ETV Bharat / state

ಪಂಚ ಗ್ಯಾರಂಟಿ, ಬರ ನಿರ್ವಹಣೆ ಸವಾಲಿನ ಮಧ್ಯೆ ಬಜೆಟ್ ಗುರಿ ತಲುಪಲಾಗದ ರಾಜಸ್ವ ಸಂಗ್ರಹ! - ರಾಜಸ್ವ ಸಂಗ್ರಹ

ಪಂಚ ಗ್ಯಾರಂಟಿ ಹಾಗೂ ಬರ ನಿರ್ವಹಣೆ ಸವಾಲಿನ ಮಧ್ಯೆ ರಾಜ್ಯದ ಪ್ರಮುಖ ತೆರಿಗೆಗಳ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

tax collection
tax collection
author img

By ETV Bharat Karnataka Team

Published : Feb 9, 2024, 10:07 AM IST

ಬೆಂಗಳೂರು: ಪಂಚ ಗ್ಯಾರಂಟಿ ಅನುಷ್ಠಾನ ಹಾಗೂ ಬರದ ನಿರ್ವಹಣೆ ನಿಭಾಯಿಸಬೇಕಾದ ಕಾಂಗ್ರೆಸ್ ಸರ್ಕಾರಕ್ಕೆ ನಿಗದಿತ ತೆರಿಗೆ ಸಂಗ್ರಹ ಗುರಿ ಮುಟ್ಟಲು ಸಾಧ್ಯವಾಗುತ್ತಲೇ ಇಲ್ಲ. ರಾಜ್ಯದ ಪ್ರಮುಖ ತೆರಿಗೆಗಳ ಸಂಗ್ರಹ ನಿರೀಕ್ಷಿತ ಗುರಿ ತಲುಪದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.‌ ಡಿಸೆಂಬರ್​ವರೆಗೆ ರಾಜ್ಯದ ತೆರಿಗೆ ಸಂಗ್ರಹದಲ್ಲಿನ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಂಚ ಗ್ಯಾರಂಟಿ ಸವಾಲಿನ ಮಧ್ಯೆ ಬರದ ಸಂಕಷ್ಟ ರಾಜ್ಯದ ಆರ್ಥಿಕತೆಗೆ ಇನ್ನಷ್ಟು ಹೊಡೆತ ನೀಡುವಂತಾಗಿದೆ. ಪ್ರಮುಖ ತೆರಿಗೆಗಳ ಸಂಗ್ರಹದ ಗುರಿಯನ್ನು ಹೆಚ್ಚಿಸುವ ಮೂಲಕ ಪಂಚ ಗ್ಯಾರಂಟಿ ಹೊರೆ ಕಡಿಮೆ ಮಾಡುವ ಲೆಕ್ಕಾಚಾರವನ್ನು ಕಾಂಗ್ರೆಸ್ ಸರ್ಕಾರ ಹೊಂದಿತ್ತು.‌ ಆದರೆ, ಸರ್ಕಾರಕ್ಕೆ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಮುಟ್ಟಲು ಸಾಧ್ಯವಾಗದೇ ಇರುವುದು ಹಾಕಿದ್ದ ಲೆಕ್ಕಾಚಾರವನ್ನು ಏರುಪೇರು ಮಾಡಿತು.

2023-24 ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ 2,38,410 ಕೋಟಿ ರೂ.ಗಳ ರಾಜಸ್ವ ಜಮೆಯ ಅಂದಾಜು ಮಾಡಿದ್ದಾರೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ ಜಿ.ಎಸ್.ಟಿ. ಪರಿಹಾರ ಒಳಗೊಂಡಂತೆ 1,75,653 ಕೋಟಿ ರೂ.ಗಳಾಗಿದ್ದು, ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆ ಇಟ್ಟಿದೆ. ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ನೀಡಿರುವ ರಾಜ್ಯ ಸರ್ಕಾರಕ್ಕೆ ಇದೀಗ ತೆರಿಗೆ ಕುಂಠಿತದ ಬರೆ ಬಿದ್ದಿದೆ.

ಬಜೆಟ್ ಗುರಿ ತಲುಪದ ತೆರಿಗೆ ಸಂಗ್ರಹ: ರಾಜ್ಯ ಸರ್ಕಾರಕ್ಕೆ ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಪ್ರಮುಖ ತೆರಿಗೆ ಮೂಲಗಳಾಗಿವೆ. ಆದರೆ, ಈ ನಾಲ್ಕು ತೆರಿಗೆಗಳ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ವರ್ಷದ ಒಂಬತ್ತು ತಿಂಗಳು ಕಳೆದರೂ ತೆರಿಗೆ ಸಂಗ್ರಹದ ಪ್ರಗತಿ ಕಳೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಬರ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುಂಠಿತಗೊಂಡಿರುವ ತೆರಿಗೆ ಸಂಗ್ರಹ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

2023-24 ಸಾಲಿನಲ್ಲಿ ಸುಮಾರು ಶೇ.22-24 ಬೆಳವಣಿಗೆ ದರದಲ್ಲಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಆದರೆ, ಈವರೆಗಿನ ಒಟ್ಟು ತೆರಿಗೆ ಸಂಗ್ರಹದ ಬೆಳವಣಿಗೆ ದರ ಕೇವಲ 12-ಶೇ.13 ಆಸುಪಾಸಿನಲ್ಲಿದೆ ಎಂದು ಆರ್ಥಿಕ ಇಲಾಖೆ ಅಂಕಿ - ಅಂಶ ನೀಡಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ತೈಲ ಬೆಲೆ ಏರಿಳಿತ: ಪ್ರತಿ ಲೀಟರ್‌ ಡೀಸೆಲ್​ಗೆ 3 ರೂ. ನಷ್ಟ, ಪೆಟ್ರೋಲ್ ಮೇಲಿನ ಲಾಭವೂ ಇಳಿಕೆ

ಆರ್ಥಿಕ ಇಲಾಖೆಯ ಅಂಕಿ ಅಂಶದ ಪ್ರಕಾರ 2023-24ನೇ ಸಾಲಿನ ಒಂಬತ್ತು ತಿಂಗಳ ಪರಿಷ್ಕೃತ ಸ್ವಂತ ತೆರಿಗೆ ಸಂಗ್ರಹದ ಗುರಿ ಇದ್ದಿದ್ದು 1,29,978 ಕೋಟಿ ರೂ. ಆದರೆ ಕಳೆದ ಒಂಬತ್ತು ತಿಂಗಳಲ್ಲಿ ಪ್ರಮುಖ ತೆರಿಗೆಗಳ ಮೂಲಕ ಸಂಗ್ರಹವಾದ ಸ್ವಂತ ತೆರಿಗೆ ರಾಜಸ್ವ 1,16,945 ಕೋಟಿ ರೂ. ಮಾತ್ರ. ಅಂದರೆ ಒಂಬತ್ತು ತಿಂಗಳಲ್ಲಿ 13,033 ಕೋಟಿ ರೂ. ಒಟ್ಟು ಸ್ವಂತ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಕುಸಿತ ಕಂಡಿದೆ. ಬಜೆಟ್ ಅಂದಾಜು ಗುರಿ ಮುಟ್ಟಲು ಯಾವ ತೆರಿಗೆ ಇಲಾಖೆಗಳಿಗೂ ಸಾಧ್ಯವಾಗುತ್ತಿಲ್ಲ.

2023-24 ಬಜೆಟ್ ಅಂದಾಜಿನ ಪ್ರಕಾರ ಸ್ವಂತ ತೆರಿಗೇತರ ರಾಜಸ್ವ ಮೂಲಕ 12,500 ಕೋಟಿ ಸಂಗ್ರಹದ ಗುರಿ ನೀಡಲಾಗಿದೆ. ಡಿಸೆಂಬರ್ ವರೆಗೆ 8,883 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಡಿಸೆಂಬರ್ ವರೆಗೆ 9,378 ಕೋಟಿ ರೂ.‌ ಸಂಗ್ರಹಿಸಬೇಕಾಗಿತ್ತು.‌ ಅಂದರೆ 495 ಕೋಟಿ ರೂ. ಸ್ವಂತ ತೆರಿಗೇತರ ರಾಜಸ್ವ ಸಂಗ್ರಹದಲ್ಲಿ ಕುಸಿತ ಕಂಡಿದೆ.

ವಾಣಿಜ್ಯ ಇಲಾಖೆ: 2023-23 ಸಾಲಿನ ಬಜೆಟ್​​ನಲ್ಲಿ ವಾರ್ಷಿಕ ಅಂದಾಜು 98,650 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 8,220.83 ಕೋಟಿ ರೂ. ಗುರಿ ನಿಗದಿ ಮಾಡಲಾಗಿದೆ. ಏಪ್ರಿಲ್​​ನಿಂದ ಡಿಸೆಂಬರ್​​ವರೆಗೆ ಒಟ್ಟು 73,987.47 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಡಿಸೆಂಬರ್ ವರೆಗೆ ಸಂಗ್ರಹವಾದ ವಾಣಿಜ್ಯ ತೆರಿಗೆ 67,832 ಕೋಟಿ ರೂ. ಮಾತ್ರ. ಆ ಮೂಲಕ 6,155 ಕೋಟಿ ರೂ. ಕುಸಿತ ಕಂಡಿದೆ. ಒಟ್ಟು ಸಂಗ್ರಹದ ಗುರಿ ಮುಂದೆ ಡಿಸೆಂಬರ್ ವರೆಗೆ ಶೇ 68ರಷ್ಟು ಪ್ರಗತಿ ಕಂಡಿದೆ.

ಅಬಕಾರಿ ತೆರಿಗೆ: ಸಾಲಿನಲ್ಲಿ ವಾರ್ಷಿಕ 36,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 3,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹಿಸಬೇಕಾಗಿದೆ. ಡಿಸೆಂಬರ್ ವರೆಗೆ ಒಟ್ಟು 27,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಬೇಕಾಗಿತ್ತು. ಆದರೆ, 9 ತಿಂಗಳಲ್ಲಿ ಸಂಗ್ರಹಿಸಿದ್ದು ಕೇವಲ 25,456 ಕೋಟಿ ರೂ. ಅಂದರೆ ಗುರಿಗಿಂತ ಸುಮಾರು 1,544 ಕೋಟಿ ರೂ. ಕುಸಿತ ಕಂಡಿದೆ. ಬಜೆಟ್ ಗುರಿ ಮುಂದೆ 9 ತಿಂಗಳಲ್ಲಿ ಶೇ.71 ಸಂಗ್ರಹದ ಪ್ರಗತಿ ಕಂಡಿದೆ.

ಮೋಟಾರು ವಾಹನ ತೆರಿಗೆ: ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 11,500 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 958 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹಿಸಬೇಕಾಗಿದೆ. ಒಂಬತ್ತು ತಿಂಗಳ ಮೋಟಾರು ವಾಹನ ತೆರಿಗೆ ಸಂಗ್ರಹದ ಸಂಚಿತ ಗುರಿ ನಿಗದಿಯಾಗಿದ್ದು 8,622 ಕೋಟಿ ರೂ. ಆದರೆ, ಒಂಬತ್ತು ತಿಂಗಳಲ್ಲಿ ಸಂಗ್ರಹಿಸಿದ್ದು ಕೇವಲ 8,344 ಕೋಟಿ ರೂ. ಅಂದರೆ ನಿರೀಕ್ಷಿತ ಗುರಿಗಿಂತ ಸುಮಾರು 278 ಕೋಟಿ ರೂ. ಕುಸಿತ ಕಂಡಿದೆ. ಬಜೆಟ್ ಒಟ್ಟು ಗುರಿ ಪೈಕಿ ಡಿಸೆಂಬರ್ ವರೆಗೆ ಶೇ.73 ಸಂಗ್ರಹದ ಪ್ರಗತಿ ಸಾಧಿಸಿದೆ.

ಮುದ್ರಾಂಕ ಹಾಗೂ ನೋಂದಣಿ ಶುಲ್ಕ: ವಾರ್ಷಿಕ 25,000 ಕೋಟಿ ರೂ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿದೆ. ಅದರಂತೆ ಮಾಸಿಕ 2,083 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಾಗಿದೆ. ಏಪ್ರಿಲ್- ಡಿಸೆಂಬರ್ ನ ಒಂಬತ್ತು ತಿಂಗಳ ಅವಧಿಯ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹದ ಸಂಚಿತ ಗುರಿ ನಿಗದಿಯಾಗಿದ್ದು 18,747 ಕೋಟಿ ರೂ. ಆದರೆ, 9 ತಿಂಗಳಲ್ಲಿ ಸಂಗ್ರಹಿಸಿದ್ದು ಕೇವಲ 14,244 ಕೋಟಿ ರೂ. ಅಂದರೆ ನಿರೀಕ್ಷಿತ ಗುರಿಗಿಂತ ಸುಮಾರು 4,503 ಕೋಟಿ ರೂ. ಕುಸಿತ ಕಂಡಿದೆ. ಬಜೆಟ್ ಒಟ್ಟು ಗುರಿ ಪೈಕಿ ಡಿಸೆಂಬರ್ ವರೆಗೆ ಶೇ.57 ಮಾತ್ರ ಸಂಗ್ರಹದ ಪ್ರಗತಿ ಸಾಧಿಸಲಾಗಿದೆ.

ಇತರೆ ತೆರಿಗೆ ಸಂಗ್ರಹ: ಈ ಸಾಲಿನಲ್ಲಿ ತೆರಿಗೆ ಸಂಗ್ರಹದ ಗುರಿ ನಿಗದಿಗೊಳಿಸಿದ್ದು 2,153 ಕೋಟಿ ರೂ. ಅದರಂತೆ ಮಾಸಿಕ 179 ಕೋಟಿ ರೂ.‌ ಸಂಗ್ರಹ ಮಾಡಬೇಕಾಗಿದೆ. ಅಂದರೆ ಡಿಸೆಂಬರ್ ವರೆಗೆ ಇತರ ತೆರಿಗೆ ಮೂಲಕ 1,611 ಕೋಟಿ ತೆರಿಗೆ ಸಂಗ್ರಹಿಸಬೇಕಾಗಿತ್ತು. ಆದರೆ ಡಿಸೆಂಬರ್ ವರೆಗೆ ಸಂಗ್ರಹಿಸಿದ ತೆರಿಗೆ 1,068 ಕೋಟಿ ರೂ. ಮಾತ್ರ. ಅಂದರೆ ನಿರೀಕ್ಷಿತ ಗುರಿಗಿಂತ ಸುಮಾರು 543 ಕೋಟಿ ರೂ. ಕುಂಠಿತವಾಗಿದೆ. ಬಜೆಟ್ ಒಟ್ಟು ಗುರಿ ಪೈಕಿ ಡಿಸೆಂಬರ್ ವರೆಗೆ ಶೇ.50 ಮಾತ್ರ ಸಂಗ್ರಹದ ಪ್ರಗತಿ ಸಾಧಿಸಲಾಗಿದೆ.

ಇದನ್ನೂ ಓದಿ: ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.