ETV Bharat / state

'ಈ ಬಾರಿಯಾದರೂ ಗೆಲ್ಲಿಸಿ': ಹಾಸನ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಕಣ್ಣೀರು - Anupama Mahesh

author img

By ETV Bharat Karnataka Team

Published : Apr 1, 2024, 10:36 PM IST

ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಇಂದು ಹಾಸನದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್
ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್
ಸೆರಗೊಡ್ಡಿ ಮಗನ ಪರ ಸ್ವಾಭಿಮಾನದ ಭಿಕ್ಷೆ ಬೇಡುತ್ತಾ ಕಣ್ಣೀರಿಟ್ಟ ಅನುಪಮಾ ಮಹೇಶ್

ಹಾಸನ: ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. 2008ರಿಂದ ಸಕ್ರಿಯವಾಗಿ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಈ ಬಾರಿಯಾದರೂ ಗೆಲ್ಲಿಸಿ ಎಂದು ಕಣ್ಣೀರಿಡುತ್ತಾ, ಸೆರಗೊಡ್ಡಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಮತ ಪ್ರಚಾರ ಮಾಡಿದರು.

ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ ಎನ್ನುವ ಮೂಲಕ ಪರೋಕ್ಷವಾಗಿ ದೇವೇಗೌಡರ ಕುಟುಂಬದ ಹೆಸರು ಹೇಳದೇ ಬೇಸರ ತೋಡಿಕೊಂಡರು. ಪಂಚಾಯಿತಿಯಿಂದ ಪ್ರಧಾನಿವರೆಗೂ ಅವರಿಗೆ ಅಧಿಕಾರ ನೀಡಿದ್ದೀರಿ. ನನಗಿರುವುದು ಒಬ್ಬನೇ ಮಗ. ಮೂರು ಚುನಾವಣೆಗಳಲ್ಲಿ ನಮ್ಮನ್ನು ಸೋಲಿಸಿದ್ದೀರಿ. ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಇಂದು ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಏ.26, ಮೇ 7ರಂದು ಸಾರ್ವತ್ರಿಕ ರಜೆ ಘೋಷಿಸಿ ಆದೇಶ - General Holiday For Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.