ETV Bharat / state

ಗದಗ: ಎತ್ತಿನ ಬಂಡಿ ಓಡಿಸೋ ಸ್ಪರ್ಧೆಯಲ್ಲಿ ಸಂಭ್ರಮಿಸಿದ ರೈತರು - Bullock cart race

ಗದಗ ನಗರದಲ್ಲಿ ಎತ್ತಿನ ಬಂಡಿ ಓಡಿಸೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

author img

By ETV Bharat Karnataka Team

Published : May 10, 2024, 7:38 PM IST

bullock cart race
ಎತ್ತಿನ ಬಂಡಿ ಓಡಿಸೋ ಸ್ಪರ್ಧೆಯಲ್ಲಿ ಸಂಭ್ರಮಿಸಿದ ರೈತರು (ETV Bharat)

ಗದಗ: ನಗರದ ಒಕ್ಕಲಿಗರ ಓಣಿಯ ಗಂಜಿ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಗದಗ ನಗರದಲ್ಲಿ ರೈತ ಸಮೂಹದಿಂದ ಖಾಲಿ ಗಾಡಾ ಓಡಿಸೋ ಸ್ಪರ್ಧೆ ಆಯೋಜಿಸಿದ್ರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಫಸ್ಟ್ ಪ್ರೈಸ್ 10 ಗ್ರಾಂ ಚಿನ್ನ, 2ನೇ ಬಹುಮಾನ 5 ಗ್ರಾಂ ಹಾಗೂ ಮೂರನೇ ಬಹುಮಾನ 2. 5 ಗ್ರಾಂ ಚಿನ್ನ ಬಹುಮಾನ ಇಡಲಾಗಿತ್ತು.

ಒಂದು ನಿಮಿಷದಲ್ಲಿ ಯಾವ ಜೋಡಿ ಎತ್ತುಗಳು ಹೆಚ್ಚಿನ ದೂರ ಓಡುತ್ತವೆಯೋ ಅವುಗಳನ್ನ ವಿಜಯಿ ಎತ್ತುಗಳು ಅಂತಾ ಘೋಷಿಸಿ ಬಹುಮಾನ ನೀಡಲಾಗುತ್ತೆ. ಗದಗ ನಗರದಲ್ಲಿ ನಡೆದ ಎತ್ತಿನ ಬಂಡಿ ಓಟದಲ್ಲಿ ಜಾನುವಾರುಗಳು ಧೂಳೆಬ್ಬಿಸಿ ರೈತ ಸಮೂಹವನ್ನು ಖುಷಿ ಪಡಿಸಿದವು. ಉತ್ತರ ಕರ್ನಾಟಕದಲ್ಲಿ ಬಂಡಿ ಓಟ ಅಂದ್ರೆ ರೈತ ಸಮೂಹಕ್ಕೆ ಎಲ್ಲಿಲ್ಲದ ಖುಷಿ. ಹೀಗಾಗಿ ಇಂದು ನಡೆದ ಬಂಡಿ ಓಟದಲ್ಲಿ ಮಹಾರಾಷ್ಟ್ರ ರಾಜ್ಯ ಮಾತ್ರವಲ್ಲದೇ ರಾಜ್ಯದ ಬೆಳಗಾವಿ, ಹಾವೇರಿ, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಜೋಡಿ ಎತ್ತುಗಳು ಖಾಲಿ ಗಾಡಿ ಓಡಿಸೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಅಬ್ಬಾ ಎತ್ತುಗಳು ಶರವೇಗದ ಓಟ, ಧೂಳೆಬ್ಬಿಸಿ ಮಿಂಚಿನಂತೆ ಓಡುವ ನೋಟ ನೋಡಿದ್ರೆ ಮೈ ಜುಮ್ ಎನ್ನುವಂತೆ ಇತ್ತು. ಬಂಡಿ ಓಟ ನೋಡೋಕೆ ಸಾವಿರಾರು ಜನರು ಆಗಮಿಸಿದ್ರು. ಕೆಲವು ಜೋಡಿ ಎತ್ತುಗಳ ಅಭಿಮಾನಿಗಳು ಎತ್ತುಗಳು ಅಖಾಡದಲ್ಲಿ ಮಿಂಚಿನ ಓಟ ಓಡುತ್ತಿದ್ದಂತೆ ಅವುಗಳ ಜೊತೆ ಜೊತೆಗೆ ಓಡಿ ಹುರುಪು ತುಂಬ್ತಿದ್ರು.

ಇನ್ನು ಗಾಡಾ ಓಡೋ ಅಖಾಡದ ಅಕ್ಕಪಕ್ಕದಲ್ಲಿ ನಿಂತಿರೋ ರೈತರು ಹಾಗೂ ಎತ್ತುಗಳ ಅಭಿಮಾನಿಗಳು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಎತ್ತುಗಳಿಗೆ ಶರವೇಗದ ಓಟ ಓಡಲು ಹುಮ್ಮಸ್ಸು ತುಂಬ್ತಿದ್ರು. ಎತ್ತುಗಳ ಮಾಲೀಕರಿಗಂತೂ ತಮ್ಮ ತಮ್ಮ ಎತ್ತುಗಳು ಭರ್ಜರಿಯಾಗಿ ಓಡ್ತಿರೋದು ನೋಡಿ ಸಖತ್ ಖುಷಿ ಆಗ್ತಿತ್ತು. ಗ್ರಾಮೀಣ ಕ್ರೀಡೆಗಳು ನಶಿಸಿಹೋಗ್ತಾಯಿದ್ದು, ಈ ಕ್ರೀಡೆಗಳನ್ನು ಯುವ ಜನಾಂಗಕ್ಕೆ ತೋರಿಸುವ ಮೂಲಕ ಉಳಿಸುವ ಕೆಲಸ ಮಾಡಲಾಗುತ್ತಿದೆ.

ಇದನ್ನೂ ಓದಿ : ಮೈಸೂರು: ಹದಿನಾರು ಗ್ರಾಮದಲ್ಲಿ ಸಂಭ್ರಮದಿಂದ ನೆರವೇರಿದ ಎತ್ತಿನ ಬಂಡಿ ಜಾತ್ರೆ - Bullock Cart Festival

ETV Bharat Logo

Copyright © 2024 Ushodaya Enterprises Pvt. Ltd., All Rights Reserved.