ಚಿಕ್ಕಬಳ್ಳಾಪುರ: ನಗರದಲ್ಲಿ ಯುವಕರ ದ್ವಿಚಕ್ರ ವಾಹನಗಳ ಅಬ್ಬರ ವಿಪರೀತವಾಗಿದೆ. ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್ ಬದಲಾವಣೆ, ಮಾರ್ಪಾಡು ಮಾಡಿಕೊಳ್ಳುವ ಯುವಕರು ವಾಹನ ಚಾಲಕರಿಗೆ ಮಾತ್ರವಲ್ಲ, ರಸ್ತೆಗಳ ಅಕ್ಕಪಕ್ಕದ ನಿವಾಸಿಗಳಿಗೂ ತಲೆ ನೋವಾಗಿದ್ದಾರೆ.
ಇದರ ಸಲುವಾಗಿಯೇ ಚಿಕ್ಕಬಳ್ಳಾಪುರ ಪೊಲೀಸರು ಪುಂಡ ಪೋಕರಿಗಳಿಗೆ ಸಿಂಹ ಸ್ವಪ್ನವಾಗಿದ್ದು, ಬುಲ್ಡೋಜರ್ ಬಳಸಿ ಕರ್ಕಶ ಶಬ್ದ ಬರುತ್ತಿದ್ದ ಸೈಲೆನ್ಸರ್ಗಳನ್ನು ನಾಶ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ಸರ್ಕಲ್ ಬಳಿ ಆಗಸ್ಟ್ 28ರ ಬುಧವಾರ 12 ಗಂಟೆ 180ಕ್ಕೂ ಅಧಿಕ ಕರ್ಕಶ ಶಬ್ದ ಬರುವ ಸೈಲೆನ್ಸರ್ಗಳನ್ನು ಬುಲ್ಡೋಜರ್ ಹತ್ತಿಸಿ ಪುಡಿಪುಡಿ ಮಾಡಿ ಅನಧಿಕೃತವಾಗಿ ಸೈಲೆನ್ಸರ್ಗಳನ್ನು ಅಳವಡಿಸಿರುವ ಬೈಕ್ ಸವಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
"ದ್ವಿಚಕ್ರ ವಾಹನಗಳ ಸೈಲೆನ್ಸರ್ ಮೋಡಿಫಿಕೇಶನ್ ಮಾಡಿಕೊಂಡು ಕರ್ಕಶ ಶಬ್ದದಿಂದ ಕೆಲವೊಮ್ಮೆ ಅತಿ ಹೆಚ್ಚು ಹಾರ್ಸ್ ಪವರ್ ವಾಹನ ಸಾಗುತ್ತಿದೆ ಎಂಬ ಭಾವನೆ ಬರುತ್ತದೆ. ತಮ್ಮ ಬಳಿ ಅತಿ ಹೆಚ್ಚು ಸಾಮರ್ಥ್ಯದ ವಾಹನ ಇದೆ ಎಂದು ತೋರಿಸಿಕೊಳ್ಳುವ ಆಸೆಯಿಂದ ಯುವಕರು ತಮ್ಮ ಸಾಮಾನ್ಯ ದ್ವಿಚಕ್ರ ವಾಹನದ ಸೈಲೆನ್ಸರ್ ಮಾರ್ಪಾಡು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಇಂತಹ ಸಾಹಸಕ್ಕೆ ಮುಂದಾಗಬಾರದು" ಎಂದು ಎಸ್ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಅವಳಿನಗರದಲ್ಲಿ ಹೆಚ್ಚಿದ ಸೈಬರ್ ಕ್ರೈಂ ಪ್ರಕರಣಗಳು ; ವಂಚನೆಗೆ ಒಳಗಾಗುವುದರಲ್ಲಿ ವಿದ್ಯಾವಂತರೇ ಹೆಚ್ಚು! - cyber crime cases