ETV Bharat / state

ರಾಜ್ಯದಲ್ಲಿ ಹೆಚ್ಚುತ್ತಿದೆ ಹಿರಿಯರ ಸಂಖ್ಯೆ; ಏರುತ್ತಿದೆ ತಲಾ ಆದಾಯ, ವಿದ್ಯಾವಂತ ಯುವಕರಲ್ಲಿ ನಿರುದ್ಯೋಗ ಅಧಿಕ! - India Employment Report 2024 - INDIA EMPLOYMENT REPORT 2024

India Employment Report 2024: ದೇಶದ ಕಾರ್ಮಿಕ ಮತ್ತು ಉದ್ಯೋಗ ಸಮಸ್ಯೆಗಳ ಕುರಿತಂತೆ ಮಾನವ ಅಭಿವೃದ್ಧಿ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಜಂಟಿಯಾಗಿ ಭಾರತ ಉದ್ಯೋಗ ವರದಿ-2024ಅನ್ನು ಬಿಡುಗಡೆ ಮಾಡಿವೆ. ಕರ್ನಾಟಕದ ಬಗ್ಗೆ ಒಂದು ನೋಟ ಇಲ್ಲಿದೆ.

ಭಾರತ ಉದ್ಯೋಗ ವರದಿ-2024
ndia Employment Report 2024 Karnataka
author img

By ETV Bharat Karnataka Team

Published : Mar 28, 2024, 5:38 PM IST

Updated : Mar 28, 2024, 6:14 PM IST

ಕಾರ್ಮಿಕ ಮತ್ತು ಉದ್ಯೋಗ ಸಮಸ್ಯೆಗಳ ಕುರಿತಂತೆ ಭಾರತ ಉದ್ಯೋಗ ವರದಿ-2024 (India Employment Report 2024) ಎಂಬ ವರದಿಯನ್ನು ಮಾನವ ಅಭಿವೃದ್ಧಿ ಸಂಸ್ಥೆ (Institute for Human Development) ಪ್ರಕಟಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (International Labour Organization - ILO) ಸಹಭಾಗಿತ್ವದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಯುವಜನರ ಉದ್ಯೋಗ, ಶಿಕ್ಷಣ ಮತ್ತು ಕೌಶಲ್ಯಗಳ ಕುರಿತಾದ ಈ ವರದಿಯು ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿನ ಉದಯೋನ್ಮುಖ ಆರ್ಥಿಕತೆ, ಕಾರ್ಮಿಕ ಮಾರುಕಟ್ಟೆ, ಶೈಕ್ಷಣಿಕ ಮತ್ತು ಕೌಶಲ್ಯಗಳ ಸನ್ನಿವೇಶ ಮತ್ತು ಬದಲಾವಣೆಗಳ ಕಾಲಘಟ್ಟದಲ್ಲಿ ಯುವಕರ ಉದ್ಯೋಗದ ಸಮಸ್ಯೆ ಮೇಲೆ ಬೆಳಕು ಚೆಲ್ಲಿದೆ.

ಮಾನವ ಅಭಿವೃದ್ಧಿ ಸಂಸ್ಥೆಯ ನಿಯಮಿತ ಪ್ರಕಟಣೆಗಳ ಸರಣಿಯಲ್ಲಿ ಭಾರತೀಯ ಉದ್ಯೋಗ ವರದಿಯು ಮೂರನೆಯದಾಗಿದೆ. ಇದು ಭಾರತೀಯ ಕಾರ್ಮಿಕ ಮಾರುಕಟ್ಟೆಯಲ್ಲಿ ಇತ್ತೀಚಿನ ಸ್ಥಿತಿಗತಿಗಳನ್ನು ಎತ್ತಿ ತೋರಿಸುತ್ತದೆ, ಕೋವಿಡ್​-19 ಸಾಂಕ್ರಾಮಿಕದಿಂದ ಉದ್ಭವಿಸಿದ ಬಿಕ್ಕಟ್ಟು ಸೇರಿದಂತೆ ನಿರಂತರ ಮತ್ತು ಹೊಸ ಸವಾಲುಗಳ ಜೊತೆಗೆ ಕೆಲ ಫಲಿತಾಂಶಗಳಲ್ಲಿನ ಸುಧಾರಣೆಗಳನ್ನು ಸೂಚಿಸುತ್ತದೆ. ಕಾರ್ಮಿಕ ಬಲದ ಭಾಗವಹಿಸುವಿಕೆ ದರ, ವಿಶೇಷವಾಗಿ ಮಹಿಳೆಯರಿಗೆ, ಮತ್ತು ನಿರುದ್ಯೋಗ ದರವು 2019ರ ನಂತರ ಕೆಲವು ಸುಧಾರಣೆಗಳನ್ನು ಕಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದ ಕೃಷಿ ಉದ್ಯೋಗದಿಂದಾಗಿ ಇದನ್ನು ಎಚ್ಚರಿಕೆಯಿಂದ ಅರ್ಥೈಸುವ ಅಗತ್ಯವಿದೆ.

ದೇಶಾದ್ಯಂತ ಅನ್ವಯಿಸಲಾದ ಒಂದು ಸುದೀರ್ಘವಾದ ಉದ್ಯೋಗ ಪರಿಸ್ಥಿತಿಗಳ ಸೂಚ್ಯಂಕವು ಕಳೆದ ದಶಕಗಳಲ್ಲಿ ಸಕಾರಾತ್ಮಕ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಆದರೂ, ಕೋವಿಡ್​-19 ಸಾಂಕ್ರಾಮಿಕದಿಂದ ನಕಾರಾತ್ಮಕವಾಗಿ ಪ್ರಭಾವಿತವಾಗಿದೆ. ಕರ್ನಾಟಕದ ಕುರಿತ ಮಾಹಿತಿ ಹೀಗಿದೆ.

  • ಕರ್ನಾಟಕವು ಕಂಪ್ಯೂಟರ್ ಮತ್ತು ಇತರ ಸಾಧನಗಳ ನಡುವೆ ಫೈಲ್‌ಗಳನ್ನು ವರ್ಗಾಯಿಸುವ ಸಾಮರ್ಥ್ಯವನ್ನು ಹೊರತುಪಡಿಸಿ ಹೆಚ್ಚಿನ ಕೌಶಲ್ಯಗಳಲ್ಲಿ ಇತರ ರಾಜ್ಯಗಳಿಗಿಂತ ಉತ್ತಮವಾಗಿದೆ.
  • ಅಪ್ರೆಂಟಿಸ್‌ (ತರಬೇತಿ ಉದ್ಯೋಗಿ)ಗಳನ್ನು ತೊಡಗಿಸಿಕೊಳ್ಳುವ ಅಗ್ರ ಐದು ವಲಯಗಳೆಂದರೆ, ಚಿಲ್ಲರೆ ವ್ಯಾಪಾರ, ವಾಹನೋದ್ಯಮ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಐಟಿ-ಪರಿಣತಿ ಸೇವೆಗಳು ಹಾಗೂ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯಗಳು. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಹರಿಯಾಣದಲ್ಲಿ ಈ ಅಪ್ರೆಂಟಿಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
  • ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಗುಜರಾತ್, ಜೊತೆಗೆ ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ತೆಲಂಗಾಣದಲ್ಲಿ ತಲಾ ಆದಾಯದಲ್ಲಿ ಹೆಚ್ಚಳವಾಗಿದೆ. ಈ ರಾಜ್ಯಗಳು ಮಕ್ಕಳ ಮತ್ತು ಯುವ ಜನಸಂಖ್ಯೆಯ ಅನುಪಾತದಲ್ಲಿ ಕುಸಿತವನ್ನು ಅನುಭವಿಸಿವೆ. ಹಿರಿಯ ವ್ಯಕ್ತಿಗಳ ಅನುಪಾತದಲ್ಲಿ ಏರಿಕೆಯಾಗಿದೆ. ಇದು ಹೆಚ್ಚಿನ ತಲಾ ಆದಾಯದಲ್ಲಿ ಪ್ರತಿಫಲಿಸಿದ್ದು, ತುಲನಾತ್ಮಕವಾಗಿ ಉನ್ನತ ಮಟ್ಟದ ಆರ್ಥಿಕ ಅಭಿವೃದ್ಧಿ ಸಾಧಿಸಲಾಗಿದೆ.

ಉದ್ಯೋಗ ಸಂಬಂಧಿತ ಕಾರಣಗಳಿಂದ ವಲಸೆ: 2021ರಲ್ಲಿ ಒಟ್ಟಾರೆ ವಲಸಿಗರಲ್ಲಿ ಶೇ.10.7ರಷ್ಟು ಜನರು ತಮ್ಮ ಉದ್ಯೋಗದ ಉದ್ದೇಶಗಳಿಗಾಗಿ ವಲಸೆ ಹೋಗಿದ್ದಾರೆ. ಇದರಲ್ಲಿ ಉದ್ಯೋಗ ಅಥವಾ ಉತ್ತಮ ಉದ್ಯೋಗ, ವರ್ಗಾವಣೆ, ಕೆಲಸದ ಸ್ಥಳಕ್ಕೆ ಸಾಮೀಪ್ಯ ಮತ್ತು ಹಿಂದಿನ ವಾಸಸ್ಥಳದಲ್ಲಿ ಉದ್ಯೋಗಾವಕಾಶಗಳ ಕೊರತೆ ಅಂಶವು ಸೇರಿವೆ. ಇದೇ ವೇಳೆ, ಮಹಿಳೆಯರ ವಲಸೆಯಲ್ಲಿ ಶೇ.1.7ರಷ್ಟು, ಪುರುಷರಲ್ಲಿ ಶೇ.49.6ರಷ್ಟು ಕಡಿಮೆಯಾಗಿದೆ. ರಾಷ್ಟ್ರೀಯ ಸರಾಸರಿಗಿಂತ ಅನುಗುಣವಾದ ದೊಡ್ಡ ಪ್ರಮಾಣವನ್ನು ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ, ದೆಹಲಿ (ಶೇ.87.1), ಕರ್ನಾಟಕ (ಶೇ.63.2) ಮತ್ತು ಮಹಾರಾಷ್ಟ್ರ (ಶೇ.59.5). ಆಗಿದೆ. ಪುರುಷರಲ್ಲಿ ಉದ್ಯೋಗ ಸಂಬಂಧಿ ಕಾರಣಗಳಿಂದ ವಲಸೆ ಬಂದವರ ಪೈಕಿ ವಲಸಿಗರ ಪ್ರಮಾಣ ಶೇ.63.2ರಷ್ಟು ಮತ್ತು ಒಟ್ಟಾರೆ ವಲಸೆ ಪ್ರಮಾಣ ಕರ್ನಾಟಕದಲ್ಲಿ ಶೇ.32.5ರಷ್ಟಿದೆ.

ಕರ್ನಾಟಕದ ಉದ್ಯೋಗ ಸ್ಥಿತಿ ಸೂಚ್ಯಂಕ: 2005ರಲ್ಲಿ ಉದ್ಯೋಗ ಸ್ಥಿತಿ ಸೂಚ್ಯಂಕದಲ್ಲಿ ಕರ್ನಾಟಕವು 11ನೇ, 2012ರಲ್ಲಿ 8ನೇ, 2019ರಲ್ಲಿ 8ನೇ ಮತ್ತು 2022ರಲ್ಲಿ 14ನೇ ಸ್ಥಾನ ಹೊಂದಿತ್ತು. ವರ್ಷದಿಂದ ವರ್ಷಕ್ಕೆ ಉದ್ಯೋಗ ಪರಿಸ್ಥಿತಿಗಳ ಸೂಚ್ಯಂಕದಲ್ಲಿ ಕುಸಿತ ಕಂಡುಬಂದಿದೆ.

ಪ್ರಾದೇಶಿಕ ಜನಸಂಖ್ಯಾ ಬದಲಾವಣೆ: ಯುವಕರ ಉದ್ಯೋಗ ಮತ್ತು ನಿರುದ್ಯೋಗ ಸ್ಥಿತಿಗತಿ, ಜೊತೆಗೆ ಯೋಗ್ಯ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಯಶಸ್ಸು ಮತ್ತು ಜನಸಂಖ್ಯಾ ಲಾಭಾಂಶದ ಅತ್ಯುತ್ತಮ ಸಾಕ್ಷಾತ್ಕಾರದಲ್ಲಿ ಗಮನಾರ್ಹ ಪ್ರಾದೇಶಿಕ ಅಸಮಾನತೆ ಇದೆ. ಭಾರತದ ಪೂರ್ವ, ಮಧ್ಯ ಮತ್ತು ಉತ್ತರ ಭಾಗಗಳ ಪ್ರಮುಖ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶವು ಗಣನೀಯ ಸಂಖ್ಯೆಯ ಯುವಕರು ಮತ್ತು ದುಡಿಯುವ ವಯಸ್ಸಿನ ಜನಸಂಖ್ಯೆಯನ್ನು ಹೊಂದಿವೆ.

ಇದಕ್ಕೆ ವ್ಯತಿರಿಕ್ತವಾಗಿ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ಹೆಚ್ಚಿನ ದಕ್ಷಿಣದ ರಾಜ್ಯಗಳಲ್ಲಿ ಯುವಕರ ಜನಸಂಖ್ಯೆಯು ಕಡಿಮೆಯಾಗಿದ್ದು, ಮತ್ತಷ್ಟು ಕುಸಿಯುವ ನಿರೀಕ್ಷೆಯಿದೆ. ಈ ದಕ್ಷಿಣದ ರಾಜ್ಯಗಳಲ್ಲಿ ಹಿರಿಯ ವಯಸ್ಸಿನ ಜನಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯೂ ಇದೆ. ಇದರಿಂದಾಗಿ ಬೇಡಿಕೆ ಯುವ ಕಾರ್ಯಪಡೆ ಭವಿಷ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವುದಿಲ್ಲ.

ಯುವ ಜನಸಂಖ್ಯೆಯ ಪ್ರಮಾಣ ಎಷ್ಟು?: ಯುವಕರು ಎಂದರೆ 15ರಿಂದ 29 ವರ್ಷ ವಯಸ್ಸಿನವರು. ಮುಂಬರುವ ವರ್ಷಗಳಲ್ಲಿ ಯುವಕರ ಪ್ರಮಾಣ ಕುಸಿತ ಕಾಣಲಿದೆ. ಯೋಜಿತ ಒಟ್ಟಾರೆ ಜನಸಂಖ್ಯೆ ಪ್ರಕಾರ, ಕರ್ನಾಟಕದಲ್ಲಿ 2012ರಲ್ಲಿ ಶೇ.25.3ರಷ್ಟು, 2031ಕ್ಕೆ ಶೇ.22.1ರಷ್ಟು ಹಾಗೂ 2036ರಷ್ಟು ಶೇ.20.8ರಷ್ಟು ಆಗಲಿದೆ.

ಕರ್ನಾಟಕದಲ್ಲಿ 2022ರ ಪ್ರಕಾರ, ಯುವಕರ ಉದ್ಯೋಗದಲ್ಲಿ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಈ ಯುವ ಉದ್ಯೋಗದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಲ್ಲಿ ಕರ್ನಾಟಕ ರಾಜ್ಯವು 7ನೇ ಸ್ಥಾನ ಹೊಂದಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆದವರು - ಶೇ.70.7, ವಿದ್ಯಾವಂತ ಉದ್ಯೋಗಿಗಳು - ಶೇ.85.3, ನಿಯಮಿತ ಔಪಚಾರಿಕ ಉದ್ಯೋಗಿಗಳು - ಶೇ.21.6 ಹಾಗೂ ಉದ್ಯೋಗ, ಶಿಕ್ಷಣ ಅಥವಾ ತರಬೇತಿ ಹೊಂದಿರದ ಶೇ.70.3ರಷ್ಟು ಯುವಕರು ಇದ್ದಾರೆ.

ವಿದ್ಯಾವಂತ ಯುವಕರಲ್ಲಿ ನಿರುದ್ಯೋಗ ಹೆಚ್ಚಳ: ಕರ್ನಾಟಕದಲ್ಲಿ 15ರಿಂದ 29 ವರ್ಷ ವಯಸ್ಸಿನ ವಿದ್ಯಾವಂತ ಯುವಕರಲ್ಲಿ ನಿರುದ್ಯೋಗ ದರವು ವರ್ಷದಿಂದ ಹೆಚ್ಚಾಗುತ್ತಿದೆ. 2005ರಲ್ಲಿ ವಿದ್ಯಾವಂತ ಯುವಕರ ನಿರುದ್ಯೋಗ ಪ್ರಮಾಣವು ಶೇ.17ರಷ್ಟಿತ್ತು. 2012ರಲ್ಲಿ ಶೇ.8.37, 2019ರಲ್ಲಿ ಶೇ.16.14 ಮತ್ತು 2022ರಲ್ಲಿ ಶೇ.17.24ಕ್ಕೆ ನಿರುದ್ಯೋಗ ಪ್ರಮಾಣ ತಲುಪಿದೆ. ಇದೇ ವೇಳೆ, ಉದ್ಯೋಗ, ಶಿಕ್ಷಣ ಅಥವಾ ತರಬೇತಿ ಹೊಂದಿರದ ಯುವಕರ ಪ್ರಮಾಣ ಅಧಿಕವಾಗುತ್ತಿದೆ. ಈ ಯುವಕರ ಪ್ರಮಾಣವು 2005ರಲ್ಲಿ ಶೇ24.08, 2012ರಲ್ಲಿ ಶೇ.27.96, 2019ರಲ್ಲಿ ಶೇ.32.04, 2022ರಲ್ಲಿ ಶೇ.30.66ರಷ್ಟಾಗಿದೆ ಎಂದು ವರದಿ ಹೇಳಿದೆ.

Last Updated : Mar 28, 2024, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.