ETV Bharat / state

ಮುಡಾ ಹಿಂದಿನ ಇಬ್ಬರು ಆಯುಕ್ತರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ: ಸ್ನೇಹಮಯಿ ಕೃಷ್ಣ - SNEHAMAYI KRISHNA

ಮುಡಾದ ಹಿಂದಿನ ಆಯುಕ್ತರಾದ ದಿನೇಶ್‌ ಕುಮಾರ್‌ ಹಾಗೂ ನಟೇಶ್‌ ಅವರು 50:50 ಅನುಪಾತದಲ್ಲಿ ಅಕ್ರಮವಾಗಿ 928 ಸೈಟ್​ಗಳನ್ನು ತಮಗೆ ಬೇಕಾದವರಿಗೆ ಹಂಚಿ ಲಾಭ ಪಡೆದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ದೂರಿದ್ದಾರೆ.

ಸ್ನೇಹಮಯಿ ಕೃಷ್ಣ
ಸ್ನೇಹಮಯಿ ಕೃಷ್ಣ (ETV Bharat)
author img

By ETV Bharat Karnataka Team

Published : Oct 28, 2024, 4:01 PM IST

ಮೈಸೂರು: 50:50ರ ಅನುಪಾತದ ನಿಯಮದ ಆಧಾರದಲ್ಲಿ ಅಕ್ರಮವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಿಂದಿನ ಇಬ್ಬರು ಆಯುಕ್ತರು ಬೇಕಾಬಿಟ್ಟಿಯಾಗಿ ನಿವೇಶನ ಹಂಚಿದ್ದಾರೆ. ಕೂಡಲೇ ಆ ಇಬ್ಬರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಡಾದ ಹಿಂದಿನ ಆಯುಕ್ತರಾದ ದಿನೇಶ್‌ ಕುಮಾರ್‌ ಹಾಗೂ ನಟೇಶ್‌ ಅವರು 50:50 ಅನುಪಾತದಲ್ಲಿ ಅಕ್ರಮವಾಗಿ 928 ಸೈಟ್​ಗಳನ್ನು ತಮಗೆ ಬೇಕಾದವರಿಗೆ ಹಂಚಿ ಲಾಭ ಪಡೆದಿದ್ದಾರೆ. ಜತೆಗೆ ಬಿಲ್ಡರ್‌ ಮಂಜುನಾಥ್‌, ಸಚಿವ ಮಹದೇವಪ್ಪ ಅಣ್ಣನ ಮಗ ನವೀನ್‌ ಬೋಸ್‌ ಹಾಗೂ ರಾಕೇಶ್‌ ಪಾಪಣ್ಣ ಸೇರಿದಂತೆ ಹಲವರಿಗೆ 50:50 ಅನುಪಾತದ ಆಧಾರದಲ್ಲಿ ಅಕ್ರಮವಾಗಿ ಸೈಟ್​ಗಳನ್ನು ಹಂಚಲಾಗಿದೆ" ಎಂದು ದೂರಿದರು.

ಸ್ನೇಹಮಯಿ ಕೃಷ್ಣ (ETV Bharat)

"ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಬೇಕು. ಜತೆಗೆ ಸಿದ್ದರಾಮಯ್ಯ ಪತ್ನಿ ಜಮೀನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸರ್ವೆ ನಂಬರ್‌ 464ರ 3.16 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಹೇಳುವ ದಾಖಲೆಗಳ ನೈಜತೆ ಬಗ್ಗೆ ವೈಜ್ಞಾನಿಕ ವರದಿ ಪಡೆದುಕೊಂಡು ತನಿಖೆ ನಡೆಸಬೇಕು. ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸುವವರನ್ನು ಬಂಧಿಸಬೇಕು ಎಂದು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗಿದೆ" ಎಂದು ತಿಳಿಸಿದರು.

"ಇಂದು ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಮಾಡಿರುವ ಬಿಲ್ಡರ್​ ಮಂಜುನಾಥ್​ಗೆ 50:50 ಅನುಪಾತದಲ್ಲಿ ಹಿಂದಿನ ಮುಡಾ ಆಯುಕ್ತ ದಿನೇಶ್‌ ಕುಮಾರ್‌ 40 ಸೈಟ್​ಗಳನ್ನು ಅಕ್ರಮವಾಗಿ ನೀಡಿದ್ದಾರೆ" ಎಂದು ಆರೋಪಿಸಿದರು.

ಇದನ್ನೂ ಓದಿ: ತಾಕತ್ತು ಧಮ್ಮು ಬಗ್ಗೆ ಯಾರಾದರು ಹೆಣ್ಣುಮಕ್ಕಳು ಮಾತಾಡುತ್ತಾರಾ: ಸಚಿವ ಬೈರತಿ ಸುರೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.