ಗಂಗಾವತಿ(ಕೊಪ್ಪಳ): ಸಿಡಿಲು ಬಡಿದು ದುರ್ಗಾದೇವಿ ದೇವಸ್ಥಾನದ ಗೋಪುರ ಬಿರುಕು ಬಿಟ್ಟ ಘಟನೆ ಕನಕಗಿರಿ ತಾಲೂಕಿನ ನವಲಿ ತಾಂಡದಲ್ಲಿ ಶನಿವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು - ನೋವು ಸಂಭವಿಸಿಲ್ಲ. ಯುಗಾದಿ ಹಬ್ಬದ ನಿಮಿತ್ತ ಇತ್ತೀಚಿಗೆ ದೇವಸ್ಥಾನಕ್ಕೆ ಸುಣ್ಣ - ಬಣ್ಣ ಬಳಿಯಲಾಗಿತ್ತು. ತಾಂಡದ ಲಂಬಾಣಿ ಸಮುದಾಯದವರು ದೇಣಿಗೆ ಸಂಗ್ರಹಿಸಿ ಗೋಪುರವನ್ನು ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: ಬಿರು ಬಿಸಿಲಿಗೆ ಸುಡುತ್ತಿದ್ದ ಧರೆಗೆ ತಂಪೆರೆದ ವರುಣ: ಬೆಣ್ಣೆನಗರಿಯಲ್ಲಿ ವರ್ಷದ ಮೊದಲ ಮಳೆ - rain fell in davangere
ಸಿಡಿಲಿಗೆ 18 ಕುರಿಗಳು ಬಲಿ(ಶಿವಮೊಗ್ಗ): ಮತ್ತೊಂದೆಡೆ, ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಆಯನೂರಿನ ಕೋಟೆ ಗ್ರಾಮದಲ್ಲಿ ನಡೆದಿದೆ. ಜಾಕಿರ್ ಹುಸೇನ್ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಜಾಕಿರ್ ಹುಸೇನ್ ಕುರಿ ಸಾಕಾಣಿಕೆ ಮಾಡುತ್ತ ಜೀವನ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಜಾಕಿರ್ ಅವರ ಮಕ್ಕಳು ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಘಟನೆ ನಡೆದಿದೆ. ಅದೃಷ್ಟವಶಾತ್ ಮಕ್ಕಳಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.