ETV Bharat / state

ರಾಜ್ಯದ 13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ: 276 ಕ್ರಮಬದ್ಧ, 60 ತಿರಸ್ಕೃತ - Lok Sabha Elections - LOK SABHA ELECTIONS

ಲೋಕಸಭಾ ಚುನಾವಣೆಗೆ ಮೊದಲ ಹಂತದ ಕ್ಷೇತ್ರಗಳಿಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆದಿದೆ.

scrutiny-of-nomination-papers-submitted-for-lok-sabha-elections
13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ: 276 ಕ್ರಮಬದ್ಧ, 60 ತಿರಸ್ಕೃತ
author img

By ETV Bharat Karnataka Team

Published : Apr 6, 2024, 6:45 AM IST

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯ ತಡರಾತ್ರಿಯವರೆಗೆ ನಡೆದಿರುವ ಹಿನ್ನೆಲೆಯಲ್ಲಿ ಆ ಒಂದು ಕ್ಷೇತ್ರದ ಅಂತಿಮ ಉಮೇದುವಾರಿಕೆಯ ಸಂಖ್ಯೆ ತಿಳಿಯಬೇಕಿದೆ. ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳ ಪರಿಶೀಲನೆ ಕಾರ್ಯ ನಡೆದಿದೆ. ಏ.8ರಂದು ನಾಮಪತ್ರ ವಾಪಸ್‌ ಪಡೆಯಲು ಕಡೆಯ ದಿನವಾಗಿದೆ. ತದನಂತರ ಚುನಾವಣಾ ಅಖಾಡದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 34 ಅಭ್ಯರ್ಥಿಗಳು 49 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಇವರ ನಾಮಪತ್ರಗಳ ಪರಿಶೀಲನೆ ಕಾರ್ಯವು ತಡರಾತ್ರಿಯವರೆಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಮಾಹಿತಿಯು ತಡವಾಗಿ ಲಭ್ಯವಾಗಬೇಕಿದೆ. 358 ಅಭ್ಯರ್ಥಿಗಳು 492 ನಾಮಪತ್ರಗಳು ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 384 ನಾಮಪತ್ರಗಳು ಸ್ವೀಕೃತಗೊಂಡಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿದೆ. 276 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಕ್ಷೇತ್ರವಾರು ಮಾಹಿತಿ ಈ ಕೆಳಗಿನಂತಿದೆ.

  • ಉಡುಪಿ-ಚಿಕ್ಕಮಗಳೂರು: 13 ಅಭ್ಯರ್ಥಿಗಳು - 19 ಉಮೇದುವಾರಿಕೆ ಸಲ್ಲಿಕೆ - 10 ನಾಮಪತ್ರಗಳು ಕ್ರಮಬದ್ಧ - 4 ತಿರಸ್ಕೃತ
  • ಹಾಸನ: 21 ಅಭ್ಯರ್ಥಿಗಳು - 29 ನಾಮಪತ್ರ ಸಲ್ಲಿಕೆ - 18 ಕ್ರಮಬದ್ಧ - 3 ತಿರಸ್ಕೃತ
  • ದಕ್ಷಿಣ ಕನ್ನಡ: 11 ಅಭ್ಯರ್ಥಿಗಳು - 21 ನಾಮಪತ್ರ ಸಲ್ಲಿಕೆ - 10 ಕ್ರಮಬದ್ಧ - 2 ತಿರಸ್ಕೃತ
  • ಚಿತ್ರದುರ್ಗ: 28 ಅಭ್ಯರ್ಥಿಗಳು - 36 ನಾಮಪತ್ರ ಸಲ್ಲಿಕೆ - 24 ಕ್ರಮಬದ್ಧ - 4 ತಿರಸ್ಕೃತ
  • ತುಮಕೂರು: 22 ಅಭ್ಯರ್ಥಿಗಳು - 31 ಉಮೇದುವಾರಿಕೆ - 22 ಕ್ರಮಬದ್ಧ
  • ಮಂಡ್ಯ: 27 ಅಭ್ಯರ್ಥಿಗಳು - 37 ನಾಮಪತ್ರ ಸಲ್ಲಿಕೆ - 10 ತಿರಸ್ಕೃತ - 19 ಕ್ರಮಬದ್ಧ
  • ಮೈಸೂರು: 28 ಅಭ್ಯರ್ಥಿಗಳು - 37 ನಾಮಪತ್ರ ಸಲ್ಲಿಕೆ - 5 ತಿರಸ್ಕೃತ - 24 ಕ್ರಮಬದ್ಧ
  • ಚಾಮರಾಜನಗರ: 25 ಅಭ್ಯರ್ಥಿಗಳು - 36 ಉಮೇದುವಾರಿಕೆ - 22 ಕ್ರಮಬದ್ಧ - 5 ತಿರಸ್ಕೃತ
  • ಬೆಂಗಳೂರು ಗ್ರಾಮಾಂತರ: 31 ಅಭ್ಯರ್ಥಿಗಳು - 45 ನಾಮಪತ್ರ ಸಲ್ಲಿಕೆ - 7 ತಿರಸ್ಕೃತ - 27 ಕ್ರಮಬದ್ಧ
  • ಬೆಂಗಳೂರು ಉತ್ತರ: 25 ಅಭ್ಯರ್ಥಿಗಳು - 36 ನಾಮಪತ್ರ ಸಲ್ಲಿಕೆ - 6 ತಿರಸ್ಕೃತ - 21 ಕ್ರಮಬದ್ಧ
  • ಬೆಂಗಳೂರು ಕೇಂದ್ರ: 32 ಅಭ್ಯರ್ಥಿಗಳು - 40 ಉಮೇದುವಾರಿಕೆ ಸಲ್ಲಿಕೆ - 28 ಕ್ರಮಬದ್ಧ - 4 ತಿರಸ್ಕೃತ
  • ಚಿಕ್ಕಬಳ್ಳಾಪುರ: 36 ಅಭ್ಯರ್ಥಿಗಳು - 43 ನಾಮಪತ್ರ ಸಲ್ಲಿಕೆ - 4 ತಿರಸ್ಕೃತ - 32 ಕ್ರಮಬದ್ಧ
  • ಕೋಲಾರ: 25 ಅಭ್ಯರ್ಥಿಗಳು - 33 ಉಮೇದುವಾರಿಕೆ ಸಲ್ಲಿಕೆ - 6 ತಿರಸ್ಕೃತ - 19 ನಾಮಪತ್ರಗಳು ಕ್ರಮಬದ್ಧವಾಗಿವೆ.

ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆಗೆ ಗೃಹಲಕ್ಷ್ಮಿ ಯೋಜನೆಯ ಹಣ ದೇಣಿಗೆ ಕೊಟ್ಟ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.