ETV Bharat / state

ಎರಡೂ ಪಕ್ಷದ ಸದಸ್ಯರಿಗೆ ಆತ್ಮಾವಲೋಕನದ ಪಾಠ ಮಾಡಿ, ಸದನ ಮುಂದೂಡಿದ ಸಭಾಪತಿ ಹೊರಟ್ಟಿ - SPEAKER BASAVARAJ HORATTI

ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷದ ಸದಸ್ಯರಿಗೆ ಆತ್ಮಾವಲೋಕನದ ಪಾಠ ಮಾಡಿ ಸದನ ಮುಂದೂಡಿದರು.

COUNCIL
ವಿಧಾನ ಪರಿಷತ್ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ನಡುವಿನ ಗಲಾಟೆಯಿಂದ 3 ಗಂಟೆಯ ಬಳಿಕ ಪುನಃ ಪರಿಷತ್ ಕಲಾಪ ಆರಂಭವಾಯಿತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಎರಡೂ ಪಕ್ಷಗಳ ಸದಸ್ಯರಿಗೆ ಆತ್ಮಾವಲೋಕನದ ಪಾಠ ಮಾಡಿದರು. ಕಲಾಪ ಮುಂದೂಡಿದ ನಂತರ ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಸದಸ್ಯರು ಹಿಗ್ಗಾಮುಗ್ಗಾ ಬೈದಾಡಿದ ಘಟನೆಯೂ ನಡೆಯಿತು.

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪ ಸುವರ್ಣ ವಿಧಾನಸೌಧದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಯಿತು. ಅಲ್ಲದೇ ಸಿ.ಟಿ.ರವಿ ಕಾರಿಗೆ ಮುತ್ತಿಗೆ ಹಾಕಿ, ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಲು ಕೂಡಾ ಮುಂದಾದರು.‌ ಇದರಿಂದ ದೊಡ್ಡ ಹೈಡ್ರಾಮಾವೇ ಸೃಷ್ಟಿಯಾಗಿತ್ತು. ಸಿ‌.ಟಿ.ರವಿ ಆಕ್ಷೇಪಾರ್ಹ ಹೇಳಿಕೆ‌ ನೀಡಿದ್ದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸದಸ್ಯರು ಸಭಾಪತಿಗಳ ಕೊಠಡಿಯಲ್ಲಿ ಸುಮಾರು ಗಂಟೆ ಕಾಲ ಸಭೆ ನಡೆಸಿದರು.

ಸಭಾಪತಿಗಳು ಎರಡೂ ಪಕ್ಷದ ಸದಸ್ಯರಿಗೆ ಆತ್ಮಾವಲೋಕನದ ಪಾಠ ಮಾಡಿ ಹೊರ ನಡೆದ ನಂತರ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಸದಸ್ಯರು ಮುಗಿಬಿದ್ದರು. ಸಿ.ಟಿ‌.ರವಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ಅರಿತ ಮಾರ್ಷಲ್​ಗಳು ಭದ್ರತೆಯಲ್ಲಿ ಸಿ.ಟಿ.ರವಿ ಅವರನ್ನು ಹೊರಗಡೆ ಕರೆದೊಯ್ದರು.

ಸಿ.ಟಿ.ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಕ್ರಿಮಿನಲ್ ಅಪರಾಧ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಎಂಎಲ್​ಸಿ ಎನ್.ರವಿಕುಮಾರ್ ಅವರು ಮಾತನಾಡಿದರು (ETV Bharat)

ಬಿಜೆಪಿ ಸದಸ್ಯ ಎನ್.ರವಿಕುಮಾರ್ ಮಾತನಾಡಿ, "ಪರಿಷತ್​ನಲ್ಲಿ ನಾನು ಸಿ.ಟಿ.ರವಿ ಅವರ ಪಕ್ಕದಲ್ಲೇ ಇದ್ದೆ. ಆ ರೀತಿ ಅವರು ಮಾತನಾಡಿಲ್ಲ. ಹಾಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಕಾಂಗ್ರೆಸ್ ಸೃಷ್ಟಿಯಾಗಿದ್ದು, ಜನರೇ ಇದಕ್ಕೆ ಉತ್ತರ‌ ನೀಡುತ್ತಾರೆ. ಕಾಂಗ್ರೆಸ್ ತಪ್ಪುಗಳ ಬಗ್ಗೆ ಸಿ.ಟಿ.ರವಿ ಖಾರವಾಗಿ ಖಂಡಿಸುತ್ತಿದ್ದರು.‌ ಆ ಹಿನ್ನೆಲೆಯಲ್ಲಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತದೆ. ಈ ರೀತಿ ಆಧಾರರಹಿತವಾಗಿ ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬೆಳಗಾವಿ: ಸುವರ್ಣಸೌಧದ ಕಾರಿಡಾರ್​ನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ - C T RAVI STATEMENT ROW

ETV Bharat Logo

Copyright © 2024 Ushodaya Enterprises Pvt. Ltd., All Rights Reserved.