ETV Bharat / state

ಕಳ್ಳರ ಪಾಲಾಗಿದ್ದ ಚಿನ್ನಾಭರಣ ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಗೆ ವಾಪಸ್! - Stolen Gold Jewelery Returned Home

author img

By ETV Bharat Karnataka Team

Published : Aug 16, 2024, 1:37 PM IST

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಠಾಣೆ ಪೊಲೀಸರು ಕೆಜಿಎಫ್ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Theft Jewellery
ಕಳ್ಳತನವಾಗಿದ್ದ ಆಭರಣಗಳು (ETV Bharat)

ಬೆಂಗಳೂರು: ಕಳ್ಳರ ಪಾಲಾಗಿದ್ದ ಚಿನ್ನಾಭರಣ, ದೇವಿಯ ಬೆಳ್ಳಿ ಮುಖ ಸೇರಿದಂತೆ ವಿವಿಧ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆ ಮಾಲೀಕರಿಗೆ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಮಹಾದೇವಪುರ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಲೇಔಟ್‌ನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಕೆಜಿಎಫ್ ಮೂಲದ ಜ್ಞಾನಪ್ರಕಾಶ್, ಸಂತೋಷ್, ಪ್ರೇಮ್ ಕುಮಾರ್ ಎಂಬಾತನ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.

ಕಳ್ಳತನವಾಗಿದ್ದ ಆಭರಣಗಳು (ETV Bharat)

ದಿನಪತ್ರಿಕೆಗಳು ಬಿದ್ದಿರುವ, ಲೈಟ್ ಆಫ್ ಆಗಿರುವ ಅಥವಾ ಚಪ್ಪಲಿಗಳು ಕಾಣದ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಜುಲೈ 12ರಂದು ಲಕ್ಷ್ಮೀ ಸಾಗರ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದಾಗ ಮನೆ ಬಳಿ ಬಂದಿದ್ದ ಆರೋಪಿಗಳು, ಬೀಗ ಮುರಿದು ಕಳ್ಳತನ ಎಸಗಿ ಪರಾರಿಯಾಗಿದ್ದರು. ಜುಲೈ 18ರಂದು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಪತ್ತೆಯಾಗಿತ್ತು. ತಕ್ಷಣ ಮನೆ ಮಾಲೀಕ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

arrested accused
ಬಂಧಿತ ಆರೋಪಿಗಳು (ETV Bharat)

ಅದರನ್ವಯ, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಕೆಜಿಎಫ್ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೋಲಾರದ ರಾಬರ್ಟ್​ಸನ್ ಪೇಟೆಯ ಜ್ಯುವೆಲ್ಲರಿ ಅಂಗಡಿಯಲ್ಲಿ ಅಡಮಾನವಿರಿಸಿದ್ದ‌ 75 ಲಕ್ಷ ರೂ. ಮೌಲ್ಯದ 840 ಗ್ರಾಂ ಚಿನ್ನ, ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಮಹದೇವಪುರ, ಕೆ‌.ಆರ್.ಪುರ, ಹೆಚ್ಎಎಲ್, ಕಾಡುಗೋಡಿ, ವರ್ತೂರು ಸೇರಿದಂತೆ ವಿವಿಧೆಡೆ ಎಸಗಿದ್ದ 18 ಮನೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ: ಬೊಲೆರೋ ಕಳ್ಳತನ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಸಿಕ್ಕ ಚಾಲಾಕಿ: ಖದೀಮನಿಂದ 11 ಬೈಕ್ ವಶ - Theft Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.