ETV Bharat / state

ಬಳ್ಳಾರಿ ಬಿಮ್ಸ್ ಆಸ್ಪತ್ರೆಯ ಬಳಕೆದಾರರ ಶುಲ್ಕ ದುರ್ಬಳಕೆ: ಮೂವರು ಸಿಬ್ಬಂದಿ ಅಮಾನತು - Staff Suspended - STAFF SUSPENDED

ಆಸ್ಪತ್ರೆಯಲ್ಲಿ ಬಳಕೆದಾರರ ಶುಲ್ಕ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮೂವರನ್ನು ಅಮಾನತುಗೊಳಿಸಲಾಗಿದೆ.

bly suspended
ಬಳ್ಳಾರಿ ಬಿಮ್ಸ್ ಆಸ್ಪತ್ರೆ (ETV Bharat)
author img

By ETV Bharat Karnataka Team

Published : Aug 3, 2024, 6:45 PM IST

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಬಳಕೆದಾರರ ಶುಲ್ಕ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿಯನ್ನು ವಿಮ್ಸ್ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸಿಬ್ಬಂದಿ ದಯಾ ಅಮರ್, ಮೇಲ್ವಿಚಾರಕಿ ಶರಣಮ್ಮ, ಅಧೀಕ್ಷಕ ಗುರುರಾಜ ಅಮಾನತುಗೊಂಡವರು.

ನಿತ್ಯ 10-20 ರೂಪಾಯಿನಂತೆ ಹೊರ ರೋಗಿಗಳ ವಿಭಾಗದಲ್ಲಿ ಜನರು ಕಟ್ಟುವ ಹಣವನ್ನು ಈ ಮೂವರು ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಒಟ್ಟು 6 ಲಕ್ಷದ 21 ಸಾವಿರದ 242 ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಣವನ್ನು ಬ್ಯಾಂಕ್​ಗೆ ಕಟ್ಟದೇ ತಮ್ಮ ಜೇಬಿಗೆ ಇಳಿಸಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ ತಿಳಿಸಿದ್ದಾರೆ.

ದಯಾ ಅಮರ್ ಎಂಬಾತ ಬ್ಯಾಂಕ್​ಗೆ ಹಾಕಿರುವ ನಕಲಿ ಚಲನ್ ತೋರಿಸಿ ಆ ಹಣ ಎಗರಿಸಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಒಂದು ಅಥವಾ ಎರಡು ಸಾವಿರ ಹಣ ತೆಗೆದುಕೊಂಡು ಹೋಗಿ ಅದನ್ನು ಬ್ಯಾಂಕ್​ಗೆ ಹಾಕಿ ಬಳಿಕ ನಕಲಿ ಚಲನ್​ನಲ್ಲಿ 20-25 ಸಾವಿರ ಅಂತಾ ಬರೆದು ಯಾಮಾರಿಸಿದ್ದಾನೆ. ವಿಮ್ಸ್ ಮೇಲಾಧಿಕಾರಿಗಳು ಅಕೌಂಟ್ ಚೆಕ್ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಆರೋಪದಡಿ ದಯಾ ಅಮರ್​ ಸಹಿತ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಸಿಬ್ಬಂದಿಯಾದ ಮೇಲ್ವಿಚಾರಕಿ ಶರಣಮ್ಮ, ಅಧೀಕ್ಷಕ ಗುರುರಾಜ್ ಅವರನ್ನು ಸಹ ಅಮಾನತು ಮಾಡಲಾಗಿದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ ತಿಳಿಸಿದ್ದಾರೆ. ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಆಶ್ರಮದಲ್ಲಿ ಬಾಲಕನ ಮೇಲೆ ಸ್ವಾಮೀಜಿಯಿಂದ ಮನಸೋಇಚ್ಛೆ ಹಲ್ಲೆ ಆರೋಪ: ಕ್ರಮಕ್ಕೆ ಮುಂದಾದ ಆಯೋಗ - Child Assault Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.