ದಾವಣಗೆರೆ: ಪೋಕ್ಸೊ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಇಂದು ಚಿತ್ರದುರ್ಗ ನ್ಯಾಯಾಲಯಕ್ಕೆ ಶರಣಾದರು. ಶರಣರಿಗೆ ರಾಜ್ಯ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಅಮಾನತ್ತಿನಲ್ಲಿಟ್ಟು ಸುಪ್ರೀಂ ಕೋರ್ಟ್ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಇದೇ ವೇಳೆ, ಒಂದು ವಾರದಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕು ಎಂದು ಸೂಚನೆ ನೀಡಿತ್ತು.
ಅದರಂತೆ, ದಾವಣಗೆರೆ ನಗರದಲ್ಲಿರುವ ಮುರುಘಾ ಮಠದ ಶಾಖಾ ಮಠದಿಂದ ತೆರಳಿದ ಶ್ರೀಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯ ನಂತರ ಪೊಲೀಸರು ಶ್ರೀಗಳನ್ನು ಕಾರಾಗೃಹಕ್ಕೆ ರವಾನಿಸಲಿದ್ದಾರೆ.
"ಪ್ರಕರಣದ ವಿಚಾರಣೆಯನ್ನು ನಾಲ್ಕು ತಿಂಗಳೊಳಗೆ ಮುಗಿಸಿ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಶ್ರೀಗಳು ಕೆಲವು ತಿಂಗಳ ಕಾಲ ಕಾರಾಗೃಹದಲ್ಲಿ ಇರಬೇಕಾಗುತ್ತದೆ" ಎಂದು ಅವರ ಪರ ವಕೀಲ ಪ್ರತಾಪ್ ಜೋಗಿ ತಿಳಿಸಿದರು.
ಇದನ್ನೂ ಓದಿ: ಮುರುಘಾ ಶರಣರ ಪೋಕ್ಸೊ ಪ್ರಕರಣ: ಹೈಕೋರ್ಟ್ನಿಂದ ಪಡೆದ ಜಾಮೀನು ಅಮಾನತ್ತಿನಲ್ಲಿಟ್ಟ ಸುಪ್ರೀಂ - Muruga Sharan POCSO case