ETV Bharat / state

ಸ್ವಾಮೀಜಿಗಳಿಗೆ ಸಹನೆ ಇರಬೇಕು, ಸಹನೆ ಇದ್ದರೆ ಎಂಥದ್ದನ್ನೂ ಗೆಲ್ಲಬಹುದು: ಮುರುಘಾ ಶ್ರೀ

ಚಿತ್ರದುರ್ಗದ ಕೋರ್ಟ್​ ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದ ನಂತರ ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಇಂದು ಆಗಮಿಸಿದ ಮುರುಘಾ ಶ್ರೀ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

shivamurthy-muruga-swamiji
ಮುರುಘಾ ಶ್ರೀ (ETV Bharat)
author img

By ETV Bharat Karnataka Team

Published : Oct 7, 2024, 6:42 PM IST

Updated : Oct 7, 2024, 7:07 PM IST

ದಾವಣಗೆರೆ: ಸ್ವಾಮೀಜಿಗಳಿಗೆ ಸಹನೆ ಇರಬೇಕು. ಆ ಸಹನೆ ಇದ್ರೆ ಎಂಥದ್ದನ್ನೂ ಗೆಲ್ಲಬಹುದು. ಸತ್ಯಕ್ಕೆ ಜಯ ಸಿಗುವ ನಿರೀಕ್ಷೆ ಇದೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಭಕ್ತರು ಚೆನ್ನಾಗಿರಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು. ನಮ್ಮ ಮುಖದ ಮೇಲೆ ಕಳೆ ಇದೆ. ಬಹಳ ಪುಸ್ತಕ ಓದಿದ್ದೇನೆ. ಮೊದಲ ಬಾರಿಗೆ ಹೋದಾಗ 250 ಪುಸ್ತಕ ಓದಿದ್ದೆ, ಎರಡನೇ ಬಾರಿ ಹೋದಾಗ 150 ಪುಸ್ತಕ ಓದಿದ್ದೇನೆ‌ ಎಂದರು.

ಜ್ಞಾನ ಸಂಪಾದನೆಗೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಸಮಯ ಸದುಪಯೋಗ ಮಾಡಿಕೊಂಡಿದ್ದೇನೆ. ಇದಲ್ಲದೇ ನಾಲ್ಕೈದು ಪುಸ್ತಕಗಳನ್ನೂ ಬರೆದಿದ್ದು, ಅವುಗಳನ್ನು ಬಿಡುಗಡೆ ಮಾಡುತ್ತೇನೆ. ದಾವಣಗೆರೆಯ ಶಿವಯೋಗಿ ಆಶ್ರಮದಲ್ಲಿ ವಾಸ್ತವ್ಯ ಹೂಡುವೆ. ಭಕ್ತರ ಭೇಟಿಗೆ ಮುಕ್ತ ಅವಕಾಶವಿದೆ. ಭಕ್ತರ ಭೇಟಿಗಾಗಿಯೇ ನಾವಿರುವುದು ಎಂದು ಅವರು ಹೇಳಿದರು.

ಶಿವಮೂರ್ತಿ ಮುರುಘಾ ಶರಣರು (ETV Bharat)

ಇದನ್ನೂ ಓದಿ: ಪೋಕ್ಸೋ ಪ್ರಕರಣ: ಜಾಮೀನಿನ ಮೇಲೆ ಮುರುಘಾ ಶ್ರೀ ಬಿಡುಗಡೆಗೆ ಕೋರ್ಟ್ ಆದೇಶ

ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುರುಘಾಶ್ರೀ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಇಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಚಿತ್ರದುರ್ಗ ಕಾರಾಗೃಹದಿಂದ ಸಾಯಂಕಾಲ ಬಿಡುಗಡೆ ಮಾಡಲಾಯಿತು. ಆ ಬಳಿಕ ಶ್ರೀಗಳು ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಆಗಮಿಸಿದರು. ಹೈಕೋರ್ಟ್ ಷರತ್ತಿನ ಹಿನ್ನೆಲೆಯಲ್ಲಿ ಮುರುಘಾ ಶ್ರೀ ಚಿತ್ರದುರ್ಗ ಪ್ರವೇಶಿಸುವುದಿಲ್ಲ.

ಭಕ್ತರಿಂದ ಸ್ವಾಗತ: ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಆಗಮಿಸಿದ ಮುರುಘಾ ಶ್ರೀಗಳಿಗೆ ಹೂವಿನ ಹಾರ ಹಾಕಿ ಭಕ್ತರು ಸ್ವಾಗತಿಸಿದರು. ಶ್ರೀಗಳನ್ನು ಸ್ವಾಗತಿಸಲು ಆಶ್ರಮಕ್ಕೆ ಹಲವು ಭಕ್ತರು ಆಗಮಿಸಿದ್ದರು.

ಶ್ರೀಗರ ಪರ ವಕೀಲರು ಹೇಳಿದ್ದೇನು? ಪ್ರಕರಣದಲ್ಲಿ ಮುರುಘಾ ಶರಣರಿಗೆ ಈ ಹಿಂದೆ ಜಾಮೀನು ಮಂಜೂರು ಆಗಿತ್ತು. ಬಳಿಕ ಈ ಜಾಮೀನು ಮಂಜೂರು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಸಾಕ್ಷಿಗಳ ವಿಚಾರಣೆ ಪೂರ್ಣವಾದ ಬಳಿಕ ಜಾಮೀನು ನೀಡುವಂತೆ ಆದೇಶಿಸಿತ್ತು. ಇದೀಗ ಎಲ್ಲ 13 ಸಾಕ್ಷಿಗಳ ವಿಚಾರಣೆ ಮುಗಿದಿದ್ದರಿಂದ ಕೋರ್ಟ್ ಜಾಮೀನು ನೀಡಿದೆ. ಈ ಹಿಂದೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳು ಈಗಲೂ ಅನ್ವಯವಾಗಲಿವೆ' ಎಂದು ಚಿತ್ರದುರ್ಗದ ಮುರುಘಾ ಶ್ರೀಗಳ ಪರ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿದ್ದರು.

ಸುಪ್ರೀಂ ಕೋರ್ಟ್ ಸೂಚನೆಯಂತೆ ಮುರುಘಾ ಶರಣರನ್ನು ಬಿಡುಗಡೆ ಮಾಡುವಂತೆ ಚಿತ್ರದುರ್ಗ ಕೋರ್ಟ್​ನಲ್ಲಿ ಇಂದು ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಮನವಿ ಮಾಡಿದ್ದರು.

Last Updated : Oct 7, 2024, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.