ETV Bharat / state

ಎರ್ನಾಕುಲಂ -ಯಲಹಂಕ ನಡುವೆ ವಿಶೇಷ ರೈಲು ಸೇವೆ ರದ್ದು: ಬೆಳಗಾವಿ - ಧಾರವಾಡದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ - Special Trains - SPECIAL TRAINS

ಎರ್ನಾಕುಲಂ - ಯಲಹಂಕ ನಡುವೆ ವಿಶೇಷ ರೈಲು ಸೇವೆ ರದ್ದುಪಡಿಸಲಾದರೆ, ಬೆಳಗಾವಿ-ಧಾರವಾಡದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ.

SPECIAL TRAINS
ವಂದೇ ಭಾರತ್ ಎಕ್ಸ್‌ಪ್ರೆಸ್‌ (ETV Bharat)
author img

By ETV Bharat Karnataka Team

Published : Sep 24, 2024, 10:43 PM IST

ಹುಬ್ಬಳ್ಳಿ: ರೈಲು ಸಂಖ್ಯೆ 06101/06102 ಎರ್ನಾಕುಲಂ - ಯಲಹಂಕ - ಎರ್ನಾಕುಲಂ ಟ್ರೈ-ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲುಗಳ ಮೂರು ಟ್ರಿಪ್‌ಗಳನ್ನು ಪ್ರಯಾಣಿಕರ ಕೊರತೆಯ ಸಲುವಾಗಿ ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ರದ್ದಾದ ಟ್ರಿಪ್ ಗಳ ವಿವರ ಈ ಕೆಳಗಿನಂತಿವೆ:

ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಸೆಪ್ಟೆಂಬರ್ 25, 27 ಮತ್ತು 29, 2024 ರಂದು ಓಡಿಸಲು ಮೊದಲೇ ಸೂಚಿಸಲಾಗಿತ್ತು. ಈಗ ಅದನ್ನು ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲನ್ನು ಸೆಪ್ಟೆಂಬರ್ 26, 28 ಮತ್ತು 30, 2024 ರಂದು ಓಡಿಸಲು ಮೊದಲೇ ಸೂಚಿಸಲಾಗಿತ್ತು. ಇದನ್ನು ರದ್ದುಗೊಳಿಸಲಾಗಿದೆ.

ಬೆಳಗಾವಿ-ಧಾರವಾಡದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ: ರೈಲು ಸಂಖ್ಯೆ 20670 ಪುಣೆ-ಎಸ್ಎಸ್ಎಸ್ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ಅಕ್ಟೋಬರ್ 3 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ.

ಪರಿಷ್ಕೃತ ಸಮಯ: ಈ ರೈಲು ಬೆಳಗಾವಿಗೆ ರಾತ್ರಿ 8:35/8:40 ಗಂಟೆಯ ಬದಲು ರಾತ್ರಿ 8:15/8:20 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಧಾರವಾಡ ನಿಲ್ದಾಣಕ್ಕೆ ರಾತ್ರಿ 10:20/10:22 ಗಂಟೆಯ ಬದಲು ರಾತ್ರಿ 10:13/10:15 ಗಂಟೆಗೆ ಆಗಮಿಸಿ/ನಿರ್ಗಮಿಸುತ್ತದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 18 ರಿಂದ ಹುಬ್ಬಳ್ಳಿ- ಪುಣೆ ವಂದೇ ಭಾರತ್ ಸಂಚಾರ ಆರಂಭ: ದರ ಎಷ್ಟು ಗೊತ್ತಾ? - Vande Bharat ticket rate

ETV Bharat Logo

Copyright © 2025 Ushodaya Enterprises Pvt. Ltd., All Rights Reserved.