ETV Bharat / state

ಬೆಂಗಳೂರಲ್ಲಿ ಭೀಕರ ಅಪಘಾತ: ಜನ್ಮದಿನ ಆಚರಿಸಿ ಬರುತ್ತಿದ್ದ ಮೂವರು ವಿದ್ಯಾರ್ಥಿಗಳ ದಾರುಣ ಸಾವು - Bengaluru Accident

ಜನ್ಮದಿನ ಸಂಭ್ರಮಿಸಿ ವಾಪಸ್ ಬರುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಜಿಕೆವಿಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಬೆಂಗಳೂರಲ್ಲಿ ಭೀಕರ ಅಪಘಾತ
ಬೆಂಗಳೂರಲ್ಲಿ ಭೀಕರ ಅಪಘಾತ (ETV Bharat)
author img

By ETV Bharat Karnataka Team

Published : Sep 12, 2024, 10:13 AM IST

ಬೆಂಗಳೂರು: ಸ್ನೇಹಿತನ ಜನ್ಮದಿನ ಆಚರಿಸಿಕೊಳ್ಳಲು ಹೋದ ಮೂವರು ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಜಾಲ ಸಂಚಾರ ವ್ಯಾಪ್ತಿಯ ಏರ್​​ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಸುಜಿತ್ ಮತ್ತು ಸ್ನೇಹಿತರಾದ ರೋಹಿತ್ ಹಾಗೂ ಹರ್ಷ ಮೃತರು. ಇವರು ಇಲ್ಲಿನ ಜಿಕೆವಿಕೆಯಲ್ಲಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸುಜಿತ್ ಜನ್ಮದಿನ ಆಚರಿಸಲು ಐವರು ವಿದ್ಯಾರ್ಥಿಗಳು ಎರಡು ಬೈಕ್​ನಲ್ಲಿ ಏರ್​ಪೋರ್ಟ್​ ಕಡೆ ಲಾಂಗ್ ಡ್ರೈವ್​ಗೆ ತೆರಳಿದ್ದರು. ಸುಜಿತ್, ರೋಹಿತ್ ಹಾಗೂ ಹರ್ಷ ಒಂದೇ ಬೈಕಿನಲ್ಲಿದ್ದರೆ, ಮತ್ತೊಂದು ಬೈಕಿನಲ್ಲಿ ಇನ್ನಿಬ್ಬರು ತೆರಳಿದ್ದರು. ಜನ್ಮದಿನ ಆಚರಿಸಿ ವಾಪಸ್ ಬರುವಾಗ ಬೈಕ್-ಗೂಡ್ಸ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಹಿತಿ ಪಡೆದು ಚಿಕ್ಕಜಾಲ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಶೀಲನೆ ನಡೆಸಿದರು. ವಿದ್ಯಾರ್ಥಿಗಳ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಅಂಗಡಿ, ವಾಹನಗಳಿಗೆ ಬೆಂಕಿ, ಇಬ್ಬರು ಪೊಲೀಸರಿಗೆ ಗಾಯ - Stone Pelting In Nagamangala

ETV Bharat Logo

Copyright © 2024 Ushodaya Enterprises Pvt. Ltd., All Rights Reserved.