ETV Bharat / state

ಕಿಡಿಗೇಡಿಗಳು ಹಾಸ್ಟೆಲ್‌ಗೆ ಎಸೆದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ: ರವಿ ಗಣಿಗ - MLA ravi ganiga

ಕುರುಬ ಸಂಘದ ಹಾಸ್ಟೆಲ್​ ಮೇಲೆ ಕಲ್ಲು ತೂರಿದ್ದು ತಪ್ಪು. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಶಾಸಕ ರವಿ ಗಣಿಗ ಹೇಳಿದ್ದಾರೆ.

statue-of-kanakadasa-will-built-from-pelted-stones-says-ravi-ganiga
ಕಿಡಿಗೇಡಿಗಳು ಹಾಸ್ಟೆಲ್ ಮೇಲೆ ತೂರಿದ್ದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ: ರವಿ ಗಣಿಗ
author img

By ETV Bharat Karnataka Team

Published : Feb 6, 2024, 5:24 PM IST

Updated : Feb 6, 2024, 5:34 PM IST

ಶಾಸಕ ರವಿ ಗಣಿಗ ಹೇಳಿಕೆ

ಮಂಡ್ಯ: ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸಿದ್ದ ಪಾದಯಾತ್ರೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದ ಕುರುಬ ಸಂಘದ ಹಾಸ್ಟೆಲ್​ಗೆ ಮಂಡ್ಯ ಶಾಸಕ ರವಿ ಗಣಿಗ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕುರುಬ ಸಂಘದ ಹಾಸ್ಟೆಲ್‌ಗೆ ಕಿಡಿಗೇಡಿಗಳು ಕಲ್ಲೆಸೆದಿದ್ದರು. ನಾನು ಏನಾಗಿದೆ ಎಂದು ಪರಿಶೀಲಿಸಲು ಇಂದು ಹಾಸ್ಟೆಲ್​ಗೆ ಭೇಟಿ ನೀಡಿದ್ದೇನೆ. ಈ ಹಾಸ್ಟೆಲ್​ನಲ್ಲಿ ಕುರುಬ ಸಮುದಾಯದ ವಿದ್ಯಾರ್ಥಿಗಳು ಮಾತ್ರ ಇಲ್ಲ. ಸರ್ವ ಜಾತಿ, ಧರ್ಮದ ವಿದ್ಯಾರ್ಥಿಗಳೂ ಇಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇಂತಹ ಹಾಸ್ಟೆಲ್​ಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ್ದರು. ಇದರಿಂದ ಹಾಸ್ಟೆಲ್​ನ 10ರಿಂದ 15 ಕಿಟಕಿ ಗ್ಲಾಸ್​ಗಳು ಪುಡಿಪುಡಿಯಾಗಿವೆ. ಕಲ್ಲು ವಿದ್ಯಾರ್ಥಿಗಳಿದ್ದ ರೂಂಗೆ ಬಂದು ಬಿದ್ದಿದ್ದವು. ಇದರಿಂದಾಗಿ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ವಿದ್ಯಾರ್ಥಿಗಳಿಗೆ ಸಮಾಧಾನ ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದರು.

"ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಿದ್ದು ತಪ್ಪು. ಇಷ್ಟೇ ಅಲ್ಲದೆ ಭಗವಾನ್​ ಶ್ರೀಕೃಷ್ಣ, ಕನಕದಾಸರಿಗೆ ದರ್ಶನ ಕೊಟ್ಟ ನಾಡು ಇದು. ಅಂತಹ ಕನಕದಾಸರ ಫ್ಲೆಕ್ಸ್​ಗೆ ಕಲ್ಲು ತೂರಿದ್ದಾರೆ ಎಂದರೆ ಇವರು ಎಂತಹ ಪಾಪಿಗಳಿರಬೇಕು. ಇದನ್ನು ನಾನು ಖಂಡಿಸುತ್ತೇನೆ. ಅವರು ತೂರಿದ್ದ ಕಲ್ಲುಗಳನ್ನು ಕುರುಬ ಸಂಘದವರು ಸಂಗ್ರಹಿಸಿಟ್ಟಿದ್ದಾರೆ. ಅವರು ತೂರಿದ್ದ ಕಲ್ಲುಗಳಿಂದಲೇ ಇಲ್ಲಿ ಕನಕದಾಸರ ಪ್ರತಿಮೆ ನಿರ್ಮಿಸುತ್ತೇವೆ" ಎಂದು ಅವರು ಹೇಳಿದರು.

ನಮ್ಮ ಪ್ರತಿಭಟನೆ ವಿರೋಧಿಸಲು ಬಿಜೆಪಿಯವರಿಗೇನು ಹಕ್ಕಿದೆ?-ಚಲುವರಾಯಸ್ವಾಮಿ: ಮತ್ತೊಂದೆಡೆ, ನಮ್ಮ ಪ್ರತಿಭಟನೆ ವಿರೋಧಿಸಲು ಬಿಜೆಪಿ ಅವರಿಗೆ ಏನು ಹಕ್ಕಿದೆ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು. ಶ್ರೀರಂಗಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರನ್ನು ಕೇಳಿಕೊಂಡು ನಾವು ನಮ್ಮ ಹಕ್ಕು ಕೇಳಬೇಕಾ?. ಬಿಜೆಪಿ ಅವರು ನಮ್ಮ ಯಜಮಾನರಾ? ನಮ್ಮ ಯಜಮಾನರು ರಾಜ್ಯದ ಜನರು. ಜನರು ಹೇಳಿದ್ದನ್ನು ನಾವು ಕೇಳಬೇಕೇ ಹೊರತು ಬಿಜೆಪಿ,‌ ಜೆಡಿಎಸ್ ಹೇಳಿದ್ದಲ್ಲ" ಎಂದರು.

"ಬರ ಪರಿಹಾರ ನೀಡದೇ ಇರುವುದನ್ನು ಪ್ರತಿಭಟಿಸಲು ನಾವು ದೆಹಲಿಗೆ ಹೋಗ್ತಿದ್ದೇವೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಆರ್ಥಿಕ ಸಹಕಾರ ನೀಡುತ್ತಿಲ್ಲ ಎಂದು‌ ಹೋರಾಟ ಮಾಡುತ್ತಿದ್ದೀವಿ. ನಾಚಿಕೆ ಇದ್ದರೆ ಬಿಜೆಪಿಯವರು ರಾಜಕೀಯ ಹೊರತಾಗಿ ಮಾತನಾಡಲಿ. ಅವರಿಗೆ ಅವರ ನಾಯಕರ ಬಗ್ಗೆ ಭಯ ಇದೆ, ಅದಕ್ಕೆ ಮಾತನಾಡುತ್ತಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ದಾಖಲೆ 100% ಸುಳ್ಳು. ನಮಗೆ ಶ್ವೇತಪತ್ರ ಹೊರಡಿಸುವಂತೆ ಹೇಳಲು ಅವರು ಯಾರು?. ಮುಂದೆ ಚುನಾವಣೆ ಇದೆ ಜನರು ಬುದ್ಧಿ ಕಲಿಸುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು 5 ವರ್ಷವೂ ಕೊಡುತ್ತೇವೆ. ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವಿ. ಬಿಜೆಪಿ ಸಂಸದರಿಗೆ ಪ್ರತಿಭಟನೆಗೆ ಬರುವುದಕ್ಕೆ ತಾಕತ್ ಇದೆಯೇ? ಎಂದರು.

ನಾಳೆ ಮಂಡ್ಯ ನಗರ ಬಂದ್ ಇಲ್ಲ:​ ಮಂಡ್ಯ ನಗರ ಬಂದ್​ಗೆ ನಾಳೆ ಸಮಾನ ಮನಸ್ಕರ ವೇದಿಕೆ ಮತ್ತು ಫೆ.9ಕ್ಕೆ ಭಜರಂಗದಳ ಕಾರ್ಯಕರ್ತರು ಕರೆ ಕೊಟ್ಟಿದ್ದರು. ಆದರೆ ಈ ವಿಚಾರವಾಗಿ ಮಧ್ಯಪ್ರವೇಶಿಸಿರುವ ಜಿಲ್ಲಾಡಳಿತ ಎರಡೂ ಕಡೆಯವರನ್ನು ಕರೆದು ಸಭೆ ನಡೆಸಿ ಬಂದ್ ಮಾಡದಂತೆ ಮನವಿ ಮಾಡಿದೆ. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ಸಮಾನಮನಸ್ಕರ ವೇದಿಕೆಯ ಕಾರ್ಯಕರ್ತರು ಬಂದ್ ವಾಪಸ್ ಪಡೆದಿದ್ದಾರೆ‌.

ಇದನ್ನೂ ಓದಿ: ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಹಸುಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಯತ್ನ

Last Updated : Feb 6, 2024, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.