದಾರೆ. ಇದು ಅಸಹ್ಯ ಬೆಳವಣಿಗೆ. ಕನಕಪುರದಲ್ಲಿ ನಮ್ಮವರು ರಾತ್ರಿ ಪ್ರತಿಭಟನೆ ಮಾಡಿದ್ದಾರೆ. ಮೂರು ನಾಲ್ಕು ಸಾವಿರ ಕೂಪನ್ ಹಿಡಿದು ಕೆಲವರು ಹೋಗಿದ್ದಾರೆ. ಚುನಾವಣೆ ಹೀಗೆ ಆಗಬಾರದು ಎಂದು ಹೇಳುತ್ತೆನೆ. ನಮ್ಮ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಹೀಗಾಗಿ ನನಗೆ ವಿಶ್ವಾಸ ಹೆಚ್ಚಾಗಿದೆ ಎಂದರು.

ನಾನು ಒತ್ತಾಯ ಮಾಡುವುದೇನಂದ್ರೆ free and fair poll ಆಗಬೇಕು. ಕೆಲ ಆರ್​ಓ ಅಂದರೆ ಸ್ಥಳೀಯರು ಇರ್ತಾರೆ, ಕೆಲವರು ನಿಯಂತ್ರಣದಲ್ಲಿ ಇರುತ್ತಾರೆ ಎಂದು ಹೇಳಿದರು. ಇದಕ್ಕೂ ಮುನ್ನ ಪತ್ನಿ ಅನುಸೂಯ, ಮಗ, ಮಗಳು ಸೇರಿ ಕುಟುಂಬ ಸಮೇತರಾಗಿ ಮನೆಯಿಂದ ನಡೆದುಕೊಂಡೇ ಬಂದು ಸಿ.ಎನ್. ಮಂಜುನಾಥ್ ಮತದಾನ ಮಾಡಿದರು.

ಓದಿ: ಯಾವ ಅಭ್ಯರ್ಥಿಗಳು ಎಲ್ಲಿ ವೋಟ್​ ಮಾಡಿದರು?; ಹಕ್ಕು ಚಲಾಯಿಸಿದ ಪ್ರಮುಖ ಕ್ಯಾಂಡಿಡೇಟ್ಸ್​​​​​​​​​​ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ! - candidates voting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.